Advertisement

Electoral Bond ವಿಪಕ್ಷಗಳಿಗೆ 14 ಸಾವಿರ ಕೋಟಿ ರೂ.: ಅಮಿತ್‌ ಶಾ

12:37 AM Mar 17, 2024 | Team Udayavani |

ಹೊಸದಿಲ್ಲಿ: ಚುನಾವಣ ಬಾಂಡ್‌ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಗೌರವಿ­ಸು­ತ್ತೇನೆ. ಕಪ್ಪುಹಣ ತಡೆಗಟ್ಟುವುದಕ್ಕಾಗಿ ಜಾರಿಗೆ ತರಲಾಗಿದ್ದ ಈ ವ್ಯವಸ್ಥೆಯನ್ನು ರದ್ದು ಗೊಳಿಸುವ ಬದಲಿಗೆ, ಸುಧಾ ರಿಸಬಹುದಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಟ್ಟು 2,000 ಕೋಟಿ ರೂ. ಬಾಂಡ್‌ಗಳ ಪೈಕಿ ಬಿಜೆಪಿ ಅಂದಾಜು 6,000 ಕೋಟಿ ರೂ. ಪಡೆದಿದೆ. ಉಳಿದ ಬಾಂಡ್‌ಗಳು ಎಲ್ಲಿ ಹೋದವು? 303 ಸಂಸದರಿದ್ದಾಗ್ಯೂ ನಮಗೆ 6000 ಕೋಟಿ ರೂ., ಉಳಿದವರು 242 ಸಂಸದರೊಂದಿಗೆ 14,000 ಕೋಟಿ ರೂ. ಪಡೆದಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next