Advertisement

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರವೇ ಚುನಾವಣೆ; ಲೆಫ್ಟಿನೆಂಟ್ ಗವರ್ನರ್

09:46 AM Nov 15, 2019 | Team Udayavani |

ಜಮ್ಮು: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರವೇ ಚುನಾವಣೆ ನಡೆಯಲಿದೆ ಎಂದು ಜಮ್ಮು-ಕಾಶ್ಮೀರ್ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ತಿಳಿಸಿದ್ದಾರೆ.

Advertisement

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಜಮ್ಮು ಪ್ರದೇಶದ ಟಾಲ್ವಾರದಲ್ಲಿ ಪಾಸಿಂಗ್ ಔಟ್ ಪೊಲೀಸ್ ಪರೇಡ್ ಅನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದರು.

ಚುನಾವಣೆ ಸಂಬಂಧಿ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿದೆ ಎಂದರು. ಇದೊಂದು ಲೋಕಸಭಾ ಚುನಾವಣೆ ರೀತಿಯೇ ನಡೆಯಲಿದೆ. ಜನರು ಕೂಡಾ ವಿಧಾನಸಭೆ ಚುನಾವಣೆ ಮಾದರಿಯಲ್ಲಿಯೇ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next