ತಾನೇ ಸ್ಥಾಪಿಸಿರುವ ಈ ರೈತ ಪರ ಸಂಸ್ಥೆ ಬಗ್ಗೆ ಸರಕಾರ ನಿರಾಸಕ್ತಿ ತೋರಿದೆ. ಒಂದೆಡೆ ಆಡಳಿತ ಮಂಡಳಿಯಿಲ್ಲದೆ, ಇನ್ನೊಂದೆಡೆ ಪೂರ್ಣಕಾಲಿಕ ಸಿಬಂದಿಯೂ ಇಲ್ಲದೆ ಎಪಿ ಎಂಸಿಗಳು ಸೊರಗುತ್ತಿವೆ.
Advertisement
ಅವಿಭಜಿತ ದ.ಕ. ಜಿಲ್ಲೆಯ 8 ತಾಲೂಕುಗಳಲ್ಲಿ ಎಪಿಎಂಸಿಗಳಿದ್ದು, ಯಾವುದಕ್ಕೂ ಆಡಳಿತ ಮಂಡಳಿ ಇಲ್ಲ. 5 ವರ್ಷಗಳ ಅವಧಿ ಮುಗಿದು ಒಂದರಿಂದ ಒಂದೂವರೆ ವರ್ಷ ಕಳೆ ದರೂ ಹೊಸ ಆಡಳಿತ ಮಂಡಳಿ ಆಯ್ಕೆಗೆ ಚುನಾವಣೆ ನಡೆದಿಲ್ಲ.
ಮಂಡಳಿ ಅವಧಿ ಮುಗಿದು 15 ತಿಂಗಳು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಗಳಲ್ಲಿ ತಲಾ 18 ತಿಂಗಳು, ಸುಳ್ಯ 14 ತಿಂಗಳು; ಉಡುಪಿ ಜಿಲ್ಲೆಯ ಉಡುಪಿ ಮತ್ತು ಕುಂದಾಪುರ ತಲಾ 19 ತಿಂಗಳು ಹಾಗೂ ಕಾರ್ಕಳ 18 ತಿಂಗಳುಗಳು ಕಳೆದಿವೆ. 126ರಲ್ಲಿ 24 ಮಂದಿ ಮಾತ್ರ!
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಪಿ ಎಂಸಿ ಗಳಿಗೆ ಮಂಜೂರಾದ 126 ಹುದ್ದೆ ಗಳಲ್ಲಿ ಪೂರ್ಣಕಾಲಿಕ ಸಿಬಂದಿ ಇರು ವುದು ಕೇವಲ 24. ಅಂದರೆ ಶೇ. 80.6ರಷ್ಟು ಹುದ್ದೆಗಳಿಗೆ ಪೂರ್ಣಕಾಲಿಕ ಸಿಬಂದಿ ಇಲ್ಲ. ಕೆಲವು ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ಸಿಬಂದಿಯನ್ನು ನೇಮಿಸ ಲಾಗಿದೆ.
Related Articles
– ಗಂಗಾಧರ ಸ್ವಾಮಿ ನಿರ್ದೇಶಕರು, ಕೇಂದ್ರ ಕಚೇರಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಂಗಳೂರು
Advertisement
ಕಿರಣ್ ಪ್ರಸಾದ್ ಕುಂಡಡ್ಕ