ಮೈಸೂರು: ವರುಣಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದಾಗಿ ಹೇಳುವ ಸಿದ್ದರಾಮಯ್ಯ ಈ ಹಿಂದಿನ ಚುನಾವಣೆಯ ಫಲಿತಾಂಶ ನೆನೆದು ಮೇ 13ರ ವರೆಗೆ ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಲಿ. ಅವರು ಭಾವನಾತ್ಮಕ ಹೇಳಿಕೆ ನೀಡು ತ್ತಿ ದ್ದಾರೆ ಎಂದರೆ ಸೋಲಿನ ಭಯ ಕಾಡುತ್ತಿದೆ ಎಂದು ಸಂಸದ ಪ್ರತಾಪ ಸಿಂಹ ಲೇವಡಿ ಮಾಡಿದರು.
ಕೆ.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ನೋಡಿದರೆ ಬಹಳ ನಗು ಬರುತ್ತದೆ. ಇನ್ನು 17 ವರ್ಷದ ಮೊಮ್ಮಗನ ಕರೆತಂದು ಪೂಜೆ ಪುನಸ್ಕಾರ ಮಾಡಿ ಭಾವನಾ ತ್ಮಕ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಬಿಜೆಪಿ ಅಭ್ಯ ರ್ಥಿಯ ಮೇಲೆ ನಿಮ್ಮ ಭಯ ಎಷ್ಟಿದೆ ಎಂಬುದು ಗೊತ್ತಾಗುತ್ತದೆ.
18 ವರ್ಷ ಪೂರೈಸದೆ ಚುನಾವಣೆಗೆ ಬರುವಂತೆಯೇ ಇಲ್ಲ. ಆದರೆ ಆತನೇ ಉತ್ತರಾಧಿಕಾರಿ ಎಂದು ಹೇಳಿ, ಆತನೊಂದಿಗೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವಾಗ ಅವರಿಗೆ ಈ ಹಿಂದೆ ಚಾಮುಂಡಿ ತಾಯಿಗೆ ಅವಮಾನ ಮಾಡಿದ್ದು ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಈಗ ಮಕ್ಕಳು, ಮರಿ ಮಕ್ಕಳು, ಪತ್ನಿಯನ್ನುಕರೆದುಕೊಂಡು ಹೋಗುವ ನೀವು ಕುಟುಂಬ ರಾಜಕಾರಣ ಕುರಿತು ಮಾತನಾಡುವ ನೈತಿಕತೆ ಏನಿದೆ? ಈ ನಿಮ್ಮ ತತ್ವ ಸಿದ್ಧಾಂತ ಸತ್ತು ಹೋಯಿತೆ ಎಂದು ಪ್ರಶ್ನಿ ಸಿದ ಅವರು, ಭಾವನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದರೆ ಸೋಲಿನ ಭಯ ಕಾಡುತ್ತಿದೆ ಎಂದು ಲೇವಡಿ ಮಾಡಿದರು.
2013ರಲ್ಲಿ ಸಿದ್ದರಾಮಯ್ಯ ಅವರು ಮೋಸದಿಂದ ಜಿ. ಪರಮೇಶ್ವರ್, ಖರ್ಗೆ, ಮುನಿಯಪ್ಪ ಅವರನ್ನು ಹೇಗೆ ಮುಗಿಸಿದರು ಎಂಬುದು ಮನವರಿಕೆ ಆಗಿದೆ. ಇದು ಅರಿತ ಬಳಿಕ ನಮಗೆ ದೊರೆತ ಉತ್ತಮ ಸ್ಪಂದನೆ ನೋಡಿದ್ದೇವೆ ಎಂದು ಹೇಳಿದರು.