Advertisement
ಏಪ್ರಿಲ್ ಮತ್ತು ಮೇನಲ್ಲಿ ನಿವೃತ್ತಿಯಾಗಲಿರುವವರ 58 ಸ್ಥಾನ ಭರ್ತಿ ಮಾಡಲು ಈ ಚುನಾವಣೆ ನಡೆಯಲಿದೆ. ಇದರ ಜತೆ ಕೇರಳದ ಒಂದು ಸ್ಥಾನಕ್ಕೆ ಉಪ ಚುನಾವಣೆಯೂ ನಡೆಯಲಿದೆ. ಕರ್ನಾಟಕದಿಂದ ಸ್ವತಂತ್ರ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿಯ ಆರ್. ರಾಮ ಕೃಷ್ಣ, ಬಸವ ರಾಜ ಪಾಟೀಲ್ ಸೇಡಂ ಮತ್ತು ಕಾಂಗ್ರೆಸ್‌ನ ರೆಹಮಾನ್ ಖಾನ್ ಏಪ್ರಿಲ್ 2 ರಂದು ನಿವೃತ್ತಿಯಾಗಲಿದ್ದಾರೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಕಾಂಗ್ರೆ ಸ್ ಎರಡು, ಬಿಜೆಪಿ ಒಂದು ಮತ್ತು ಇನ್ನೊಂದು ಸ್ಥಾನಕ್ಕೆ ಪ್ರಬಲವಾದ ಪೈಪೋಟಿ ಇದೆ. ಅಂದರೆ, ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಉಳಿಯುವ ಹೆಚ್ಚುವರಿ ಮತಗಳಿಂದ ಮತ್ತೂಬ್ಬರು ಆಯ್ಕೆಯಾಗಬಹುದಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಖಾಲಿಯಾಗುವ ಒಂದು ಸ್ಥಾನದ ಜತೆಗೆ ಮತ್ತೂಂದು ಸ್ಥಾನಗಳಿಸಿ ಕೊಂಡರೆ, ಬಿಜೆಪಿ ಖಾಲಿಯಾಗುವಎರಡರಲ್ಲಿ ಒಂದು ಸ್ಥಾನ ಕಳೆದುಕೊಳ್ಳಲಿದೆ. ಸದ್ಯ ಸ್ವತಂತ್ರ್ಯ ಸದಸ್ಯರಾಗಿರುವ ರಾಜೀವ್ ಚಂದ್ರ ಶೇಖರ್ ಅವರಿಂದ ತೆರವಾದ ಸ್ಥಾನಕ್ಕೆ ಯಾರು ಎಂಬ ಚರ್ಚೆ ಶುರುವಾಗಿದೆ. ವಿಶೇಷವೆಂದರೆ, ರಾಜ್ಯ ಸಭೆ ಚುನಾವಣೆ ಅಸೆಂಬ್ಲಿ ಚುನಾವಣೆಯ ಆಜು ಬಾಜಲ್ಲೇ ಬಂದಿರುವುದರಿಂದ ಅಡ್ಡ ಮತದಾನವಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಅಲ್ಲದೆ ಈ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಜೆಡಿಎಸ್‌ನಿಂದ ಆಚೆ ಕಾಲಿಟ್ಟಿರುವ ಶಾಸಕರು ಕಾಯುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
Related Articles
Advertisement
ರಾಜ್ಯದಲ್ಲಿ ಜಯದ ಲೆಕ್ಕಬೆಂಗಳೂರು: ಗೆಲುವಿಗಾಗಿ ಪ್ರತಿ ಅಭ್ಯರ್ಥಿಯು ಕನಿಷ್ಠ 45 ಮತ ಪಡೆಯಬೇಕು. ಹೀಗಾಗಿ, ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ 2 ಹಾಗೂ ಬಿಜೆಪಿಗೆ ಒಂದು ಸ್ಥಾನ ಸುಲಭವಾಗಿ ದಕ್ಕಲಿದೆ. ಜೆಡಿಎಸ್ ಸಂಖ್ಯಾಬಲ 30 ಹೊಂದಿದ್ದರೂ ಇನ್ನೂ 15 ಮತ ಗಳವರೆಗೂ ಹೊಂಚ ಬೇಕು. ಹೀಗಾಗಿ, ಮೂರನೇ ಸ್ಥಾನ ಸಹ ಕಾಂಗ್ರೆಸ್ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಕಾಂಗ್ರೆಸ್‌ನಲ್ಲಿ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದು, ರೆಹಮಾನ್‌ಖಾನ್ ಮತ್ತೂಂದು ಅವಧಿ ಕೇಳಿದ್ದಾರೆ. ಇವರ ಜತೆ ಜಾಫರ್ ಷರೀಫ್, ನಸೀರ್ ಅಹಮದ್ ಸಹ
ಆಕಾಂಕ್ಷಿಗಳಾಗಿದ್ದಾರೆ. ವಕ್ಕಲಿಗ ಸಮುದಾಯದಿಂದ ಬಿ.ಎಲ್.ಶಂಕರ್, ಹಿಂದುಳಿದ ವರ್ಗಗಳಿಂದ ವಿ.ಆರ್. ಸುದರ್ಶನ್, ಮಾಜಿ ಮೇಯರ್ ರಾಮ ಚಂದ್ರಪ್ಪ, ಮಹಿಳಾ ಕೋಟದಿಂದ ಡಿ.ಕೆ. ತಾರಾ ದೇವಿ, ಲಕ್ಷ್ಮೀ ಹೆಬ್ಟಾ ಳ್ಕರ್ ಕೂಡ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಮಾಜಿ ಸಂಸದ ವಿಜಯಸಂಕೇಶ್ವರ ಮತ್ತು ರಾಜೀವ್ ಚಂದ್ರಶೇಖರ್ ಆಕಾಂಕ್ಷಿಗಳಾಗಿದ್ದಾರೆ. ವಿಜಯ ಸಂಕೇಶ್ವರ್ ಅವರನ್ನು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿಸಿ, ರಾಜೀವ್‌ಚಂದ್ರಶೇಖರ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಜೆಡಿಎಸ್ ಬೆಂಬಲ ಪಡೆಯುವುದರ ಜತೆಗೆ ಎರಡನೇ ಪ್ರಾಶಸ್ತ್ಯ ಮತ ಕೊಡಿಸುವ ಬಗ್ಗೆಯೂ ಚರ್ಚೆಗಳು ಆರಂಭವಾಗಿದೆ ಎಂದ ಹೇಳಲಾಗಿದೆ. ಲಿಂಗಾಯಿತ ಪ್ರತ್ಯೇಕ ಧರ್ಮ ವಿವಾದ ಹಿನ್ನೆಲೆಯಲ್ಲಿ ಲಿಂಗಾಯಿತರಿಗೆ ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಬಿಜೆಪಿಯಿಂದ ಅವಕಾಶ ಕಲ್ಪಿಸಬೇಕು ಎಂಬ ಚಿಂತನೆಯಿದೆ. ಇದೀಗ ನಿವೃತ್ತಿಯಾಗುತ್ತಿರುವು ದು ಲಿಂಗಾಯಿತ ಸಮುದಾಯದ ಹಾಗೂ ಉತ್ತರ ಕರ್ನಾಟಕ ಭಾಗದವೇ ಆಗಿದ್ದಾರೆ. ಅಂತಿಮವಾಗಿ ಜೆಡಿಎಸ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಅಧಿಕೃತ ಅಭ್ಯರ್ಥಿ ಯಾರು ಎಂಬುದರ ತೀರ್ಮಾನವಾಗಲಿ ದೆ ಎನ್ನಲಾಗಿದೆ. ಮತ್ತೂಂದೆಡೆ ಜೆಡಿಎಸ್ ಸಹ ಒಂದು ಸ್ಥಾನ ಪಡೆಯಲು ಸಾಧ್ಯವೇ ಎಂಬ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದೆ. 40 ಮತ ಪಡೆದರೆ
ಒಂದು ಸ್ಥಾನ ಗೆಲ್ಲಬಹುದು ಎಂದಾದರೆ ಪಕ್ಷೇತರ ಸದಸ್ಯರ ಬೆಂಬಲದಿಂದ ಒಂದು ಸ್ಥಾನ ಗಳಿಸಬಹುದೇ ಎಂಬ ಬಗ್ಗೆಯೂ ಚರ್ಚೆಗಳು
ನಡೆದಿವೆ. ಜೆಡಿಎಸ್ ವತಿಯಿಂದ ಬಿ.ಎಂ.ಫರೂಕ್ ಅವರನ್ನೇ ಮತ್ತೂಮ್ಮೆ ಅಥವಾ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ
ಡ್ಯಾನಿಶ್ ಆಲಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿ ದೆ ಎಂದು ಹೇಳಲಾಗಿದೆ.