Advertisement
“ಲಸಿಕೆ ನೀಡುವಿಕೆ ಕಾರ್ಯಕ್ರಮವನ್ನು ಒಂದು ಸೂತ್ರದಲ್ಲಿ ಪರಿಶೀಲಿಸಲು ಡ್ರೈರನ್ ಅನುಕೂಲ ಕಲ್ಪಿಸಲಿದೆ. ಚುನಾವಣೆ ಮಾದರಿಯಲ್ಲಿ ಈ ಸಿದ್ಧತೆಗಳನ್ನು ನಡೆಸಿದ್ದೇವೆ. ಅಲ್ಲೂ ಪ್ರತಿ ಸಿಬ್ಬಂದಿಗೆ ತರಬೇತಿ ನೀಡಿದಂತೆ ಇಲ್ಲಿಯೂ ಎಲ್ಲ ವೈದ್ಯಕೀಯ ತಂಡಗಳನ್ನು ತರಬೇತಿಗೊಳಿಸಿ, ಹೊಣೆ ವಹಿಸಲಾಗುತ್ತದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ವಿವರಿಸಿದ್ದಾರೆ.
Related Articles
ರೂಪಾಂತರಿ ಕೊರೊನಾ ಭಯದಿಂದ ಸ್ಥಗಿತಗೊಂಡಿದ್ದ ಭಾರತ- ಇಂಗ್ಲೆಂಡ್ ನಡುವಿನ ವಿಮಾನ ಸಂಚಾರ ಜ.8ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜ.8ರಿಂದ 23ರವರೆಗೆ ಪ್ರತಿವಾರಕ್ಕೆ 15 ವಿಮಾನಗಳು ಮಾತ್ರ ಉಭಯ ರಾಷ್ಟ್ರಗಳ ನಡುವೆ ಪ್ರಯಾಣಿಕರನ್ನು ಒಯ್ಯಲಿವೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌ನಿಂದ ಇಂಗ್ಲೆಂಡ್‌ಗೆ ವಿಮಾನಗಳು ಹಾರಾಡಲಿವೆ ಎಂದಿದ್ದಾರೆ.
Advertisement
7.5 ಕೋಟಿ ಲಸಿಕೆ ಸಿದ್ಧಸೀರಮ್ ಸಂಸ್ಥೆಯ ಪ್ರಕಾರ, ಈಗಾಗಲೇ 7.5 ಕೋಟಿ ಲಸಿಕೆಗಳನ್ನು ಸಿದ್ಧಪಡಿಸಿ ಸಂಗ್ರಹಾರದಲ್ಲಿ ಇರಿಸಿಕೊಳ್ಳಲಾಗಿದೆ. ಜನವರಿ ಮೊದಲ ವಾರದ ಅಂತ್ಯದ ವೇಳೆಗೆ 10 ಕೋಟಿ ಡೋಸ್ ಲಸಿಕೆಗಳು ಸಿದ್ಧವಾಗಲಿವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆರಂಭದಲ್ಲಿ ಕೇವಲ ಭಾರತದಲ್ಲಿ ಮಾತ್ರ ಕೋವಿಶೀಲ್ಡ್ ಲಸಿಕೆಯನ್ನು ವಿತರಣೆ ಮಾಡಲಿದ್ದೇವೆ. ಭಾರತದಲ್ಲಿ 30 ಕೋಟಿ ಮಂದಿಗೆ ಲಸಿಕೆ ಬೇಕಾಗಿದೆ. ನಂತರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಯಡಿಯಲ್ಲಿ ಕೋವ್ಯಾಕ್ಸ್ ವಿತರಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದ್ದಾರೆ. ನಾಲ್ವರಿಗೆ ಹೊಸ ಕೊರೊನಾ!
ಭಾರತದಲ್ಲಿ ಶುಕ್ರವಾರ ನಾಲ್ವರಿಗೆ ರೂಪಾಂತರಿ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಹೊಸ ರೂಪದ ಸೋಂಕಿತರ ಒಟ್ಟು ಸಂಖ್ಯೆ 29ಕ್ಕೆ ಏರಿದೆ. ಪ್ರಸ್ತುತ ವಿಶ್ವದಾದ್ಯಂತ ಇಂಗ್ಲೆಂಡ್, ದ. ಆಫ್ರಿಕಗಳಲ್ಲದೆ ಡೆನ್ಮಾರ್ಕ್, ನೆದರ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ಕೆನಡಾ, ಜಪಾನ್, ಲೆಬನಾನ್, ಸಿಂಗಾಪುರಕ್ಕೆ ಕೊರೊನಾ ಹೊಸ ತಳಿ ಕಾಲಿಟ್ಟಿದೆ. 20 ಸಾವಿರ ಕೇಸ್!: ಈ ನಡುವೆ ದೇಶದಲ್ಲಿ ಶುಕ್ರವಾರ 20,035 ಮಂದಿಗೆ ಕೊರೊನಾ ಪಾಸಿಟಿವ್ ತಗುಲಿದೆ. 256 ಮಂದಿ ಸೋಂಕಿನಿಂದ ಜೀವತೆತ್ತಿದ್ದಾರೆ. ಧಾರಾವಿ ಸ್ಲಂನಲ್ಲಿ ಮತ್ತೆ ಇಬ್ಬರಿಗೆ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣ ಸಂಖ್ಯೆ 19ಕ್ಕೆ ಏರಿದೆ. ಕೇರಳ ಚುರುಕಾಯ್ತು!
ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡುವಿಕೆಗೆ ಕೇರಳ ಎಲ್ಲ ತಯಾರಿ ಪೂರ್ಣಗೊಳಿಸಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಜ.5ರಿಂದ ಅರ್ಧದಷ್ಟು ಆಸನ ಸಾಮರ್ಥ್ಯದೊಂದಿಗೆ ಸಿನಿಮಾ ಮಂದಿರ ತೆರೆಯಲು ಒಪ್ಪಿಗೆ.
ಹಬ್ಬಗಳ ಹಿನ್ನೆಲೆಯಲ್ಲಿ ಅಲ್ಪ ಭಕ್ತರ ಉಪಸ್ಥಿತಿಯಲ್ಲಿ ಮಂದಿರಗಳಲ್ಲಿನ ಪೂಜೆಗೆ ಅವಕಾಶ ಕಲ್ಪಿಸಲು ಕೇರಳ ಚಿಂತನೆ. 83 ಕೋಟಿ ಸಿರಿಂಜ್ ಖರೀದಿಗೆ ಕೇಂದ್ರ ಸಿದ್ಧತೆ
2200 ಮಾಸ್ಟರ್ ಟ್ರೈನರ್‌ಗಳಿಂದ ವೈದ್ಯಸಿಬ್ಬಂದಿಗೆ ತರಬೇತಿ
700 ಜಿಲ್ಲೆಗಳಲ್ಲಿ ಟ್ರೈನಿಂಗ್ ಪ್ರಗತಿಯಲ್ಲಿದೆ
35 ಕೋಟಿ. ಸಿರಿಂಜ್ ಹೆಚ್ಚುವರಿ ಖರೀದಿಗೆ ಚಿಂತನೆ