ತೀರ್ಥಹಳ್ಳಿ : ಈ ಬಾರಿಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಎ. 13 ರಿಂದ ನಾಮಪತ್ರ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಇರಲಿದ್ದು ಎ .20 ರಂದು ನಾಮಪತ್ರ ಸಲ್ಲಿಸಲು ಕೊನೆಯ ಅವಕಾಶ ಇರಲಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಆಗಿರುವ ಅಮೃತ್ ಅತ್ರೇಶ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು
ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಇರುತ್ತದೆ. ನಾಮಪತ್ರ ವಾಪಾಸ್ ಪಡೆಯಲು 24 ಕ್ಕೆ ಕೊನೆ ದಿನ ಆಗಿರಲಿದೆ ಮತ್ತು ತಾಲೂಕು ಕಚೇರಿಯ ಆವರಣದ ಸುತ್ತ ಮುತ್ತ 100 ಮೀಟರ್ ಒಳಗೆ ವಾಹನವನ್ನು ನಿಷೇಧಿಸಲಾಗಿರುತ್ತದೆ ಎಂದರು.
ಇನ್ನು ಚುನಾವಣೆಗೆ ನಾಮಪತ್ರ ಸಲ್ಲಿಸಲು ಬರುವುದಕ್ಕೆ ಅಭ್ಯರ್ಥಿ ಮತ್ತು ನಾಲ್ವರಿಗೆ ಒಳಗೆ ಬರಲು ಅವಕಾಶ ಇರಲಿದ್ದು ಅವರಿಗೆ ಮಾತ್ರ ವಾಹನ ಆವರಣದ ಒಳ ತರಲು ಅವಕಾಶ ಇರಲಿದೆ. ಇನ್ನು ಚುನಾವಣೆಯ ನಾಮಪತ್ರ ವಾಪಾಸ್ ಪಡೆಯುವವರೆಗೂ ಯಾವುದೇ ರೀತಿಯಲ್ಲಿ ಏನಾದರು ತಕರಾರು ಬಂದಲ್ಲಿ ಪ್ರತಿ ದಿನ ಪ್ರತಿ ವಿಷಯವನ್ನು ನೋಟಿಸ್ ಬೋರ್ಡ್ ಗೆ ಹಾಕಲಾಗುವುದು ಎಂದರು.
ಇನ್ನು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಓರ್ವ ಪತ್ರಕರ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹಾಗೂ
ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನ ಮಧ್ಯಾಹ್ನ 3 ರ ನಂತರ ಯಾರೇ ಬಂದರು ಅವರು ನಾಮಪತ್ರ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದರು.
ಪಕ್ಷದ ಸ್ಟಿಕ್ಕರ್ ಗಳನ್ನು ವಾಹನಗಳಲ್ಲಿ ಬಳಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರೆಶ್ನೆಗೆ ಉತ್ತರಿಸಿದ ಅವರು ಈಗಾಗಲೇ ನೀತಿ ಸಂಹಿತೆ ಶುರುವಾದಗಿನಿಂದ ಮೂರು ದಿನದ ಒಳಗೆ ತೆಗೆಸಿದ್ದೇವೆ. ಹಾಗೇನಾದರೂ ವಾಹನಗಳಲ್ಲಿ ಇದ್ದರೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದರೆ ತೆಗೆಸುತ್ತಾರೆ ಮತ್ತು ವಾಹನ ಗಳಲ್ಲಿ ಸ್ಟಿಕರ್ ಹಾಕಲು ಅನುಮತಿ ಪಡೆದಿದ್ದರೆ ಬಳಸಬಹುದು ಎಂದರು.