ಮಹಾಲಿಂಗಪುರ : ಶುಕ್ರವಾರ ಜರುಗಿದ ಮಹಾಲಿಂಗಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು, ಊರ ಗೌಡರಾದ ಯಲ್ಲನಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಶ್ರೀಮತಿ ಶೀಲಾ ರಾಜೇಶ ಭಾವಿಕಟ್ಟಿ ಅವಿರೋಧ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷವು ಮತ್ತೇ ಸ್ಥಳೀಯ ಸಂಸ್ಥೆಯ ಅಧಿಕಾರ ಗದ್ದುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಶುಕ್ರವಾರ ಮುಂಜಾನೆ 10 ರಿಂದ 11 ರವರಗೆ ಇದ್ದ ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಯಲ್ಲನಗೌಡ ಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಶೀಲಾ ರಾಜೇಶ ಭಾವಿಕಟ್ಟಿ ಸೇರಿದಂತೆ ಉಭಯ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ಮಧ್ಯಾಹ್ನ 1 ಗಂಟೆಗೆ ಜರುಗಿದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಗಿರೀಶ ಸ್ವಾದಿ ಅವರು ನಾಮಪತ್ರಗಳನ್ನು ಪರಿಶೀಲಿಸಿ, ಉಭಯ ಸ್ಥಾನಗಳಿಗೆ ತಲಾ ಒಂದೊಂದೆ ನಾಮಪತ್ರಗಳು ಸಲ್ಲಿಕೆಯಾದ್ದರಿಂದ ಮಹಾಲಿಂಗಪುರ ಪುರಸಭೆಯ ನೂತನ ಅಧ್ಯಕ್ಷರಾಗಿ ಯಲ್ಲನಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಶ್ರೀಮತಿ ಶೀಲಾ ರಾಜೇಶ ಭಾವಿಕಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಆಯ್ಕೆಯ ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿಯ ಬಂಡಾಯ ಸದಸ್ಯೆಯರಾದ ಗೋಧಾವರಿ ಬಾಟ, ಚಾಂದನಿ ನಾಯಕ, ಸವಿತಾ ಹುರಕಡ್ಲಿ, ಪಕ್ಷೇತರ ಅಭ್ಯರ್ಥಿ ಸಜನಸಾಬ ಪೆಂಡಾರಿ ಸೇರಿದಂತೆ ಕಾಂಗ್ರೆಸ್ ಸದಸ್ಯರಾದ ಭಾವನಾ ಪಾಟೀಲ್, ಮುಸ್ತಾಕ ಚಿಕ್ಕೋಡಿ, ಬಲವಂತಗೌಡ ಪಾಟೀಲ್, ಅಬ್ದುಲ್ ರಜಾಕ್ ಬಾಗವಾನ ರಾಜು ಗೌಡಪ್ಪಗೋಳ, ಬಸವರಾಜ ಬುರುಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರು ಇದ್ದರು.
ವಿಜಯೋತ್ಸವ : ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ, ಡಾ.ಎ.ಆರ್.ಬೆಳಗಲಿ, ಬಸವರಾಜ ರಾಯರ, ವಿಜುಗೌಡ ಪಾಟೀಲ್, ಮಹಾಲಿಂಗಪ್ಪ ತಟ್ಟಿಮನಿ, ಮಲ್ಲಪ್ಪ ಸಿಂಗಾಡಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ, ತೆರದ ವಾಹನದಲ್ಲಿ ಮೆರವಣಿಗೆ ನಡೆಸಿ, ಗುಲಾಲ ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.