ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಹಿಮ್ಮುಖವಾಗುತ್ತಿದ್ದಂತೆ ನಗರಸಭೆ ಚುನಾವಣೆಯ ಕಾವು ಕಾಫಿ ನಾಡಿನಲ್ಲಿ ಗರಿಗೆದರಿದೆ.
ನಗರಸಭೆ ಚುನಾವಣೆನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿದ್ದು,ಭಾರೀ ಪ್ರಮಾಣದ ನಾಮಪತ್ರ ಸಲ್ಲಿಕೆಯಾಗಿದೆ.ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಂದಸ್ಪರ್ಧಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು,ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತುಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾಧಿ ಕಾರಿಗೆನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಭರಾಟೆಜೋರಾಗಿದ್ದು, ಕಾಂಗ್ರೆಸ್, ಬಿಜೆಪಿ, ಆಪ್, ಸಿಪಿಐಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳುಕಾರ್ಯಕರ್ತರ ಪಡೆಯೊಂದಿಗೆ ವಾದ್ಯ ಗೋಷ್ಠಿಗಳೊಂದಿಗೆಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಕಡೆಯ ದಿನವಾದ ಹಿನ್ನೆಲೆಯಲ್ಲಿನಗರದ ಬೇಲೂರು ರಸ್ತೆಯ ತಾಲೂಕು ಪಂಚಾಯತ್‌ಕಚೇರಿ ಹಾಗೂ ನಗರಸಭೆ ಕಚೇರಿಯಲ್ಲಿ ಸುತ್ತಮುತ್ತ ಜನಸಾಗರವೇ ನೆರೆದಿತ್ತು. ಬ್ಯಾಂಡ್‌ಸೆಟ್, ಡೊಳ್ಳುವಾದ್ಯಗಳಅಬ್ಬರದಲ್ಲಿ ತಂಡೋಪ ತಂಡವಾಗಿ ಆಗಮಿಸಿದ್ದರಿಂದಈ ರಸ್ತೆಗಳಲ್ಲಿ ಕೆಲಹೊತ್ತು ವಾಹನ ಸಂಚಾರಕ್ಕೂಅಡ್ಡಿಯಾಗಿತ್ತು.ಬಿಜೆಪಿ 35 ವಾರ್ಡ್‌ಗಳಲ್ಲಿ 33 ವಾರ್ಡ್‌ಗಳಲ್ಲಿಅಭ್ಯರ್ಥಿಗಳನ್ನು ನಿಲ್ಲಿಸಿದ್ದು 2 ವಾರ್ಡ್‌ಗಳಲ್ಲಿ ಪಕ್ಷೇತರಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದೆ.
ಕಾಂಗ್ರೆಸ್ 33 ವಾಡ್ìಗಳ್ಳಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 2 ವಾಡ್ìಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ.ಜೆಡಿಎಸ್ 12 ವಾಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು,3 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲಸೂಚಿಸಿದೆ. ಆಮ್‌ಆದ್ಮಿ 7 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನುನಿಲ್ಲಿಸಿದೆ. ಎಸ್‌ಡಿಪಿಐ 6 ವಾರ್ಡ್, ಸಿಪಿಐ 2 ವಾರ್ಡ್‌ಗಳಲ್ಲಿ,ಬಿಎಸ್ಪಿ 6 ವಾರ್ಡ್‌ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನುಕಣಕ್ಕಿಳಿಸಿದೆ.
ನಗರಸಭೆ ಚುನಾವಣೆ ಮೀಸಲಾತಿ ಸಂಬಂಧ ಮೂರುವರ್ಷಗಳಿಂದ ಚುನಾವಣೆ ನಡೆಯದೆ ಆಡಳಿತಾ ಧಿಕಾರಿಹಿಡಿತದಲ್ಲಿತ್ತು. ನ್ಯಾಯಾಲಯದ ಆದೇಶದ ಮೇರೆಗೆಚುನಾವಣೆ ನಡೆಯುತ್ತಿದ್ದು, ಚುನಾವಣೆ ದಿನದಿಂದ ದಿನಕ್ಕೆರಂಗು ಪಡೆಯುತ್ತಿದೆ.ನಗರಸಭೆ ಚುನಾವಣಾ ಕಣದಲ್ಲಿ ಆಡಳಿತ ಪಕ್ಷ ಬಿಜೆಪಿಗೆಪ್ರತಿಷ್ಟೆಯ ಚುನಾವಣೆಯಾಗಿದ್ದರೇ, ಕಾಂಗ್ರೆಸ್ ಹಾಗೂಜೆಡಿಎಸ್ ಪಕ್ಷಗಳಿಗೆ ಮುಂದಿನ ತಾಪಂ, ಜಿಪಂ, ವಿಧಾನಸಭೆಚುನಾವಣೆಗೆ ಈ ಚುನಾವಣೆ ದಿಕ್ಸೂಚಿ ಆಗಿದ್ದು, ಪ್ರತಿಷ್ಟೆಯಕಣವಾಗಿ ಪರಿಗಣಿಸಿದ್ದು ಚುನಾವಣೆ ರಂಗೇರುತ್ತಿದೆ.
ಸಾಲು ಸಾಲು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ: ನಗರಸಭೆಚುನಾವಣೆ ಆಕಾಂಕ್ಷಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿದ್ದು,ಪಕ್ಷದಿಂದ ಟಿಕೆಟ್ ವಂಚಿತರಾದವರು ಪಕ್ಷೇತರವಾಗಿಸ್ಪರ್ಧಿಸಲು ಮುಂದಾಗಿದ್ದರಿಂದ ಪಕ್ಷೇತರ ಅಭ್ಯರ್ಥಿಗಳಸಂಖ್ಯೆಯೂ ಭಾರೀ ಪ್ರಮಾಣದಲ್ಲಿದೆ. ಇನ್ನೂ ರಾಜಕೀಯಪಕ್ಷಗಳು ಗೆಲುವು ಅಸಾಧ್ಯ ಎಂದು ಕಂಡುಬಂದ ವಾಡ್ìಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ನಿಲ್ಲಿಸಿ ಬೆಂಬಲಸೂಚಿಸಿದೆ. ಒಟ್ಟಾರೆ ಚಿಕ್ಕಮಗಳೂರು ನಗರಸಭೆಗೆ ಮೂರುವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದ್ದು ಭಾರೀಜಿದ್ದಾಜಿದ್ದಿನ ಕಣವಾಗಿ ಮಾರ್ಪಡುತ್ತಿದೆ.