Advertisement

ಮತ ಮರು ಎಣಿಕೆಗೆ ಪಟ್ಟು; ಕಾಂಗ್ರೆಸ್‌ ಪ್ರತಿಭಟನೆ

07:10 PM Dec 15, 2021 | Team Udayavani |

ಚಿಕ್ಕಮಗಳೂರು: ವಿಧಾನ ಪರಿಷತ್‌ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎ.ವಿ.ಗಾಯತ್ರಿ ಶಾಂತೇಗೌಡ ಕೇವಲ 6 ಮತಗಳಅಂತರದಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಮರುಮತ ಎಣಿಕೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್‌ಮುಖಂಡರು ಮತ್ತು ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಎದುರು 1 ಗಂಟೆಗೂ ಹೆಚ್ಚು ಕಾಲಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಎಸ್‌ಟಿಜೆಕಾಲೇಜು ಆವರಣದಲ್ಲಿ ಮತ ಎಣಿಕೆ ಕಾರ್ಯನಡೆಸಲಾಯಿತು. ಮಧ್ಯಾಹ್ನ 1ಗಂಟೆ ಹೊತ್ತಿಗೆಮತ ಎಣಿಕೆ ಕಾರ್ಯ ಪೂರ್ಣಗೊಂಡಿತು. ಬಿಜೆಪಿಅಭ್ಯರ್ಥಿ 1,188 ಮತಗಳನ್ನು ಪಡೆದರೆ, ಕಾಂಗ್ರೆಸ್‌ಅಭ್ಯರ್ಥಿ 1,182 ಮತಗಳನ್ನು ಪಡೆದು 6 ಮತಗಳ ಅಂತರದಲ್ಲಿ ಸೋಲು ಕಂಡರು.6 ಮತಗಳ ಅಂತರದಲ್ಲಿ ಸೋಲು ಕಂಡಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಮತ್ತುಕಾಂಗ್ರೆಸ್‌ ಮುಖಂಡರು ಅಸಿಂಧು ಮತಗಳಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತ ಎಣಿಕೆನಡೆಸುವಂತೆ ಆಗ್ರಹಿಸಿ ಜಿಲ್ಲಾ ಚುನಾವಣಾ ಧಿಕಾರಿಗೆ ಮನವಿ ಮಾಡಿದರು.

Advertisement

ಗೆಲುವಿನ ಅಂತರದ ಮತಗಳ ಸಂಖ್ಯೆಯೂನಾಮಿನಿ ಸದಸ್ಯರ ಮತಗಳಿಗಿಂತ ಕಡಿಮೆ ಇದ್ದು,ಇಂತಹ ಸಂದರ್ಭದಲ್ಲಿ ಫಲಿತಾಂಶ ಘೋಷಣೆಮಾಡಬಾರದು ಎಂದು ನ್ಯಾಯಾಲಯ ತಿಳಿಸಿದ್ದು,ಈ ಸಂಬಂಧ ನ್ಯಾಯಾಲಯದಲ್ಲಿ ಪಿಟಿಶನ್‌ ಇದೆ.ಆದ್ದರಿಂದ ಮರು ಮತ ಎಣಿಕೆ ಮಾಡಬೇಕೆಂದುಕಾಂಗ್ರೆಸ್‌ ಪರ ವಕೀಲ ಪುಟ್ಟೇಗೌಡ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು.ಮತ ಎಣಿಕೆ ಕೇಂದ್ರದ ಎದುರು ಜಮಾಯಿಸಿದ್ದಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರುಮತ ಎಣಿಕೆ ಕೇಂದ್ರದ ಎದುರು ಕುಳಿತು ಮರುಮತ ಎಣಿಕೆ ನಡೆಸುವಂತೆ ಪಟ್ಟು ಹಿಡಿದುಪ್ರತಿಭಟನೆ ನಡೆಸಿದರು.
ಚುನಾವಣೆಯಲ್ಲಿ ಬಿಜೆಪಿ ಅಕ್ರಮ ಎಸಗಿದ್ದು,ಮತ ಎಣಿಕೆಯಲ್ಲೂ ಮೋಸ ಆಗಿದೆ. ಫಲಿತಾಂಶಘೋಷಣೆ ತಡೆ ಹಿಡಿದು ಮರು ಮತಎಣಿಕೆನಡೆಸಬೇಕೆಂದು ಆಗ್ರಹಿಸಿದರು. ಈ ವೇಳೆಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆಮಾತಿನ ಚಕಮಕಿ, ನೂಕಾಟ- ತಳ್ಳಾಟ ನಡೆಯಿತು.ಆಕ್ರೋಶಗೊಂಡ ಕಾರ್ಯಕರ್ತರು ಮತ ಎಣಿಕೆಕೇಂದ್ರದ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆಪೊಲೀಸರು ತಡೆದರು.ಚುನಾವಣೆ ವೀಕ್ಷಕರು ಮತ ಎಣಿಕೆ ಕೇಂದ್ರದಿಂದತೆರಳುವಾಗ ಅವರ ವಾಹನಕ್ಕೆ ಅಡ್ಡ ಕುಳಿತು ಮರುಮತ ಎಣಿಕೆ ನಡೆಸಬೇಕೆಂದು ಆಗ್ರಹಿಸಿದರು.

ಈ ವೇಳೆ ಪೊಲೀಸರು ಕಾರ್ಯಕರ್ತರನ್ನುನಿಯಂತ್ರಿಸಿದರು.ಇದೇ ವೇಳೆ ಬಿಜೆಪಿ ಕಾರ್ಯಕರ್ತರುಜಮಾಯಿಸಿ ಪರಸ್ಪರ ಘೋಷಣೆಕೂಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣನಿರ್ಮಾಣವಾಗಿತ್ತು. ಮತ ಎಣಿಕೆ ಕೇಂದ್ರದಎದುರು ಬದುರು ಎರಡೂ ಪಕ್ಷಗಳ ಮುಖಂಡರುಭಾರೀ ಘೋಷಣೆಗಳನ್ನು ಕೂಗಿ ಆಕ್ರೋಶಹೊರಹಾಕಿದರು. ಪರಸ್ಪರ ಕೈ ಮಿಲಾಯಿಸುವಹಂತಕ್ಕೂ ಮುಂದಾಗಿದ್ದರು.

ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಎಚ್‌.ಅಕ್ಷಯ್‌ ಖುದ್ದು ಪರಿಸ್ಥಿತಿ ನಿಯಂತ್ರಿಸಲುಶ್ರಮಿಸಿದರು. ಪ್ರತಿಭಟನಾಕಾರರು ಆಕ್ರೋಶಹೆಚ್ಚಾಗುತ್ತಿದ್ದಂತೆ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನುತರಿಸಿ ಎರಡು ಗುಂಪುಗಳನ್ನು ಪ್ರತ್ಯೇಕಿಸಲಾಯಿತು.ಅಧಿಕೃತ ಫಲಿತಾಂಶ ಹೊರಬಿಳುತ್ತಿದ್ದಂತೆ ಕಾಂಗ್ರೆಸ್‌ಕಾರ್ಯಕರ್ತರು ಪ್ರತಿಭಟನೆ ಕೈ ಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next