Advertisement

JDS: ಶಾಸಕ ರೇವಣ್ಣ ವಿರುದ್ಧದ ಚುನಾವಣ ಅಕ್ರಮ ವಿಚಾರಣೆ ಮುಂದಕ್ಕೆ

12:21 AM Oct 26, 2024 | Team Udayavani |

ಬೆಂಗಳೂರು: ವ್ಯಾಪಕ ಚುನಾವಣ ಅಕ್ರಮಗಳನ್ನು ಎಸಗಿ ಗೆದ್ದಿರುವ ಹಿನ್ನೆಲೆಯಲ್ಲಿ ಹೊಳೆನರಸೀಪುರ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಅವರ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ. ದೇವರಾಜೇಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ನ. 25ಕ್ಕೆ ಮುಂದೂಡಿದೆ.

Advertisement

ಈ ವಿಚಾರವಾಗಿ ಡಿ. ದೇವರಾಜೇಗೌಡ ಸಲ್ಲಿಸಿರುವ ಚುನಾವಣ ತಕರಾರು ಅರ್ಜಿಯು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು. ವಾದ ಮಂಡನೆಗೆ ಅರ್ಜಿದಾರ ಹಾಗೂ ಪ್ರತಿವಾದಿ ಇಬ್ಬರ ಪರ ವಕೀಲರು ಸಮಯ ಕೇಳಿದ್ದರಿಂದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್‌ 25ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next