Advertisement
ಸ್ಲೀಪರ್ ಬಸ್ ಪ್ರಯಾಣಕ್ಕೆ ಒಬ್ಬರಿಗೆ 2,000 ರೂ!ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಒಬ್ಬರು ಪ್ರಯಾಣಿಕನಿಗೆ 600 ರೂ.ನಿಂದ 700 ರೂ.ವರೆಗೆ ದರ ಇರುತ್ತದೆ. ಆದರೆ ಚುನಾವಣೆಯ ಸಂಬಂಧ ಸೀಟುಗಳ ಬೇಡಿಕೆ ಹೆಚ್ಚಿರುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಊರಿಗೆ ಆಗಮಿಸುವುದರಿಂದ ಖಾಸಗಿ ಬಸ್ ದರ ಕೂಡ ದುಪ್ಪಟ್ಟು ಆಗಿದೆ. ಕೆಲ ಖಾಸಗಿ ಸ್ಲೀಪರ್ ಬಸ್‌ಗಳಲ್ಲಿ ಒಬ್ಬ ಪ್ರಯಾಣಿಕನಿಗೆ ಈಗ 2000 ರೂ. ನಿಗದಿಯಾಗಿದೆ. ಕರಾವಳಿಗೆ ಬರುವ ಬಹುತೇಕ ಸ್ಲೀಪರ್ ಖಾಸಗಿ ಬಸ್ ಗಳಲ್ಲಿ ಸಿಂಗಲ್ ಸ್ಲೀಪರ್ ಸೀಟುಗಳು ಈಗಾಗಲೇ ಬುಕ್ ಆಗಿವೆ.
ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಕೂಡ ಆಸನಗಳು ಬಹುತೇಕ ಬುಕ್ಕಿಂಗ್ ಆಗಿದ್ದು, ಬಸ್ ದರದಲ್ಲೂ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಐರಾವತ ಬಸ್ ನಲ್ಲಿ ಮಂಗಳೂರಿಗೆ ಆಗಮಿಸಲು ಒಬ್ಬರಿಗೆ ಸುಮಾರು 753 ರೂ. ಇತ್ತು. ಆದರೆ, ಮೇ 11ರಂದು ಅದರ ದರ 819 ರೂ.ಗೆ ಏರಿಕೆಯಾಗಿದೆ. ಅದರಂತೆಯೇ ಎಸಿ ಸ್ಲೀಪರ್ ಬಸ್ ನಲ್ಲಿ ಒಬ್ಬರಿಗೆ 902 ರೂ ಇತ್ತು, 982 ರೂ.ಗೆ ಏರಿಕೆಯಾಗಿದೆ ಚುನಾವಣೆಯ ಸಲುವಾಗಿ ಕೆ.ಎಸ್.ಆರ್.ಟಿ.ಸಿ. ಬೆಂಗಳೂರಿನಿಂದ ಮಂಗಳೂರಿಗೆ ಈಗಾಗಲೇ ಹೆಚ್ಚುವರಿ ಬಸ್ ಓಡಿಸಲು ನಿರ್ಧರಿಸಿದೆ. ಚುನಾವಣೆ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಡುವ ಹೆಚ್ಚುವರಿ ಬಸ್‌ಗಳಲ್ಲಿ ಹೆಚ್ಚಿನ ಹೆಚ್ಚಿನವು ರವಿವಾರ ಪುನಃ ಬೆಂಗಳೂರಿಗೆ ತೆರಳಲಿವೆ. ಬೇಸಗೆ ರಜೆ ಪರಿಣಾಮ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಇರುವುದರಿಂದ ಅನೇಕ ಮಂದಿ ದೂರದ ಊರುಗಳಿಗೆ ಪ್ರವಾಸಕ್ಕೆಂದು ತೆರಳುತ್ತಾರೆ. ಆದ್ದರಿಂದ ಸಾಮಾನ್ಯ ದಿನಕ್ಕೆ ಹೋಲಿಕೆ ಮಾಡಿದರೆ ಬಸ್ ಗಳಲ್ಲಿ ಹೆಚ್ಚು ರಶ್ ಇರುತ್ತದೆ. ಅಲ್ಲದೆ ಈ ಬಾರಿ ಮತದಾನ ಶನಿವಾರ ಆದುದರಿಂದ ರವಿವಾರ ವಾರದ ರಜೆ ದೂರದ ಊರಿನಲ್ಲಿರುವ ಹೆಚ್ಚಿನ ಮಂದಿ ಮತದಾನಕ್ಕೆಂದು ಆಗಮಿಸುತ್ತಿದ್ದಾರೆ. ಇದರಿಂದಾಗಿ ಬಸ್‌ಗಳಂತೆಯೇ ರೈಲಿನಲ್ಲಿಯೂ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.