Advertisement
ರಾಜ್ಯದಲ್ಲಿ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ 511 ಕೋಟಿ ರೂ. ವೆಚ್ಚವಾಗಿತ್ತು. ಒಂದು ವರ್ಷದೊಳಗೆ ಲೋಕಸಭೆ ಚುನಾವಣೆ ಬಂದಿರುವುದರಿಂದ ಚುನಾವಣ ವೆಚ್ಚದಲ್ಲಿ ಅಷ್ಟೊಂದು ವ್ಯತ್ಯಾಸವಾಗಲಿಕ್ಕಿಲ್ಲ. ಅಷ್ಟೇ ಹಣ ಲೋಕಸಭೆ ಚುನಾವಣೆಗೆ ಬೇಕಾಗಬಹುದು. ಅದರಂತೆ 2024ರ ಲೋಕಸಭೆ ಚುನಾವಣೆಯ ವೆಚ್ಚ 500 ಕೋಟಿ ದಾಟಬಹುದು ಎಂದು ಚುನಾವಣ ಆಯೋಗ ಅಂದಾಜಿಸಿದೆ.
Related Articles
ಚುನಾವಣ ವೆಚ್ಚ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲು ಇವಿಎಂ ಬಳಕೆಯೂ ಒಂದು ಕಾರಣ. ಸಾರ್ವತ್ರಿಕ ಚುನಾವಣೆಗಳಲ್ಲಿ ಇವಿಎಂ ಬಳಕೆ ಜಾರಿಗೆ ಬಂದ ಮೇಲೆ ವೆಚ್ಚವೂ ದುಬಾರಿ ಆಯಿತು. ಏಕೆಂದರೆ, ಬಹುಪಾಲು ಹಣ ಇವಿಎಂಗಳ ಖರೀದಿಗೆ ತಗಲುತ್ತದೆ. ಉಳಿದಂತೆ ಆಯಾ ಸಂದರ್ಭದ ಬೆಲೆ ಏರಿಕೆ ಸೂಚ್ಯಂಕವೂ ಚುನಾವಣ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಅದರಂತೆ 2014ರ ಲೋಕಸಭಾ ಚುನಾವಣೆ ವೇಳೆ 320 ಕೊಟಿ ರೂ. ವೆಚ್ಚವಾಗಿತ್ತು. ಆಗ ಒಂದು ಕ್ಷೇತ್ರಕ್ಕೆ ಸರಾಸರಿ 11 ಕೋಟಿ ರೂ. ವೆಚ್ಚವಾಗಿತ್ತು. 2019ರಲ್ಲಿ ಒಟ್ಟು ವೆಚ್ಚ 400 ಕೋಟಿ ರೂ. ಆಗಿತ್ತು. ಅದರಲ್ಲಿ ಒಂದು ಕ್ಷೇತ್ರಕ್ಕೆ ಸರಾಸರಿ 17 ಕೋಟಿ ರೂ. ವೆಚ್ಚ ತಗುಲಿತ್ತು. 2024ರಲ್ಲಿ ವೆಚ್ಚದ ಮಿತಿ 500 ಕೋಟಿ ರೂ.ಗಳ ಗಡಿ ದಾಟಲಿದ್ದು, ಒಂದು ಕ್ಷೇತ್ರಕ್ಕೆ 17ರಿಂದ 18 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
Advertisement
ದೇಶಕ್ಕೆ ಬೇಕು 4ರಿಂದ 5 ಸಾವಿರ ಕೋಟಿ?ಪ್ರಪಂಚದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಅಗ್ರಗಣ್ಯ ಸ್ಥಾನದಲ್ಲಿರುವ ಭಾರತದ ಲೋಕಸಭೆಗೆ ಚುನಾಯಿತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಡೆಸಲಾಗುವ ಸಾರ್ವತ್ರಿಕ ಚುನಾವಣೆಗೆ ಸರಕಾರದ ಖಜಾನೆಯಿಂದ ಕೋಟಿಗಟ್ಟಲೆ ಹಣ ವೆಚ್ಚ ಮಾಡಲಾಗುತ್ತದೆ. 2024ರ ಲೋಕಸಭೆ ಚುನಾವಣೆಗೆ ಇಡೀ ದೇಶದಲ್ಲಿ ವೆಚ್ಚ ಮಾಡಲು ಚುನಾವಣ ಆಯೋಗಕ್ಕೆ 4ರಿಂದ 5 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. 1952ರಲ್ಲಿ ನಡೆದ ದೇಶದ ಮೊದಲ ಲೋಕಸಭೆ ಚುನಾವಣೆಗೆ 10.45 ಕೋಟಿ ರೂ. ವೆಚ್ಚವಾಗಿತ್ತು. 2004ರಲ್ಲಿ ವೆಚ್ಚದ ಪ್ರಮಾಣ ಸಾವಿರ ಕೋಟಿ ಗಡಿ ದಾಟಿತು. 2004ರಲ್ಲಿ 1,113 ಕೋಟಿ ರೂ., 2009ರಲ್ಲಿ 1,483 ಕೋಟಿ ರೂ., 2014ರಲ್ಲಿ 3,870 ಕೋಟಿ ರೂ., 2019ರಲ್ಲಿ 4 ಸಾವಿರ ಕೋಟಿಗೂ ಅಧಿಕ ವೆಚ್ಚವಾಗಿತ್ತು. ಈ ಬಾರಿ 5 ಸಾವಿರ ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಚುನಾವಣ ವೆಚ್ಚ ಏನೆಲ್ಲ ಒಳಗೊಂಡಿರುತ್ತದೆ?
ಕೇಂದ್ರ ಚುನಾವಣ ಆಯೋಗದ ಮಾರ್ಗಸೂಚಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳ ಸ್ಥಾಪನೆ, ಮತಗಟ್ಟೆಗಳಿಗೆ ಬೇಕಾಗುವ ವ್ಯವಸ್ಥೆಗಳ ಪೂರೈಕೆ, ಮತ ಎಣಿಕೆ ಕೇಂದ್ರಗಳ ಸ್ಥಾಪನೆ, ಚುನಾವಣ ಸಿಬಂದಿಗೆ ವೇತನ-ಭತ್ತೆ, ಚುನಾವಣ ಸಿಬಂದಿಗೆ ಸಾರಿಗೆ ವ್ಯವಸ್ಥೆ, ಚುನಾವಣ ಸಾಮಗ್ರಿ ಸಾಗಾಣಿಕೆ, ಚುನಾವಣ ಸಿಬಂದಿಗೆ ತರಬೇತಿ, ಮತದಾನದ ದಿನದ ಖರ್ಚು ಇನ್ನಿತರ ಖರ್ಚುಗಳು ಒಟ್ಟಾರೆ ಚುನಾವಣ ವೆಚ್ಚದಲ್ಲಿ ಸೇರುತ್ತವೆ. ಲೋಕಸಭಾ ಚುನಾವಣೆಗೆ ಕಾನೂನು-ಸುವ್ಯವಸ್ಥೆಯ ವೆಚ್ಚ ಹೊರತುಪಡಿಸಿ ಉಳಿದಲ್ಲ ವೆಚ್ಚವನ್ನೂ ಕೇಂದ್ರ ಸರಕಾರ ಭರಿಸುತ್ತದೆ. ಕಾನೂನು-ಸುವ್ಯವಸ್ಥೆಗೆ ಬೇಕಾಗುವ ವೆಚ್ಚವನ್ನು ಆಯಾ ರಾಜ್ಯ ಸರಕಾರಗಳು ಭರಿಸುತ್ತವೆ. – ರಫೀಕ್ ಅಹ್ಮದ್