ನವದೆಹಲಿ: ಆರು ರಾಜ್ಯಗಳಿಂದ ತೆರವಾಗಿರುವ ರಾಜ್ಯಸಭೆಯ ಏಳು ಸ್ಥಾನಗಳಿಗೆ ಉಪಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದೆ.
ತಮಿಳುನಾಡಿನಲ್ಲಿ 2, ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ, ಪುದುಚೇರಿ ಮತ್ತು ಮಧ್ಯಪ್ರದೇಶಗಳಲ್ಲಿ ತಲಾ 1 ಸ್ಥಾನಗಳು ತೆರವಾಗಿವೆ. ಅ.4ರಂದು ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಮಧ್ಯಪ್ರದೇಶದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದ ಥಾವರ್‌ಚಂದ್ ಗೆಹಲೋತ್ ಕರ್ನಾಟಕ ರಾಜ್ಯಪಾಲರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ತಮಿಳುನಾಡಿನಿಂದ ಎಐಎಡಿಎಂಕೆಯ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಪಿ.ಮುನುಸಾಮಿ ಮತ್ತು ಆರ್.ವೈದ್ಯಲಿಂಗಂ ಶಾಸಕರಾಗಿ ಆಯ್ಕೆಯಾಗಿರುವುದರಿಂದ ರಾಜೀನಾಮೆ ನೀಡಿದ್ದರು.
ಪಶ್ಚಿಮ ಬಂಗಾಳದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದ ಟಿಎಂಸಿಯ ರಂಜನ್ ಭೂನಿಯಾ, ಶಾಸಕರಾಗಿ ಆಯ್ಕೆಯಾಗಿ ಸದ್ಯ ಸಚಿವರಾಗಿರುವ ಹಿನ್ನೆಲೆಯಲ್ಲಿ ತ್ಯಾಗಪತ್ರ ನೀಡಿದ್ದರು. ಅಸ್ಸಾಂನಿಂದ ತೆರವಾಗಿರುವ 1 ಸ್ಥಾನಕ್ಕೆ ಮಾಜಿ ಸಿಎಂ ಸರ್ವಾನಂದ ಸೊನೊವಾಲ್ ಅವರನ್ನು ನೇಮಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:‘ನಿಮ್ಮ ಮಗುವಿಗೆ ಅಪ್ಪ ಯಾರು’ ? ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟಿ ನುಸ್ರತ್ ಜಹಾನ್
ಕೇಂದ್ರ ಸಚಿವರಾಗಿರುವ ಅವರು ಸದ್ಯ ಲೋಕಸಭೆ, ರಾಜ್ಯಸಭೆ ಸದಸ್ಯರಲ್ಲ. ಪುದುಚೇರಿಯಲ್ಲಿ ಸದ್ಯ ಸದಸ್ಯರಾಗಿರುವ ಎನ್.ಗೋಕುಲಕೃಷ್ಣನ್ ಅವರ ಅವಧಿ ಅ.6ರಂದು ಮುಕ್ತಾಯವಾಗಲಿದೆ.