ನವದೆಹಲಿ: ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರಿಗೆ ಹೊರತಾಗಿ ಇತರ ಆಯ್ಕೆಯ ದೇಶಗಳಲ್ಲಿರುವ ಎನ್‌ಆರ್‌ಐಗಳಿಗೆ ಅಂಚೆ ಮತ ವ್ಯವಸ್ಥೆ ನೀಡುವ ಪ್ರಸ್ತಾಪ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ಬಗ್ಗೆ ಸಂಸದರೊಬ್ಬರು ಬರೆದಿರುವ ಪತ್ರಕ್ಕೆ ಆಯೋಗ ಈ ಸ್ಪಷ್ಟನೆ ನೀಡಿದೆ.
2011ರಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ 1951ಕ್ಕೆ ತಂದಿರುವ ತಿದ್ದುಪಡಿಗೆ ಹೊರತಾಗಿ ಈ ಅಂಶವಿದೆ. ಇತರ ರಾಷ್ಟ್ರಗಳಲ್ಲಿರುವ ಭಾರತ ಮೂಲದವರಿಗೆ ಇಂಥ ವ್ಯವಸ್ಥೆ ನೀಡುವ ಇರಾದೆಯೇ ಆಯೋಗದ ಮುಂದೆ ಇಲ್ಲ ಎಂದು ಅದು ಹೇಳಿದೆ.
ವಿದೇಶಾಂಗ ಸಚಿವಾಲಯದ ಜತೆಗೂ ಈ ಅಂಶ ಚರ್ಚಿಸಲಾಗುತ್ತಿದೆ ಎಂದು ಅದು ಹೇಳಿದೆ. ರಾಜತಾಂತ್ರಿಕ ಅಥವಾ ದೂತಾವಾಸದ ಅಧಿಕಾರಿಯೊಬ್ಬರನ್ನು ನೇಮಿಸಿ ಅವರ ಮೂಲಕ ಮತ ಹಾಕುವ ವ್ಯವಸ್ಥೆ ಬಗ್ಗೆ ಪರಿಶೀಲಿಸುವ ಬಗ್ಗೆಯೂ ಆಯೋಗ ಪ್ರಸ್ತಾಪ ಮಾಡಿದೆ.
ಇದನ್ನೂ ಓದಿ:ಸೌತ್ ಆಯ್ತು ,ಈಗ ಬಿ ಟೌನ್ ಪಯಣ ಬೆಳೆಸಿದ ರಶ್ಮಿಕಾ : ಬಾಲಿವುಡ್ ನಲ್ಲಿ ಕಿರಿಕ್ ಬೆಡಗಿ ಮಿಂಚು
ಏಪ್ರಿಲ್-ಮೇನಲ್ಲಿ ನಡೆಯಲಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಈ ಅಂಶ ಜಾರಿ ಮಾಡುವ ಬಗ್ಗೆ ಸಾಧ್ಯವಿದೆಯೇ ಎಂದು ಕಾನೂನು ಸಚಿವಾಲಯಕ್ಕೆ ಮನವಿ ಮಾಡಿದೆ.