Advertisement
ನಂತರ ಮಾತನಾಡಿದ ಅವರು ಸರಕಾರ ಇಲ್ಲವೇ ಚುನಾವಣಾ ಆಯೋಗ ನೀಡುವ ಗುರುತಿನ ಚೀಟಿಯನ್ನು ಯಾವುದೇ ರೀತಿಯಿಂದ ದುರುಪಯೋಗ ಪಡಿಸಿಕೊಂಡರೆ ಅಂತರವರಿಗೆ ಶಿಕ್ಷೆಯಾಗಲಿದೆ, ಎಂದೂ ಅದನ್ನು ದುರುಪಯೋಗ ಪಡಿಸಿಕೊಳ್ಳದಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವೀರೇಂದ್ರ ಶ್ಯಾನುಭಾಗ್ ಅವರು ಭಾರತದಲ್ಲಿ ಮಾತ್ರ ಪ್ರತಿಯೋರ್ವರಿಗೂ ಕೂಡಾ ಮತದಾನದ ಹಕ್ಕನ್ನು ನೀಡಲಾಗಿದೆ. ಬೇರೆ ಬೇರೆ ದೇಶದಲ್ಲಿ ಈ ರೀತಿಯ ಹಕ್ಕನ್ನು ಹಣವಂತರಿಗೆ, ಆಸ್ತಿವಂತರಿಗೆ ಹೀಗಿ ನೀಡಿರುವ ಉದಾಹರಣೆಯಿದೆ. ಚುನಾವಣೆಯಲ್ಲಿ ಮತದಾನ ಮಾಡುವುವಾಗ ನಾವು ಜಾಗೃತೆಯನ್ನು ವಹಿಸಬೇಕು. ಅಪರಾಧಿಕ ಹಿನ್ನೆಲೆಯುಳ್ಳವರಿಗೆ ಮತದಾನ ಮಾಡದಂತೆ ಕರೆ ನೀಡಿದ ಅವರು ಅನೇಕ ಚುನಾವಣೆಗಳ ಮತದಾನದ ಶೇಖಡಾವಾರು ನೋಡಿದಾಗ ಸುಶಿಕ್ಷತರೇ ಮತದಾನದಿಂದ ದೂರ ಇರುವುದು ಕಂಡು ಬರುತ್ತದೆ, ಇದು ಆಗಕೂಡದು ಎಂದ ಅವರು ಪ್ರತಿಯೋರ್ವರೂ ಕೂಡಾ ಮತದಾನ ಮಾಡುವಂತೆ ಕರೆ ನೀಡಿದರು. ಮತದಾನ ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದ ಅವರು ಅದನ್ನು ನಾವು ಸರಿಯಾಗಿ ನಿಭಾಯಿಸಿದಲ್ಲಿ ರಾಷ್ಟ್ರದಲ್ಲಿ ಸದೃಢ ಸರಕಾರವನ್ನು ಸ್ಥಾಪಿಸಿದಂತಾಗುತ್ತದೆ ಎಂದರು.
ಕಾರ್ಯಕ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಉಪಸ್ಥಿತರಿದ್ದರು.
Related Articles
Advertisement
ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು. ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ತಹಸೀಲ್ದಾರ್ ರವಿಚಂದ್ರ ಸ್ವಾಗತಿಸಿದರು. ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ವಂದಿಸಿದರು.