Advertisement

ಉದ್ಯೋಗಕ್ಕೆ ಪೂರಕವಾದಯೋಜನೆ ರೂಪಿಸಿ

03:47 PM Oct 22, 2020 | Suhan S |

ತುರುವೇಕೆರೆ: ನಿರುದ್ಯೋಗಿ ಪದವೀಧರರಿಗೆ ನೇರ ಉದ್ಯೋಗ ಕೊಡುವುದು ಅಥವಾ ಉದ್ಯೋಗಕ್ಕೆ ಪೂರಕವಾದ ಕಾರ್ಖಾನೆ ತೆರೆಯುವ ಮತ್ತು ಯುವಕರಿಗೆ ಸ್ವಂತ ಉದ್ಯಮ ತೆರೆಯಲು ಪಕ್ವವಾದ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕು ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಬಾಬು ಹೇಳಿದರು.

Advertisement

ಪಟ್ಟಣದವಿರಕ್ತಮಠದಆವರಣದಲ್ಲಿಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, 28 ಸಾವಿರ ಮತದಾರರಿರುವ ದೊಡ್ಡ ಕ್ಷೇತ್ರ ತುಮಕೂರು ಜಿಲ್ಲೆಯಾಗಿದ್ದು ಅದರಲ್ಲಿ ತುರುವೇಕೆರೆಯಲ್ಲಿ ಸುಮಾರು 1600 ಮತದಾರರಿದ್ದಾರೆ ಎಂದರು.

ಗೆಲುವಿನ ವಾತಾವರಣ: ನಾನು 2017ರಲ್ಲಿ ಇದೇ ಕ್ಷೇತ್ರದಲ್ಲಿ ಗೆದ್ದಾಗ ಕೆಲಸ ಮಾಡಲು ನನಗೆ ಕೇವಲ6 ತಿಂಗಳ ಅಧಿಕಾರ ಮಾತ್ರ ಸಿಕ್ಕಿತ್ತು, ಆದ್ದರಿಂದ ಈಬಾರಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲುಮತ್ತೂಮ್ಮೆ ತಮ್ಮ ಆಶೀರ್ವಾದ ಅಗತ್ಯ. ಶಿಕ್ಷಕರು, ಉಪನ್ಯಾಸಕರ ಒಡನಾಟ ಹಾಗೂ ಇವೊಂದುಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಇರುವ ಬೇರುಗಳು ನನ್ನ ಗೆಲುವಿಗೆ ಪೂರಕವಾದ ವಾತಾವರಣ ಸೃಷ್ಟಿಸಿವೆ ಎಂದು ತಿಳಿಸಿದರು.

ಇಂಕ್ರಿಮೆಂಟ್‌ ನೀಡಿದ ಕಾಂಗ್ರೆಸ್‌: ನಾನು ಎಂಎಲ್‌ಸಿ ಆಗಿದ್ದ ವೇಳೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 6ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿತು. ಇದರಿಂದ ನಲವತ್ತುವರೆ ಲಕ್ಷ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರಿಗೆ ಅನುಕೂಲವಾಯಿತು. ಅದೇ ರೀತಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಉಪನ್ಯಾಸಕರಿಗೆ ಎರಡು ಇಂಕ್ರಿಮೆಂಟ್‌ಗಳನ್ನು ಮೂಲ ವೇತನದಲ್ಲಿ ಸೇರಿಸಿ ಒಟ್ಟು ವೇತನ ಹೆಚ್ಚು ಮಾಡಿದಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ ಎಂದರು. ನಾನು ಗೆದ್ದರೆ ನಿರುದ್ಯೋಗಿಗಳ ಪರವಾಗಿ ಧ್ವನಿ ಎತ್ತುವೆ.

ಹೀಗಾಗಲೇ ಕಾಂಗ್ರೆಸ್‌ ಸರ್ಕಾರದ ಯೋಜನೆಗಳು ಶಿಕ್ಷಕರಿಗೆ, ಯುವಕರು ಮತ್ತು ಉಪನ್ಯಾಸಕರ ಪರವಾಗಿವೆ. ಚುನಾವಣಾ ಕ್ಷೇತ್ರ ಬಹು ವಿಸ್ತಾರವಾದ್ದರಿಂದ ಹಾಗೂ ಸಮಯದಅಭಾವದಿಂದ ಎಲ್ಲ ಮತದಾರರ ನ್ನೂ ನೇರವಾಗಿ ಸಂಪರ್ಕಿಸಲು ಸಾಧ್ಯವಾಗದ ಕಾರಣ, ಸೋಷಿಯಲ್‌ ಮೀಡಿಯಾ, ಕಾರ್ಯಕರ್ತರು,ಮತ್ತು ಸ್ನೇಹಿತರ ಮೂಲಕ ಮತದಾರರನ್ನು ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಕೈ ಹಿಡಿಯುವ ಶಿಕ್ಷಕರು: ತುಮಕೂರಿನಲ್ಲಿ ಮೂರು ಪಕ್ಷಗಳಿಗೂ ಸಮಾನ ಸ್ಪರ್ಧೆ ಇದೆ ಎನ °ಲಾಗುತ್ತಿದೆ. ವಾಸ್ತವವಾಗಿ ಬಿಜೆಪಿಯಲ್ಲಿನ ಆಂತರಿಕ ಬಿನ್ನಾಭಿಪ್ರಾಯ, ಇನ್ನು ಕೋಲಾರದಲ್ಲಿ ಕಾಂಗ್ರೆಸ್‌ ಮೊದಲ ಸ್ಥಾನ ಉಳಿದೆರಡು ಸ್ಥಾನಗಳಲ್ಲಿ ಜೆಡಿಎಸ್‌ ಮತ್ತು ಬಿಜೆಪಿಗಳಿದ್ದು5ಜಿಲ್ಲೆಗಳಲ್ಲಿಯೂ ಕಾಂಗ್ರೆಸ್‌ ಪ್ರಬಲವಾಗಿದ್ದು ತುಮಕೂರು ಜಿಲ್ಲೆಯಲ್ಲಿ ಪ್ರಜ್ಞಾವಂತ ಶಿಕ್ಷಕರಿದ್ದು ಈ ಬಾರಿ ನನ್ನಕೈ ಹಿಡಿಯಲಿದ್ದಾರೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಗುಡ್ಡೇನಹಳ್ಳಿಪ್ರಸನ್ನ, ನಾಗೇಶ್‌, ತಾಪಂ ಉಪಾಧ್ಯಕ್ಷ ಭೈರಪ್ಪ, ಸದಸ್ಯರಾದ ಮಂಜುನಾಥ್‌, ನಂಜೇಗೌಡ, ಮುಖಂಡರಾದ ದಾನಿಗೌಡ, ಜೋಗಿಪಾಳ್ಯ ಶಿವರಾಜ್‌, ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next