ಗಂಗಾವತಿ: ಗ್ರಾಮ ಪಂಚಾಯತ್ ಚುನಾವಣೆಗಾಗಿ ಕುಷ್ಟಗಿ ತಾಲೂಕಿಗೆ ನಿಯೋಜನೆಗೊಂಡಿರುವ ಗಂಗಾವತಿ ತಾಲೂಕಿನ ಅನುದಾನಿತ ಶಾಲೆಗಳ ಶಿಕ್ಷಕರು ಶಿಕ್ಷಕಿಯರು ಕುಷ್ಟಗಿಗೆ ತೆರಳಲು ಜಿಲ್ಲಾಡಳಿತ ಬಸ್ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದರಿಂದ ಚುನಾವಣೆ ಕಾರ್ಯಕ್ಕೆ ತೆರಳಲು ಸಿಬ್ಬಂದಿ ಪರದಾಡಿದ ಘಟನೆ ನಡೆದಿದೆ.
ಗ್ರಾ.ಪಂ. ಚುನಾವಣೆಗೆ ಗಂಗಾವತಿಯಿಂದ ಸುಮಾರು 70 ಜನ ಅನುದಾನಿತ ಶಾಲೆಗಳ ಶಿಕ್ಷಕ ಶಿಕ್ಷಕಿಯರನ್ನು ಕುಷ್ಟಗಿ ತಾಲೂಕಿಗೆ ನಿಯೋಜನೆ ಮಾಡಲಾಗಿದೆ. ಆದರೆ ಇವರನ್ನು ನಿಯೋಜಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ ಬರುವ ವ್ಯವಸ್ಥೆ ಮಾಡದೇ ಇರುವ ಕುರಿತು ಸಿಬ್ಬಂದಿಗಳು ಪತ್ರಿಕಾ ಮಾಧ್ಯಮದವರ ಗಮನಕ್ಕೆ ತಂದಿದ್ದರು.
ಇದನ್ನೂ ಓದಿ:ಸುರೇಶ್ ಅಂಗಡಿ ಪುತ್ರಿ, ಜಗದೀಶ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ರಾಜಕೀಯಕ್ಕೆ ಎಂಟ್ರಿ!
ತಕ್ಷಣ ಎಚ್ಚೆತ್ತ ಕುಷ್ಟಗಿ ತಹಸೀಲ್ದಾರ್ ಸಿದ್ದೇಶ್ ಹಾಗೂ ಗಂಗಾವತಿ ತಹಸೀಲ್ದಾರ್ ಎಂ.ರೇಣುಕಾ ಅವರನ್ನು ಸಂಪರ್ಕಿಸಿ ಕೆಎಸ್ಆರ್ ಟಿಸಿ ಡಿಪೋ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ಕೂಡಲೇ ಬಸ್ ವ್ಯವಸ್ಥೆ ಮಾಡಲಾಗಿದೆ.
ಈ ಮಧ್ಯೆ ಅನುದಾನಿತ ಶಾಲೆಗಳ ಶಿಕ್ಷಕ ಶಿಕ್ಷಕಿಯರನ್ನು ಸ್ಥಳೀಯವಾಗಿ ಚುನಾವಣೆ ಗೆ ನಿಯೋಜನೆ ಮಾಡುವಂತೆ ಒತ್ತಾಯ ಕೇಳಿಬಂತು.