Advertisement

Election 2023: 8 ಲಕ್ಷ ರೂ. ಮೌಲ್ಯದ 78 ರೇಷ್ಮೆ ಸೀರೆಗಳು ಸೀಜ್

12:32 PM Apr 08, 2023 | Team Udayavani |

ಗದಗ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ದಾಖಲಾತಿ ಇಲ್ಲದೇ ಸಾಗಾಟ ಮಾಡುತ್ತಿದ್ದ 8 ಲಕ್ಷ ರೂ. ಮೌಲ್ಯದ 78 ರೇಷ್ಮೆ ಸೀರೆಗಳನ್ನು ಸೀಜ್ ಮಾಡಿರುವ ಘಟನೆ ತಾಲೂಕಿನ ಬಿಂಕದಕಟ್ಟಿ ಬಳಿ ಶನಿವಾರ ನಡೆದಿದೆ.

Advertisement

ಆಂಧ್ರ ಪ್ರದೇಶದ ಕಡಪದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ವಾಹನವನ್ನು ಗದಗ ಗ್ರಾಮೀಣ ಠಾಣೆ ಪೊಲೀಸರು ತಪಾಸಣೆಗೊಳಪಡಿಸಿದಾಗ ಅಪಾರ ಪ್ರಮಾಣದ ರೇಷ್ಮೆ ಸೀರೆಗಳು ಪತ್ತೆಯಾಗಿದ್ದು, ದಾಖಲಾತಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next