ಮಂಡ್ಯ: ಜಿಲ್ಲೆಯ ತಾಪಂ ಹಾಗೂಜಿಪಂ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿದ್ದು, ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ.ಈಗಾಗಲೇ ರಾಜ್ಯ ಚುನಾವಣಾಆಯೋಗ ಮೀಸಲಾತಿ ಪಟ್ಟಿ ಪ್ರಕಟಮಾಡಿದ್ದು, ಆಕ್ಷೇಪಣೆಗೆ ಅವಕಾಶದಅವ ಧಿ ಮುಗಿದಿದ್ದು, ಅಂತಿಮ ಪಟ್ಟಿಪ್ರಕಟಿಸಬೇಕಾಗಿದೆ.
ಈ ಹಿನ್ನೆಲೆ ಡಿಸೆಂಬರ್ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.ಕಾರ್ಯಕರ್ತರ ಸಭೆ: ಜಿಲ್ಲೆಯಲ್ಲಿ ಕಾಂಗ್ರೆಸ್,ಬಿಜೆಪಿ ಹಾಗೂ ಜೆಡಿಎಸ್ ಮುಖಂಡರುಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿತೊಡಗಿದ್ದು, ಅಭ್ಯರ್ಥಿಗಳ ಆಯ್ಕೆಗೆಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡಲುಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಟಿಕೆಟ್ಗಾಗಿ ಪೈಪೋಟಿ: ಕಾಂಗ್ರೆಸ್, ಜೆಡಿಎಸ್‌ಸಾಂಪ್ರದಾಯಿಕ ಎದುರಾಳಿಗಳಾಗಿರುವುದ ರಿಂದ ಎರಡು ಪಕ್ಷಗಳ ಟಿಕೆಟ್‌ಗೆಹೆಚ್ಚಿನ ಅಭ್ಯರ್ಥಿಗಳು ದುಂಬಾಲುಬೀಳು ತ್ತಿದ್ದಾರೆ. ಈಗಾಗಲೇ ಮೀಸಲಾತಿಯಂತೆ ಟಿಕೆಟ್ ನೀಡುವಂತೆ ಆಕಾಂಕ್ಷಿಗಳುತಮ್ಮ ಪಕ್ಷಗಳ ಮುಖಂಡರು, ನಾಯಕರಮೇಲೆ ಒತ್ತಡ ಹೇರುತ್ತಾ, ಚುನಾವಣೆಗೆ ಸಿದ್ಧತೆನಡೆಸುತ್ತಿದ್ದಾರೆ.
ಎಲ್ಲಾ ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆಗೆ ಸಿದ್ಧತೆ: ಗ್ರಾಪಂಚುನಾವಣೆಯಂತೆ ತಾಪಂ ಹಾಗೂ ಜಿಪಂ ಚುನಾವಣೆಎದುರಿಸಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.ತಾಪಂ 124 ಹಾಗೂ ಜಿಪಂ 46 ಸ್ಥಾನಗಳಲ್ಲೂ ಈಬಾರಿ ಸ್ಪರ್ಧೆಗೆ ಸನ್ನದ್ಧವಾಗಿದೆ. ಅದಕ್ಕಾಗಿ ನಿರಂತರವಾಗಿ ಸಭೆ ನಡೆಸಲಾಗುತ್ತಿದೆ. ಅಲ್ಲದೆ, ತಾಲೂಕು,ಬೂತ್, ಗ್ರಾಪಂ ಮಟ್ಟದಲ್ಲಿ ಸಭೆ, ಸಮಾರಂಭನಡೆಸಲು ಚಿಂತನೆ ನಡೆಸಿದೆ. ಗ್ರಾಪಂ ಚುನಾವಣೆಯಲ್ಲಿಉತ್ತಮ ಸಾಧನೆ ಮಾಡಿರುವ ಬಿಜೆಪಿ ಇಲ್ಲಿಯೂಕಮಾಲ್ ಮಾಡಲು ಮುಂದಾಗಿದೆ.
ಪಕ್ಷಗಳ ಚಿಹ್ನೆ ಆಧಾರದ ಮೇಲೆ ಸ್ಪರ್ಧೆ: ಗ್ರಾಪಂಚುನಾವಣೆಯಲ್ಲಿ ಪಕ್ಷಗಳ ಚಿಹ್ನೆ ಇರಲಿಲ್ಲ. ಇದರಿಂದಯಾವ ಪಕ್ಷಕ್ಕೆ ಎಷ್ಟು ಸ್ಥಾನ ಗಳಿಸಿದ್ದವು ಎಂಬುದರ ಬಗ್ಗೆಸಮರ್ಪಕ ಮಾಹಿತಿ ಸಿಕ್ಕಿಲ್ಲ. ಆದರೆ ತಾಪಂ, ಜಿಪಂಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆಗಳ ಆಧಾರದಮೇಲೆ ನಡೆಯುವುದರಿಂದ ಬಹಳ ಮಹತ್ವ ಪಡೆದಿದೆ.ಅದಕ್ಕಾಗಿ ಅಭ್ಯರ್ಥಿಗಳು ಟಿಕೆಟ್ ಪಡೆಯಲುಕಾತರರಾಗಿದ್ದಾರೆ.
ಎಚ್.ಶಿವರಾಜು