Advertisement
ಸಿಟಿಜನ್ಸ್ ಫಾರ್ ಡೆಮಾಕ್ರಸಿ ವತಿಯಿಂದ ಗುರುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಶಾಸಕರ ಅಮಾನತು: ಒಂದು ದಿನದ ಚರ್ಚೆ’ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅನೇಕರು, ಚಿಕ್ಕ ವಿಷಯಕ್ಕೆ ಸ್ಪೀಕರ್ ಕೊಟ್ಟ ಶಿಕ್ಷೆ ಸರಿಯಲ್ಲ. ಇದು ಅಕ್ಷಮ್ಯ ಎಂದು ವಿಶ್ಲೇಷಿಸಿದರು.
ಪೇಪರ್ ವೆಯ್ಟ್ ಎಸೆದಾಗಲೇ ಅಮಾನತು ಮಾಡಿರಲಿಲ್ಲ ಯೋಗೀಶ್ ಭಟ್ ಡೆಪ್ಯುಟಿ ಸ್ಪೀಕರ್ ಆಗಿದ್ದಾಗ ಪೇಪರ್ ವೆಯ್ಟ್ ಅನ್ನೇ ಅವರತ್ತ ಎಸೆದಿದ್ದರು. ಫೈಲುಗಳನ್ನೇ ಕಿತ್ತೆಸೆದಿದ್ದರು. ಆಗಲೂ ಅವರು ಅಮಾನತು ಮಾಡಿರಲಿಲ್ಲ ಎಂದರು.
Related Articles
Advertisement
ಜೇಬುಕಳ್ಳತನಕ್ಕೆ ಗಲ್ಲು ಶಿಕ್ಷೆಯಂತೆಅಧ್ಯಕ್ಷತೆ ವಹಿಸಿದ್ದ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, 10 ಶಾಸಕರ ಅಮಾನತು ಮಾಡಿದ್ದು ಹಾಗೂ ಸಭೆಯಿಂದ ಹೊರಕ್ಕೆ ಹಾಕಿದ್ದನ್ನು ನೋಡಿದರೆ, ಜೇಬುಕಳ್ಳನಿಗೆ ಮರಣ ದಂಡನೆ ಕೊಟ್ಟಂತೆ ಎಂದು ವಿಶ್ಲೇಷಿಸಿದರು. ಈಗಿನ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ವಿಧಾನಸಭೆಯಲ್ಲಿ ಪೈಲ್ವಾನರಂತೆ ತೊಡೆ ತಟ್ಟಿದವರು ಅವರು. ಸಂಸದೀಯ ವ್ಯವಹಾರಗಳ ಸಚಿವರ ನಡೆ ಬೇಸರ ತಂದಿದೆ. ಮುಂದಿನ ಬಾರಿ ವಜಾ ಕೂಡ ಮಾಡಬಹುದೇನೋ ಎಂದರು. ಸಿಟಿಜನ್ಸ್ ಫಾರ್ ಡೆಮಾಕ್ರಸಿಯ ಅಧ್ಯಕ್ಷ ಚಂದ್ರಶೇಖರ್ ಸ್ವಾಗತಿಸಿದರು. ಅಜಯ್ ಹೆಬ್ಟಾರ್ ವಂದಿಸಿದರು. ಬೇಲಿಯೇ ಎದ್ದು ಹೊಲ ಮೇಯ್ದರೆ?
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ತಪ್ಪನ್ನು ತಪ್ಪೆಂದು ಹೇಳದಿದ್ದರೆ ಈಗಾಗಲೇ ಕೆಟ್ಟು ಹೋದ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹೇಗೆ? ಕೆಟ್ಟ ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿ ಪ್ರಮುಖವಾಗಿದೆ. ಸಾಂವಿಧಾನಿಕ ಸಂಸ್ಥೆ, ಅಂಗಗಳಲ್ಲಿ, ಲೋಕಾಯುಕ್ತದಂಥ ಸ್ವಾಯತ್ತ ಸಂಸ್ಥೆಗಳಲ್ಲಿ ಕ್ರಮೇಣ ಕುಸಿತ ಉಂಟಾಗಿದೆ. ಇವತ್ತಿನ ಆಡಳಿತ ವ್ಯವಸ್ಥೆಗೆ ಲಂಗುಲಗಾಮು ಇಲ್ಲವಾಗಿದೆ ಎಂದ ಅವರು, ಚುನಾವಣೆಗಳಲ್ಲಿ ಬೀದಿಬೀದಿಗಳಲ್ಲಿ ಹಣ ಚೆಲ್ಲಿದರೂ ಯಾರಿಗೂ ಶಿಕ್ಷೆ ಆಗುತ್ತಿಲ್ಲ ಎಂದು ವಿಷಾದದಿಂದ ನುಡಿದರು. ತಪ್ಪುಗಳಾಗುತ್ತವೆ, ಅದನ್ನು ಸರಿಪಡಿಸಲು ನೂರೆಂಟು ವಿಧಾನಗಳಿವೆ. ಅದರ ಕುರಿತು ಯೋಚಿಸಬೇಕೇ ಹೊರತು ಕಾಲಿಗೆ ಮುಳ್ಳು ಚುಚ್ಚಿದೆ ಎಂದು ಕಾಲನ್ನೇ ತುಂಡರಿಸುವ ಪ್ರವೃತ್ತಿ ಸಮರ್ಪಕವಲ್ಲ.
ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್ ಕೊಲೆಯಂತಹ ಘೋರ ಅಪರಾಧ ಮಾಡಿದವನನ್ನೂ ವಿಚಾರಣೆ ಮಾಡಲಾಗುತ್ತದೆ. ಆತನ ಹೇಳಿಕೆಯನ್ನೂ ಪಡೆಯುವ ಅವಕಾಶ ಸಂವಿಧಾನದಲ್ಲಿದೆ. ವಿಧಾನಸಭೆಯಲ್ಲಿ ಅಂಗಿ ಹರಿದುಕೊಂಡಿದ್ದು, ತೊಡೆ ತಟ್ಟಿದ್ದು, ಬಾಗಿಲು ಒದ್ದದ್ದೆಲ್ಲವೂ ಕಾಂಗ್ರೆಸಿಗರಿಗೆ ಮರೆತು ಹೋಗಿದೆ.
ಡಿ.ಎಚ್. ಶಂಕರಮೂರ್ತಿ, ಮಾಜಿ ಸಭಾಪತಿ ಕ್ಷುಲ್ಲಕ ಕಾರಣಕ್ಕಾಗಿ ಅಮಾನತಿನ ಶಿಕ್ಷೆ ಕೊಡಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅದು ಸದನ, ಪೀಠಕ್ಕೆ ಗೌರವ ಕೊಡುವುದಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದರೆ, ಕಾಪಾಡುವ ದೊರೆಯೇ ಕೊಲೆಗಾರನಾದರೆ ರಕ್ಷಿಸುವವರು ಯಾರು?
ಎ.ಟಿ. ರಾಮಸ್ವಾಮಿ, ಮಾಜಿ ಶಾಸಕ