Advertisement

ಹಿರಿಯರ ಆದರ್ಶಗಳು ಮಕ್ಕಳಿಗೆ ಮಾದರಿಯಾಗಲಿ:ಮನೀಶ್‌ ಕುಮಾರ್‌

02:47 PM Feb 02, 2018 | |

ಮಹಾನಗರ : ಪೋದಾರ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

Advertisement

ಮುಖ್ಯ ಅತಿಥಿಯಾಗಿದ್ದ ಇಂಡಿಯನ್‌ ಕೋಸ್ಟಗಾರ್ಡ ಕಮೋಂಡೆಂಟ್‌ ಮನೀಶ್‌ ಕುಮಾರ್‌ ಮಾತನಾಡಿ, ಚಿಕ್ಕ ಮಕ್ಕಳು ಎಲ್ಲವನ್ನೂ ಅನುಸರಿಸುತ್ತಾರೆ. ಅವರಿಗೆ ಪಾಲಕರು, ಶಿಕ್ಷಕರು, ಅಲ್ಲದೆ ಪ್ರತಿಯೊಬ್ಬರೂ ಮಾದರಿಯಾಗಿರಬೇಕೆಂದು ತಿಳಿಸಿದರು.

ಭಾವೀ ಪ್ರಜೆಗಳಾಗಿರುವ ಮಕ್ಕಳು ಶಿಕ್ಷಣದೊಂದಿಗೆ ಜ್ಞಾನವನ್ನೂ ಸಂಪಾದಿಸಬೇಕು. ಸಂವಿಧಾನದ ಮೂಲ ಅಂಶ ಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸೋದರತೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋದಾರ್‌ ಇಂಟರ್‌ ನ್ಯಾಷನಲ್‌ ಶಾಲೆಯು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಓದುವ ಹವ್ಯಾಸ ರೂಢಿಸಿಕೊಳ್ಳಿ
ಪ್ರಾಂಶುಪಾಲ ಟಿ. ಶ್ರೀನಿವಾಸರಾಜು ಮಾತನಾಡಿ, ಪುಸ್ತಕಗಳು ಜ್ಞಾನದ ಸಂಕೇತ. ಮಕ್ಕಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವುದರ ಮೂಲಕ ಓದುವ ಹವ್ಯಾಸ ಬೆಳೆಸಬೇಕು ಎಂದರು.

ಪುಸ್ತಕ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಕ್ಕಳ ಚಿತ್ರಕಲಾ ಪ್ರದರ್ಶನ ಅತಿಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿಗಳು ವಂದೇಮಾತರಂ ನೃತ್ಯದ ಮೂಲಕ ಕಾರ್ಯಕ್ರಮ ಆರಂಭಿಸಿದರು.

Advertisement

ಮಕ್ಕಳ ಹಕ್ಕು ಮತ್ತು ಸೌಲಭ್ಯಗಳ ಬಗ್ಗೆ ಕಿರು ನಾಟಕ ಏರ್ಪಡಿಸಲಾಗಿತ್ತು. ಸಲಾಂ ಇಂಡಿಯಾ ನೃತ್ಯ ಎಲ್ಲರನ್ನೂ ರಂಜಿಸಿತು. ಶ್ರೇಯಾ ಹಾಗೂ ಹೇಮಂತ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next