Advertisement

ಐಕಳೋತ್ಸವ: ತುಳು ಜಾನಪದ ಕ್ರೀಡಾಮೇಳ

11:34 AM Jan 15, 2018 | |

ಐಕಳ: ಗ್ರಾಮೀಣ ಜನರಲ್ಲಿ ಕೃಷಿ ಕಾರ್ಯದ ಕಾಯಕವನ್ನು ಹಿರಿಯರು ಎಷ್ಟು ಕಷ್ಟಪಟ್ಟು ಮಾಡುತ್ತಿದ್ದರು ಎಂಬುವುದನ್ನು ನಮ್ಮ ಯುವ ಜನಾಂಗ ತಿಳಿಯಬೇಕು. ಇಂತಹ ಜಾನಪದ ಕ್ರೀಡಾಕೂಟ ಆಯೋಜಿಸಿದಾಗ ಗ್ರಾಮೀಣ ಜನರ ಒಗ್ಗಟ್ಟು ಪ್ರದರ್ಶನಗೊಳ್ಳುತ್ತದೆ ಎಂದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಕುಮಾರ್‌ ಹೆಗ್ಡೆ ಹೇಳಿದರು.

Advertisement

ಅವರು ಜ. 14 ರಂದು ಐಕಳ ಬಾವ ಕಾಂತಾಬಾರೆ -ಬೂದಾಬಾರೆ ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ತುಳು ಜಾನಪದ ಕ್ರೀಡಾ ಮೇಳ ಐಕಳ್ಳೋತ್ಸವವನ್ನು ಕಂಬಳದ ಮಂಜೊಟ್ಟಿ ಗದ್ದೆಯಲ್ಲಿ ಉದ್ಘಾಟಿಸಿದರು. ಐಕಳ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿ, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕ್ರೀಡೆಗಳನ್ನು ಎಲ್ಲರಿಗೂ ತಿಳಿ ಹೇಳುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಕಿನ್ನಿಗೋಳಿ ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಶಾಂಭವಿ ಶೆಟ್ಟಿ, ಮೆನ್ನಬೆಟ್ಟು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷೆ ಸಾವಿತ್ರಿ
ಶೆಟ್ಟಿ, ಪತ್ರಕರ್ತ ಯಶವಂತ ಐಕಳ, ಕಂಬಳ ಸಮಿತಿ ಸಂಚಾಲಕ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್‌ ಶೆಟ್ಟಿ ಪಡುಹಿತ್ಲು, ಸಂಜೀವ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಸಾಯಿನಾಥ ಶೆಟ್ಟಿ ಸ್ವಾಗತಿಸಿದರು. ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ್‌ ಭಂಡಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next