Advertisement

ಇಂಧನ ಬೆಲೆ ಹೆಚ್ಚಿರುವ 10 ರಾಜ್ಯಗಳಲ್ಲಿ 8 ರಲ್ಲಿ ವಿಪಕ್ಷಗಳ ಆಡಳಿತ: ಬಿಜೆಪಿ

09:05 PM Apr 27, 2022 | Team Udayavani |

ನವದೆಹಲಿ: ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚಿನ ಇಂಧನ ಬೆಲೆಗಳನ್ನು ಉಲ್ಲೇಖ ಮಾಡಿದ ನಂತರ, ಬಿಜೆಪಿಯು ಬುಧವಾರ ಅಂಕಿ ಅಂಶಗಳನ್ನು ಮುಂದಿಟ್ಟು  ಗರಿಷ್ಠ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೊಂದಿರುವ 10 ರಾಜ್ಯಗಳಲ್ಲಿ  ಬಿಜೆಪಿಯೇತರ ಪಕ್ಷಗಳು ಆಳ್ವಿಕೆ ನಡೆಸುತ್ತಿವೆ ಎಂದಿದೆ.

Advertisement

ಪಕ್ಷದ ಮೂಲಗಳು ಇಂಧನ ಬೆಲೆ ಏರಿಕೆಗಾಗಿ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ್ದು, ಭಾರತದಂತಹ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಅವರ ವೆಚ್ಚಗಳು “ತುಲನಾತ್ಮಕವಾಗಿ ಕಡಿಮೆ” ಎಂದು ಹೇಳಿದೆ, ಇದು ಭಾರತದಂತಹ ಕಚ್ಚಾ ತೈಲ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದಿದೆ.

ಆಂಧ್ರಪ್ರದೇಶ (ರೂ. 121.40), ಮಹಾರಾಷ್ಟ್ರ (120.51) ಮತ್ತು ತೆಲಂಗಾಣ (119.49) ಅತಿ ಹೆಚ್ಚು ಪೆಟ್ರೋಲ್ ಬೆಲೆಯನ್ನು ಹೊಂದಿರುವ ಮೂರು ರಾಜ್ಯಗಲಾಗಿದ್ದು, ಇಲ್ಲಿ ಅತಿ ಹೆಚ್ಚು ಡೀಸೆಲ್ ಬೆಲೆ ಆಂಧ್ರ ಪ್ರದೇಶ (ರೂ. 107), ತೆಲಂಗಾಣ (ರೂ. 105.49) ಮತ್ತು ಮಹಾರಾಷ್ಟ್ರ (104.77) ಹೊಂದಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ .

ಮೂರು ರಾಜ್ಯಗಳಲ್ಲದೆ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಜಾರ್ಖಂಡ್ ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ಮತ್ತು 10 ರೂ ಕಡಿತಗೊಳಿಸಿದ ನಂತರ ತೆರಿಗೆಯನ್ನು ಕಡಿತಗೊಳಿಸಲಿಲ್ಲ, ಆದರೆ ಕೇಂದ್ರವು ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಕಳೆದುಕೊಂಡಿದೆ. ಕಡಿತದ ಕಾರಣದಿಂದ , ಏಳು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ತೆರಿಗೆಯನ್ನು ಕಡಿಮೆ ಮಾಡದೆ 11,945 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಗಳಿಸಿದವು, ಬಹುತೇಕ ಬಿಜೆಪಿ ಆಡಳಿತವಿರುವ ರಾಜ್ಯಗಳು ಕಡಿತವನ್ನು ವಿಧಿಸಿದವು ಎಂದಿದೆ.

ಇಂಧನ ಬೆಲೆ ಏರಿಕೆ ವಿಚಾರದಲ್ಲಿ ಕೆಲ ರಾಜ್ಯಗಳು ವ್ಯಾಟನ್ನು ಕಡಿಮೆ ಮಾಡದಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕೇರಳ ರಾಜ್ಯ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಹೆಚ್ಚಳಕ್ಕೆ ಕೇಂದ್ರ ಹೆರುವ ಸೆಸ್ ಮತ್ತು ಸರ್ಚಾರ್ಜ್ ಕಾರಣ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next