Advertisement

ಕಲಬುರಗಿಯಲ್ಲಿ ಒಂದೇ ದಿನ 8 ಜನರಿಗೆ ಕೋವಿಡ್-19 ಸೋಂಕು ಪತ್ತೆ

12:54 PM Apr 29, 2020 | keerthan |

ಕಲಬುರಗಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್-19 ಸೋಂಕು ಮತ್ತಷ್ಟು ವ್ಯಾಪಿಸುತ್ತಿದ್ದು, ಬುಧವಾರ ಒಂದೇ ದಿನ ನಾಲ್ಕೂವರೆ ವರ್ಷದ ಹೆಣ್ಣು ಮಗು ಸೇರಿ ಎಂಟು ಜನರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

Advertisement

ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಎಂಟು ಮಂದಿಗೆ ಕೋವಿಡ್-19 ಹೆಮ್ಮಾರಿ ಪತ್ತೆಯಾಗಿದೆ. ನಾಲ್ಕೂವರೆ ವರ್ಷದ ಹೆಣ್ಣು ಮಗು (ಪಿ-525), 14 ವರ್ಷ (ಪಿ-527), 12 ವರ್ಷ (ಪಿ-532) ಮತ್ತು 17 ವರ್ಷದ ಬಾಲಕಿಯರಿಗೂ (ಪಿ-531) ಸೋಂಕು ಖಚಿತವಾಗಿದೆ.

ಉಳಿದಂತೆ 40 ವರ್ಷದ ಮಹಿಳೆ (ಪಿ-529) ಮತ್ತು 20 ವರ್ಷ (ಪಿ-530), 22 ವರ್ಷ (ಪಿ-528) ಹಾಗೂ 28 ವರ್ಷದ ಯುವಕನಿಗೆ (ಪಿ-528) ಸೋಂಕು ಕಾಣಿಸಿಕೊಂಡಿದ್ದು, ಇವೆಲ್ಲರಿಗೂ ಕೋವಿಡ್-19 ಸೋಂಕಿನಿಂದಲೇ ಮೃತ 55 ವರ್ಷದ ಬಟ್ಟೆ ವ್ಯಾಪಾರಿ ಸಂಪರ್ಕಕ್ಕೆ ಬಂದವರಿಂದಲೇ ಸೋಂಕು ಹರಡಿದೆ.

Advertisement

Udayavani is now on Telegram. Click here to join our channel and stay updated with the latest news.

Next