Advertisement

ದಾಬೋಲಿಮ್ ನಲ್ಲಿ ಇಳಿಯಬೇಕಿದ್ದ ಎಂಟು ವಿಮಾನಗಳು ವಿಳಂಬ

04:21 PM Feb 22, 2023 | Team Udayavani |

ಪಣಜಿ: ಬುಧವಾರ ಬೆಳಗ್ಗೆ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಎಂಟು ವಿಮಾನಗಳನ್ನು ವಿಮಾನ ನಿಲ್ದಾಣದ ಆವರಣದಲ್ಲಿ ಹವಾಮಾನ ವೈಪರಿತ್ಯದಿಂದಾಗಿ  ಭಾರತದ ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಬೇಕಾಯಿತು. ಈ ಎಂಟು ವಿಮಾನಗಳು ಮುಂಬೈ, ದೆಹಲಿ ಮತ್ತು ಮಸ್ಕತ್ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ವಿಮಾನಗಳನ್ನು ಒಳಗೊಂಡಿತ್ತು.

Advertisement

ಈ ಕುರಿತಂತೆ ದೊರೆತ ಮಾಹಿತಿಯ ಅನುಸಾರ, ಬುಧವಾರ ಬೆಳಗ್ಗೆ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಎಂಟು ವಿಮಾನಗಳನ್ನು ಹವಾಮಾನದ  ವೈಪರಿತ್ಯದ ಕಾರಣದಿಂದ ಬೇರೆಡೆ ತಿರುಗಿಸಲಾಗಿದೆ. ಇದರಲ್ಲಿ ಮಸ್ಕತ್‍ನಿಂದ ಬಂದ ಅಂತಾರಾಷ್ಟ್ರೀಯ ವಿಮಾನವೂ ಸೇರಿತ್ತು.  ಮುಂಬೈನಿಂದ ಎರಡು, ಬೆಂಗಳೂರಿನಿಂದ ಎರಡು, ದೆಹಲಿಯಿಂದ ಒಂದು, ಹೈದರಾಬಾದ್‍ನಿಂದ ಒಂದು ಮತ್ತು ಕೊಚ್ಚಿನ್‍ನಿಂದ ಒಂದು ವಿಮಾನವನ್ನು ಸಹ ಒಳಗೊಂಡಿದೆ.  ಹವಾಮಾನ ಪರಿಸ್ಥಿತಿಗಳು ಸಹಜ ಸ್ಥಿತಿಗೆ ಮರಳಿದ ನಂತರ ಈ ವಿಮಾನವನ್ನು ಗೋವಾದ ದಾಬೋಲಿಂ  ವಿಮಾನ ನಿಲ್ದಾಣಕ್ಕೆ ತರಲಾಯಿತು. ಇದರಿಂದಾಗಿ  ವಿಮಾನಗಳು ಎರಡರಿಂದ ಎರಡೂವರೆ ಗಂಟೆ ತಡವಾಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ.

ಈ 8 ವಿಮಾನಗಳು ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್, ಕೊಚ್ಚಿನ್ ಮತ್ತು ಮಸ್ಕತ್‍ನಿಂದ ಬಂದಿದ್ದರು. ನಂತರ ಕೆಲ  ಗಂಟೆಗಳ ವಿಳಂಬದ ನಂತರ ವಿಮಾನಗಳು ದಾಬೋಲಿಮ್‍ನಲ್ಲಿ ಬಂದಿಳಿದಿವೆ. ಏರ್ ಏಷ್ಯಾ, ಗೋ ಫಸ್ಟ್, ಓಮನ್ ಏರ್ ಮತ್ತು ಇಂಡಿಗೋ ವಿಮಾನಗಳು ಒಳಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next