Advertisement

ಈದ್‌ ಶಾಂತಿಯುತವಾಗಿ ಆಚರಿಸಿ

11:59 AM Dec 01, 2017 | Team Udayavani |

ಆಳಂದ: ಪ್ರತಿವರ್ಷದ ಪದ್ಧತಿಯಂತೆ ಈ ಬಾರಿಯೂ ಡಿ.1ರಂದು ಆಚರಿಸಲಾಗುವ ಈದ್‌ ಮಿಲಾದ್‌ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಡಿವೈಎಸ್‌ಪಿ ಪಿ.ಕೆ. ಚೌಧರಿ ಹೇಳಿದರು. ಪಟ್ಟಣದ ಡಿವೈಎಸ್‌ಪಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದ ಶಾಂತಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಪಟ್ಟಣದಲ್ಲಿ ಶಾಂತಿ ಸೌಹಾರ್ದತೆ ಸಂಕೇತವಾಗಿ ಪರಸ್ಪರ ಎಲ್ಲ ಧರ್ಮೀಯರು ಸೇರಿ ಎಲ್ಲ ಹಬ್ಬವನ್ನು ಆಚರಿಸುತ್ತ
ಬರಲಾಗಿದೆ. ಈದ್‌ ಮಿಲಾದ್‌ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಕೈಗೊಂಡು ಪೊಲೀಸ್‌ ಇಲಾಖೆಗೆ ಸಹಕರಿಸಬೇಕು ಎಂದು ಹೇಳಿದರು.

ಸಿಪಿಐ ಹಣಮಂತ ಸಣ್ಣಮನಿ ಮಾತನಾಡಿ, ಕ್ಷುಲ್ಲಕ ಕಾರಣ ಮುಂದೆ ಮಾಡಿ ಕಾದಾಟಕ್ಕೆ ಇಳಿದರೆ ಯಾರೆ ಆಗಿರಲಿ
ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು. ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮೂಲಕ ಶಾಂತಿ ಸೌಹಾರ್ದತೆಗೆ ಹೆಸರಾದ ತಾಲೂಕಿನ ಕೀರ್ತಿಯನ್ನು ಉಳಿಸಬೇಕು ಎಂದರು.

ಪಿಎಸ್‌ಐ ಸುರೇಶ ಬಾಬು ಮಾತನಾಡಿ, ನಿಗದಿತ ಸಮಯಕ್ಕೆ ಈದ್‌ ಮಿಲಾದ ಹಬ್ಬದಂದು ಸಮುದಾದಯವರು
ಮೆರವಣಿಗೆ ಕೈಗೊಳ್ಳಬೇಕು. ಈದ್‌ ಮಿಲಾದ್‌ ಆಗಿರಬಹುದು ಅಥವಾ ಹಿಂದೂ ಹಬ್ಬಗಳಿರಬಹುದು ಪರಸ್ಪರ ಕೂಡಿ ಆಚರಿಸುವ ಒಳ್ಳೆಯ ಪರಂಪರೆಯನ್ನು ಮರಕಳಿಸಬೇಕು. ಹಬ್ಬದ ಮೆರವಣಿಗೆಗೆ ಹೆಚ್ಚಿನ ಬಂದೋಬಸ್ತ್ ಒದಗಿಸಲಾಗುವುದು. ದುಷ್ಕೃತ್ಯದ ಸುಳಿವು ಸಿಕ್ಕರೆ ಶಾಂತಿ ಸಮಿತಿ ಸದಸ್ಯರು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು
ಎಂದರು.

ಶಾಂತಿ ಸಮಿತಿ ಸದಸ್ಯರಾದ ಮೊಹೀಜ್‌ ಕಾರಬಾರಿ, ಸೂರ್ಯಕಾಂತ ತಟ್ಟಿ, ಮಲ್ಲಿಕಾರ್ಜುನ ಬೋಳಣಿ,
ದಿಲೀಪ ಕ್ಷೀರಸಾಗರ, ಅಬ್ದುಲ ಸಲಾಂ ಸಗರಿ, ಅಮ್ಜದ್‌ ಅಲಿ ಖರ್ಜಗಿ, ಸುಲೆಮಾನ ಮುಕುಟ್‌, ಅಬ್ದುಲ ಸತ್ತಾರ
ಮುರುಮಕರ್‌, ಜಹೀರ ಅನ್ಸಾರಿ ಪಾಲ್ಗೊಂಡು ಅಧಿಕಾರಿಗಳ ಸಲಹೆ-ಸೂಚನೆ ಆಲಿಸಿ, ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

Advertisement

ಪೊಲೀಸ್‌ ಪೇದೆ ಸಿದ್ದರಾಮ ಬಿರಾದಾರ, ಮಲ್ಲಿಕಾರ್ಜುನ ಸೊಸೈಟಿ, ರಾಜು ಬಿರಾದಾರ, ಮಲ್ಲಿನಾತ, ರವಿವರ್ಮಾ,
ರಾಜೇಂದ್ರ ರಾಠೊಡ ಇನ್ನಿತರ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next