ಪೌರಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರು ಸೌಮ್ಯ ಸ್ವಭಾವದವರು ಎಂಬ ನಂಬಿಕೆಯೇ ಎಲ್ಲರಲ್ಲೂ ಈವರೆಗೆ ಇದ್ದಿದ್ದು. ಆದರೆ ಈ ನಂಬಿಕೆಗೆ ತದ್ವಿರುದ್ಧವಾದ ವರದಿಯೊಂದನ್ನು ವಿಶ್ವಸಂಸ್ಥೆ ನೀಡಿದೆ. ಅದೇನೆಂದರೆ
ಗಂಡಂದಿರಿಗೆ ದೈಹಿಕ ಹಿಂಸೆ ನೀಡುವುದರಲ್ಲಿ ಈಜಿಪ್ಟ್ ಮಹಿಳೆಯರು ಮೊದಲ ಸ್ಥಾನದಲ್ಲಿದ್ದಾರೆ.
ಶೇ.66ರಷ್ಟು ಮಹಿಳೆಯರು ಅವರ ಗಂಡಂದಿರಿಗೆ ಥಳಿಸುತ್ತಾರಂತೆ.
ಹಾಗಂತ ಭಾರತದ ಮಹಿಳೆಯರೇನೂ ಕಡಿಮೆ ಇಲ್ಲ. ಅವರು ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬ್ರಿಟನ್ ಮಹಿಳೆಯರಿದ್ದಾರೆ.
ಮಹಿಳೆಯರು ಕೇವಲ ಕೈಯನ್ನು ಬಳಸಿ ಹೊಡೆಯುವುದಿಲ್ಲ. ಅವರು ಸೂಜಿ, ಬೆಲ್ಟ್, ಅಡುಗೆ ಮನೆ ಸಾಮಾಗ್ರಿ ಗಳು, ಆಯುಧಗಳನ್ನು ಬಳಸುತ್ತಾರೆ ಎನ್ನಲಾಗಿದೆ. ಇನ್ನೂ ಕೆಲವರು ನಿದ್ರೆ ಮಾತ್ರೆ ಬಳಸಿ ಚರ್ಮ ಸುಡುತ್ತಾರೆ ಎಂದು ಹೇಳಲಾಗಿದೆ.
ಗಂಡನನ್ನು ಥಳಿಸುವ ಮಹಿಳೆಯರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರಿಗೆ ಹಗುರವಾಗಿ ಥಳಿಸುವ ಅವಕಾಶ ನೀಡಬೇಕು ಎಂದು ಕೌನ್ಸಿಲ್ ಆಫ್ ಇಸ್ಲಾಮಿಕ್ ಐಡಿಯಾಲಜಿ ಎಂಬ ಸಂಸ್ಥೆ ಕೋರ್ಟ್‌ಗೆ ಮನವಿ ಮಾಡಿದೆ. ಈ ಕೇಸುಗಳ ಸಂಖ್ಯೆ 6,000 ದಾಟಿದೆಯಂತೆ.