Advertisement

‘Order of the Nile’; ಪ್ರಧಾನಿ ಮೋದಿಗೆ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವ: Video

03:08 PM Jun 25, 2023 | Team Udayavani |

ಕೈರೋ: ಪ್ರಧಾನಿ ನರೇಂದ್ರ ಮೋದಿಯವರಿಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಭಾನುವಾರ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವ ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿಯನ್ನು ಕೈರೋದಲ್ಲಿ ಪ್ರದಾನ ಮಾಡಿದರು.

Advertisement

ಆರ್ಡರ್ ಆಫ್ ದಿ ನೈಲ್ ಅನ್ನು 1915 ರಲ್ಲಿ ಆರಂಭಿಸಲಾಗಿದ್ದು, 1953 ರಲ್ಲಿ ರಾಜಪ್ರಭುತ್ವವನ್ನು ರದ್ದುಪಡಿಸುವವರೆಗೂ ಈಜಿಪ್ಟ್‌ನ ಪ್ರಮುಖ ಆದೇಶಗಳಲ್ಲಿ ಒಂದಾಗಿತ್ತು. ನಂತರ ಇದನ್ನು ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾಗಿ ಮರುಸ್ಥಾಪಿಸಲಾಗಿದೆ. ‘ಆರ್ಡರ್ ಆಫ್ ದಿ ನೈಲ್’ ಶುದ್ಧ ಚಿನ್ನದ ಆಕರ್ಷಕ ದೊಡ್ಡ ಹಾರವಾಗಿದ್ದು,ಅದರ ಮೇಲೆ ಫರೋನಿಕ್ ಚಿಹ್ನೆಗಳು ಇವೆ.

ಕಳೆದ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಧಾನಿ ಮೋದಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದು, ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡುತ್ತಿರುವ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ.ಯುಎಸ್ ಸರ್ಕಾರದಿಂದ ಲೀಜನ್ ಆಫ್ ಮೆರಿಟ್ ಅದರಲ್ಲಿ ಪ್ರಮುಖವಾದದು.

Advertisement

Udayavani is now on Telegram. Click here to join our channel and stay updated with the latest news.

Next