Advertisement

Paris; ಕ್ರೀಡಾ ಗ್ರಾಮದಲ್ಲಿ ಲೈಂಗಿಕ ಕಿರುಕುಳ ನೀಡಿದ ಕುಸ್ತಿ ಪಟು ಬಂಧನ

06:21 PM Aug 09, 2024 | Team Udayavani |

ಪ್ಯಾರಿಸ್ : ಚತುರ್ವಾರ್ಷಿಕ ವಿಶ್ವದ ಅತೀ ದೊಡ್ಡ ಕ್ರೀಡಾ ಕೂಟ ಪ್ಯಾರಿಸ್ ನಲ್ಲಿ ನಡೆಯುತ್ತಿದ್ದು ವ್ಯಾಪಕ ಕಟ್ಟೆಚ್ಚರದ ನಡುವೆಯೂ ಕೆಲವು ಅಹಿತಕರ ಘಟನೆಗಳು ವರದಿಯಾಗುತ್ತಿದ್ದು, ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಈಜಿಪ್ಟ್ ನ ಕುಸ್ತಿಪಟುವನ್ನು ಪ್ಯಾರಿಸ್‌ನಲ್ಲಿ ಬಂಧಿಸಲಾಗಿದೆ ಎಂದು ಫ್ರೆಂಚ್ ಪ್ರಾಸಿಕ್ಯೂಟರ್‌ಗಳು ಶುಕ್ರವಾರ ತಿಳಿಸಿದ್ದಾರೆ.

Advertisement

ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿಯ ಹೇಳಿಕೆಯ ಪ್ರಕಾರ, ಪ್ಯಾರಿಸ್ ಕೆಫೆಯ ಹೊರಗೆ ಮಹಿಳೆಯನ್ನು ಹಿಂದಿನಿಂದ ಬಿಗಿದಪ್ಪಿಕೊಂಡಿದ್ದಕ್ಕಾಗಿ 26 ವರ್ಷದ ಕ್ರೀಡಾಪಟುವನ್ನು ಶುಕ್ರವಾರ ಬೆಳಗ್ಗೆ ಬಂಧಿಸಲಾಗಿದೆ.

ಇದನ್ನೂ ಓದಿ: Olympic controversy ಬಳಿಕ ಭಾರತಕ್ಕೆ ಮರಳಿರುವ ಅಂತಿಮ್‌ ಪಂಘಲ್‌

ಕಚೇರಿ ಕುಸ್ತಿಪಟುವಿನ ಹೆಸರನ್ನು ಹೇಳಲಿಲ್ಲ, ಆದರೆ ಅವರು ಈಜಿಪ್ಟ್‌ನವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಸಲುವಾಗಿ ಪ್ಯಾರಿಸ್‌ನಲ್ಲಿದ್ದರು ಎಂದು ಹೇಳಿದೆ. ಈ ಕುರಿತು ಈಜಿಪ್ಟ್ ಕುಸ್ತಿ ಒಕ್ಕೂಟವು ತತ್ ಕ್ಷಣ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next