ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವ ಯೋಜನೆ ಆರಂಭಿಸಿದ ಸರ್ಕಾರದ ನಡೆ ವಿರೋ ಧಿಸಿ ನಗರದ ಪಾಲಕರೊಬ್ಬರು ತನ್ನ ಪುತ್ರನ ವರ್ಗಾವಣೆ ಪತ್ರ (ಟಿಸಿ) ಪಡೆದು ಬೇರೆ ಶಾಲೆಗೆ ದಾಖಲಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ನಿವಾಸಿ, ಲಿಂಗಾಯತ ಧರ್ಮ ಮಹಾಸಭಾ ರಾಜ್ಯಾಧ್ಯಕ್ಷ ವೀರಣ್ಣ ಕೊರ್ಲಹಳ್ಳಿ ತಮ್ಮ ಪುತ್ರನ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ದಾಖಲಿಸಿರು ವವರು. ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಿದ್ಯಾರ್ಥಿಗಳಲ್ಲಿ ಅತಿಯಾದ ಅಪೌಷ್ಟಿಕತೆ ಇರುವುದನ್ನು ಮನಗೊಂಡು ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಯೋಜನೆ ಆರಂಭಿಸಿದೆ.
ಅದರಂತೆ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸ ಲಾಗತ್ತಿದೆ. ಇದಕ್ಕೆ ಕೆಲ ಮಠಾಧಿಧೀಶರು, ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಗತಿಪರರು ಸ್ವಾಮಿಗಳ ನಡೆಗೂ ವಿರೋಧ ವ್ಯಕ್ತಪಡಿಸಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮೊಟ್ಟೆ ವಿತರಣೆ ಯಾವುದೇ ಕಾರಣಕ್ಕೂ ಸ್ಥಗಿತ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಈ ಬೆಳವಣಿಗೆಯ ಮಧ್ಯೆದಲ್ಲಿ ವೀರಣ್ಣ ಕೊರ್ಲಹಳ್ಳಿ ಅವರು ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆ ಆರಂಭಿಸಿದ್ದ ಒಂದೇ ಕಾರಣಕ್ಕೆ ಪುತ್ರನ ಟಿಸಿ ಹಿಂಪಡೆದು ಬೇರೆ ಶಾಲೆಗೆ ದಾಖಲಿಸಿದ್ದಾರೆ. ಅವರ ಪುತ್ರನನ್ನು ಕೊಪ್ಪಳದಲ್ಲಿ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ದಾಖಲಿಸಿದ್ದರು.
ಮೊಟ್ಟೆ ಕೊಡುವ ಕಾರಣಕ್ಕೆ ಅದು ನನ್ನ ಧರ್ಮ, ಸಂಸ್ಕೃತಿಗೆ ಅಡ್ಡಿಯಾಗುತ್ತಿದೆ. ನಾವೆಲ್ಲ ಮನೆಯಲ್ಲಿ ಬಸವ ಧರ್ಮದ ಆಚರಣೆ ಮಾಡುತ್ತಿದ್ದೇವೆ. ನಾವು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುತ್ತಿದ್ದೇವೆ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿರುವುದು ನಮ್ಮ ಧರ್ಮ, ಸಂಸ್ಕೃತಿಗೆ ಅಡ್ಡಿಯುಂಟಾಗುತ್ತಿದೆ. ನನ್ನ ಮಗು ಮೊಟ್ಟೆ ತಿನ್ನುವುದಿಲ್ಲ. ಎಲ್ಲ ಮಕ್ಕಳಿಗೂ ಮೊಟ್ಟೆ ಕೊಡುವಾಗ ನನ್ನ ಮಗುವಿಗೆ ಮೊಟ್ಟೆ ಕೊಟ್ಟರೆ ಒಂದೆರಡು ದಿನ ತಿನ್ನದೇ ಬಿಡಬಹುದು. ಬಳಿಕ ಆತ ತಿನ್ನಲು ಆರಂಭಿಸಿ, ಮುಂದೆ ಆತನೂ ನನ್ನ ಮನೆಯಲ್ಲಿ ಮೊಟ್ಟೆ ಮಾಡಿ ಕೊಡಿ ಎಂದು ಕೇಳಿದರೆ ನಾವು ಏನು ಮಾಡಬೇಕು. ನಮ್ಮ ಸಂಸ್ಕಾರ, ಧರ್ಮದಲ್ಲಿ ಆ ರೀತಿಯ ಆಚರಣೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ:ಒಂದು ಮಾಡಿದ ಲೋಕ ಅದಾಲತ್! ವಿಚ್ಛೇದನ ಪ್ರಕರಣಗಳ ವಿಲೇವಾರಿಯೇ ಹೆಚ್ಚು
ಸರ್ಕಾರ ಮೊಟ್ಟೆ ಕೊಡುವ ಯೋಜನೆ ಒಳ್ಳೆಯದು ಇರಬಹುದು. ಒಂದೇ ಮಾದರಿ ಯೋಜನೆ ತರಬೇಕು. ಒಬ್ಬರಿಗೆ ಮೊಟ್ಟೆ ಕೊಡುವುದು ಇನ್ನೊಬ್ಬರಿಗೆ ಬಾಳೆ ಹಣ್ಣು ಕೊಡುವುದು ತರವಲ್ಲ. ಎಲ್ಲರಿಗೂ ಬಾಳೆಹಣ್ಣು ಕೊಡ ಬಹುದಿತ್ತು. ಮೊಟ್ಟೆಯನ್ನೇ ಕೊಡಬೇಕೆಂದಿಲ್ಲ. ಸರ್ಕಾರ ಏನೇ ನಿರ್ಧಾರ ಮಾಡಿದರೂ ಅದು ನಮ್ಮ ಧರ್ಮ, ಸಂಸ್ಕೃತಿಗೆ ಅಡ್ಡಿ ಬರುತ್ತಿರುವ ಹಿನ್ನೆಲೆಯಲ್ಲಿ ನಾವು ನನ್ನ ಮಗನ ಟಿಸಿ ಹಿಂಪಡೆದು ಬೇರೆಡೆ ದಾಖಲಿಸಿರುವೆ ಎಂದಿದ್ದಾರೆ.
ಕನ್ನಡದ ಅಪಾರ ಅಭಿಮಾನದಿಂದ, ಸರ್ಕಾರಿ ಶಾಲೆಯಲ್ಲಿ ಹಲವು ಸೌಲಭ್ಯಗ ಳಿವೆ, ಕನ್ನಡ ಶಾಲೆಗಳನ್ನು ಉಳಿಸಬೇಕು ಎನ್ನುವ ಕಾರಣಕ್ಕೆ ನಾನು ನನ್ನ ಮಗನನ್ನು ಸರ್ಕಾರಿ ಶಾಲೆಗೆ ದಾಖಲಿಸಿದ್ದೆ. ಆದರೆ ಮೊಟ್ಟೆ ಕೊಡುವ ಯೋಜನೆ ಆರಂಭಿಸಿದ್ದು, ಇದು ನನ್ನ ಧರ್ಮ, ಸಂಸ್ಕೃತಿಗೆ ಅಡ್ಡಿಯಾಗುತ್ತಿದೆ. ಆ ಕಾರಣಕ್ಕೆ ನನ್ನ ಮಗನ ಟಿಸಿ ಹಿಂಪಡೆದು ಬೇರೆ ಶಾಲೆಗೆ ದಾಖಲಿಸಿದ್ದೇನೆ.
ವೀರಣ್ಣ ಕೊರ್ಲಹಳ್ಳಿ ಲಿಂಗಾಯತ, ಟಿಸಿ ಪಡೆದವರು