Advertisement

ಸಾರಿಗೆ ನೌಕರರ ವೇತನ‌ ಪರಿಷ್ಕರಣೆಗೆ ಪ್ರಯತ್ನ: ಶ್ರೀರಾಮುಲು‌ ಭರವಸೆ

03:04 PM Mar 13, 2022 | Team Udayavani |

ಶಿರಹಟ್ಟಿ (ಗದಗ): ಸಂಸ್ಥೆಯ ಸಿಬ್ಬಂದಿಗಳ ಬಹುದಿಗಳ ಬೇಡಿಕೆಯಾದ ವೇತನ ಪರಿಷ್ಕರಣೆ‌‌ ಜೊತೆಗೆ ಮುಷ್ಕರದ‌ ವೇಳೆ ಅಮಾನತುಗೊಂಡವರನ್ನು ಮೂಲ ಸ್ಥಾನಕ್ಕೆ ನಿಯೋಜಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

Advertisement

ಶಿರಹಟ್ಟಿಯಲ್ಲಿ ನೂತನ ಸಾರಿಗೆ ಘಟಕ ಉದ್ಘಾಟನೆ ಹಾಗೂ ವಾಯುವ್ಯ ಸಾರಿಗೆ ನಿಗಮದ ಒಂಬತ್ತು ವಿಭಾಗಗಳ ಅಪಘಾತ ರಹಿತ ಚಾಲಕರಿಗೆ ಬಂಗಾರ ಮತ್ತು ಬೆಳ್ಳಿ ಪದಕ ವಿತರಣಾ‌ ಸಮಾರಂಭವನ್ನು ಉದ್ಘಾಟಿಸಿ‌ ಅವರು ಮಾತನಾಡಿದರು.

ಜೀವನವೆಂಬ ಯುದ್ಧದಲ್ಲಿ ಸಾರಿಗೆ ಬಸ್ ಚಾಲಕರು ಶ್ರೀಕೃಷ್ಣನಂತೆ ಸಾರಥಿಯಾಗಿದ್ದಾರೆ. ದಿನ ನಿತ್ಯ ಸಂಚಾರದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವರು. ಹೀಗಾಗಿ ಅಪಘಾತ ರಹಿತವಾಗಿ 15 ವರ್ಷ ಸೇವೆ ಸಲ್ಲಿಸಿದದವರಿಗೆ ಚಿನ್ನ ಹಾಗೂ ಐದು ವರ್ಷ ಸೇವೆ ಸಲ್ಲಿಸಿದವರಿಗೆ ಬೆಳ್ಳಿ ಪದಕ ನೀಡಲಾಗಿದೆ ಎಂದು‌ ಪದಕ ಪುರಸ್ಕೃತರಿಗೆ ಅಭಿನಂದಿಸಿದರು.

ಇದನ್ನೂ ಓದಿ:ನಾನು ಸಚಿವ ಸ್ಥಾನಾಕಾಂಕ್ಷಿ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ: ವಿಜಯೇಂದ್ರ

ಮುಖ್ಯಮಂತ್ರಿ‌‌ ಬಸವರಾಜ‌ ಬೊಮ್ಮಾಯಿ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್ ವೇಳೆ ಸಾರಿಗೆ ಸಿಬ್ಬಂದಿಗಳ ವೇತನ‌ ಪರಿಷ್ಕರಣೆ ಕುರಿತು ಪ್ರಸ್ತಾಪಿಸಲಾಗಿತ್ತು. ಆದರೆ, ಕೋವಿಡ್ ಕಾರಣದಿಂದ ಈ ಬಾರಿ ಸಾಧ್ಯವಾಗಿಲ್ಲ. ಆದರೆ, ಮುಂದಿನ‌ ದಿನಗಳಲ್ಲಿ ವೇತನ‌ ಪರಿಷ್ಕರಣೆ ಮಾಡಿಕೊಡುವುದಾಗಿ ಹೇಳಿದರು.

Advertisement

ಅಲ್ಲದೇ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸಿದ ಮುಷ್ಕರದ ವೇಳೆ ಅಮಾನತುಗೊಂಡ ಸಿಬ್ಬಂದಿಯನ್ನು ಮಾನವೀಯತೆ ದೃಷ್ಟಿಯಿಂದ ಮತ್ತೆ ಸೇವೆಗೆ ನೇಮಿಸಿಕೊಳ್ಳಲಾಗಿದೆ. ಅವರನ್ನು ಮೂಲ ಘಟಕಗಳಿಗೆ ನಿಯೋಜಿಸಬೇಕು‌‌ ಎಂಬ ಬೇಡಿಕೆಯಿದೆ. ಆದರೆ, ಮುಷ್ಕರ ನಿರತರ ಆ ಪೈಕಿ 800 ಜನರ ಪ್ರಕರಣಗಳು ಕೋರ್ಟ್ ನಲ್ಲಿವೆ. ಅವು ಕಾರ್ಮಿಕ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ‌ ಬಳಿಕ ಸೂಕ್ತ ಕ್ರಮ ವಹಿಸಲು ಪ್ರಯತ್ನಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next