Advertisement

ಸಾರ್ವಜನಿಕ ಸ್ಥಳದಲ್ಲಿರುವ ದೇಗುಲಗಳ ಸಕ್ರಮಕ್ಕೆ ಪ್ರಯತ್ನ

03:21 PM Sep 16, 2021 | Team Udayavani |

ಮೈಸೂರು: ದೇವಾಲಯಗಳ ತೆರವು ವಿಚಾರವಾಗಿ ಪಟ್ಟಿಯಲ್ಲಿರುವ ನಗರದ ವ್ಯಾಪ್ತಿಯ ದೇವಾಲಯಗಳನ್ನು ಉಳಿಸಿಕೊಳ್ಳಲು ಮುಡಾ ಯೋಜನೆ ರೂಪಿಸಿದ್ದು, ಸಾರ್ವಜನಿಕ ಸ್ಥಳ, ಉದ್ಯಾನದಲ್ಲಿರುವ ದೇಗುಲಗಳನ್ನು ಸಕ್ರಮ ಮಾಡುವುದು ಹಾಗೂ ರಸ್ತೆಯಲ್ಲಿರುವ ದೇವಾಲಯ ವನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್‌ ತಿಳಿಸಿದ್ದಾರೆ.

Advertisement

ಮುಡಾ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 18 ದೇವಸ್ಥಾನಗಳನ್ನು ಸಕ್ರಮ ಮಾಡಿದ್ದೇವೆ. ಉಳಿದ ದೇವಾ ಲಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಸಕ್ರಮ ಮಾಡಲು ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ಉದಯವಾಣಿಗೆ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳ, ಉದ್ಯಾನ, ರಸ್ತೆಗಳಲ್ಲಿ ಅನಧಿಕೃತವಾಗಿರುವ ಧಾರ್ಮಿಕ ಕಟ್ಟಡಗಳನ್ನು ಕೇಸ್‌ ಟು ಕೇಸ್‌(ಒಂದೊಂದುದೇವಾಲಯವನ್ನು ಪ್ರತ್ಯೇಕವಾಗಿ ಪರಿಗಣಿಸಿ) ಇತ್ಯರ್ಥ ಪಡಿಸುವಂತೆ ನ್ಯಾಯಾಲಯ ಆದೇಶಿಸಿದ್ದು, ಆದೇಶದಲ್ಲಿ ಸರ್ಕಾರದ ಜಾಗದಲ್ಲಿರುವ, ಅನುಮತಿ ಪಡೆಯದ
ಹಾಗೂ ರಸ್ತೆಯಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡಲು ಮೊದಲ ಅವಕಾಶ ನೀಡಿ ಎಂದು ಹೇಳಿದೆ. ಸಕ್ರಮ ಮಾಡಲು ಸಾಧ್ಯ
ಇಲ್ಲದಿದ್ದರೆ ಬೇರೆ ಸ್ಥಳಗಳಿಗೆ ತೆರವುಗೊಳಿಸಬಹುದು. ಒಂದು ವೇಳೆ ಸಕ್ರಮ ಮಾಡಲಾಗದೆ, ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸಾಧ್ಯವೇ ಇಲ್ಲದಿದ್ದಲ್ಲಿ ಮಾತ್ರ ಅವುಗಳನ್ನು ತೆರವು ಮಾಡಿ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮೈಸೂರುನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು89 ಧಾರ್ಮಿಕ ಕೇಂದ್ರಗಳನ್ನು ಗುರುತಿಸಲಾಗಿದೆ.

ಇದನ್ನೂ ಓದಿ:ಶೇ.15 ರಷ್ಟು ಶಾಲಾ ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶ: ಸರ್ಕಾರದ ಆದೇಶ ರದ್ದು

ಇವುಗಳ ಕುರಿತು ತೀರ್ಮಾನ ಆಗುವ ತನಕ ಹಾಗೂ ತಮ್ಮ ಗಮನಕ್ಕೆ ಬಾರದೆ ಯಾವುದೇಕ್ರಮತೆಗೆದುಕೊಳ್ಳಬಾರದು ಎಂದು ಈಗಾಗಲೇ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅನುಮತಿ ಪಡೆಯದೆ ಅಥವಾ ಕ್ರಮ ಎಂದು ಗುರುತಿಸಲಾಗಿರುವ 89 ಕೇಂದ್ರಗಳನ್ನು ನಾವು ಸಕ್ರಮಗೊಳಿಸಲು ಮುಡಾ ಮತ್ತು ಪಾಲಿಕೆಯಿಂದ ವಿಶೇಷ ಪ್ರಯತ್ನ ನಡೆಸುತ್ತೇವೆ.

Advertisement

ನಗರದಲ್ಲಿನ ಉದ್ಯಾನವನಗಳಲ್ಲಿ ಇರುವ ಧಾರ್ಮಿಕ ಕೇಂದ್ರಗಳ ಜಾಗ ವನ್ನು ಸಿಎ ನಿವೇಶನ ಅಂದರೆ ನಾಗರಿಕರ ಮೂಲಭೂತ ಸೌಲಭ್ಯಕ್ಕೆ ಮೀಸಲಿಟ್ಟ ಜಾಗ ಎಂದು ಪರಿವರ್ತಿಸುತ್ತೇವೆ. ಜೊತೆಗೆ ಅಷ್ಟೇ ವಿಸ್ತೀರ್ಣದಲ್ಲಿ ಬೇರೆ ಸಿಎ ಸ್ಥಳದಲ್ಲಿ ಉದ್ಯಾನ ಮಾಡುತ್ತೇವೆ. ಇದರಿಂದ ಧಾರ್ಮಿಕ ಕೇಂದ್ರ ಸಕ್ರಮವಾದಂತಾಗಿದೆ. ಅದೇ ರೀತಿ ಉದ್ಯಾನವನ ಹಾಗೂ ಪಾರ್ಕ್‌ಗೆ ಬಿಟ್ಟಿರುವ ಅನುಪಾತವನ್ನೂ ಕಾಪಾಡಿದಂತಾಗುತ್ತದೆ. ಒಂದು ವೇಳೆ ಸಿಎ ಪರಿವರ್ತಿಸಲು ಸಾಧ್ಯವೇ ಇಲ್ಲದಿದ್ದಲ್ಲಿ ಹತ್ತಿರದ ಮುಡಾ ಸ್ಥಳಕ್ಕೆ ಸ್ಥಳಾಂತರ ಮಾಡಲು ಪ್ರಯತ್ನಿಸುತ್ತೇವೆ. ಈ ರೀತಿ ಸಿಎ ಜಾಗವನ್ನಾಗಿ ಪರಿವರ್ತಿಸುವಾಗ ಆ ಜಾಗಕ್ಕೆ ಇಂತಿಷ್ಟು ಎಂದು ಹಣ ಕಟ್ಟಬೇಕಾಗುತ್ತದೆ.

ಆದರೆ, ಹಲವರಿಗೆ ಅಷ್ಟೊಂದು ಹಣ ಪಾವತಿಸಲು ಕಷ್ಟವಾಗುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಿದ್ದೇವೆ. ಧಾರ್ಮಿಕ ಕೇಂದ್ರಗಳಿಗೆ ಬಳಸುವ ಮೂಲಭೂತ ನಿವೇಶನಗಳನ್ನು ಪ್ರಾಧಿಕಾರ ನಿಗದಿ ಪಡಿಸಿರುವ ಮೊತ್ತದ ಶೇ. 25ಕ್ಕೆ ಕೊಡಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದೇವೆ. ಇದರಿಂದ ಸಮಸ್ಯೆಪರಿಹಾರವಾಗಲಿದೆ. ಈಗಿರುವ ಧಾರ್ಮಿಕ ಕೇಂದ್ರಗಳನ್ನು ಶೇ.100 ರಷ್ಟು ಉಳಿಸಿಕೊಳ್ಳಲು ಪ್ರಯತ್ನಿಸುವುದರೊಂದಿಗೆ ಇನ್ನು ಮುಂದೆ ಅಕ್ರಮ ಕೇಂದ್ರಗಳನ್ನು ನಿರ್ಮಿಸದಂತೆ ಎಚ್ಚರ ವಹಿಸುತ್ತೇವೆಎಂದು ಹೇಳಿದ್ದಾರೆ.

ದೇವಾಲಯಗಳನ್ನು ತೆರವು ಮಾಡಲೇ ಬೇಕು ಎನ್ನುವುದಾದರೆ ಅಂತಹ ದೇವಾಲಯಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿ, ದೇವಾ
ಲಯ ನಿರ್ಮಿಸಲು ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ.
– ಎಚ್‌.ವಿ. ರಾಜೀವ್‌,
ಮುಡಾ ಅಧ್ಯಕ್ಷರು

 

Advertisement

Udayavani is now on Telegram. Click here to join our channel and stay updated with the latest news.

Next