Advertisement

Moodubelle ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ದೇವರ ಬಿಂಬ ಪ್ರತಿಷ್ಠೆ-ಅಷ್ಟಬಂಧ-ಕಲಶಾಭಿಷೇಕ

10:00 AM Apr 22, 2024 | Team Udayavani |

ಶಿರ್ವ: ಐತಿಹಾಸಿಕ ಹಿನ್ನೆಲೆಯಿರುವ ಜೀರ್ಣೋದ್ಧಾರಗೊಂಡ ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲದಲ್ಲಿ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವರ ಬಿಂಬ ಪ್ರತಿಷ್ಠೆ,ಅಷ್ಟಬಂಧ ಮತ್ತು ಕಲಶಾಭಿಷೇಕವು ಕ್ಷೇತ್ರದ ತಂತ್ರಿಯವರಾದ ವಿದ್ವಾನ್‌ ಸಗ್ರಿ ಹರಿದಾಸ್‌ ಐತಾಳ್‌ ಅವರ ನೇತೃತ್ವದಲ್ಲಿ ಬ್ರಹ್ಮಶ್ರೀ ಮುರಳೀಧರ ತಂತ್ರಿ ದೇರೇಬೈಲು, ಬ್ರಹ್ಮಶ್ರೀ ಮಧುಸೂಧನ ತಂತ್ರಿ ಪುತ್ತೂರು ಮತ್ತು ಋತ್ವಿಜರ ಸಹಕಾರದೊಂದಿಗೆ ಎ. 21 ರಂದು ನೆರವೇರಿತು. ವೇ|ಮೂ| ಪಂಜ ಭಾಸ್ಕರ ಭಟ್‌ ಪ್ರತಿಷ್ಠಾ ವಿಧಿಯ ಮಹತ್ವ ವಿವರಿಸಿದರು.

Advertisement

ಎ. 20 ರಂದು ಶ್ರೀ ಮಹಾಲಿಂಗೇಶ್ವರ, ಶ್ರೀ ಸೂರ್ಯನಾರಾಯಣ ಮತ್ತು ಶ್ರೀ ಮಹಾಗಣಪತಿ ದೇವರ ಬಿಂಬಾಧಿವಾಸ ನಡೆದು ಮಂಡಲ ಪೂಜೆ, ಅಧಿವಾಸ ಹೋಮ ನಡೆಯಿತು. ರಾತ್ರಿ ವಿವಿಧ ಭಜನ ತಂಡಗಳಿಂದ ಭಜನೆ ಮತ್ತು ಕುಣಿತ ಭಜನೆ ನಡೆದು ರಾತ್ರಿಯಿಡೀ ಜಾಗರಣೆ ನಡೆದಿತ್ತು.

ರವಿವಾರ ಬೆಳಗ್ಗೆ 5-00ರಿಂದ ಗಣಯಾಗ, ಸಂಜೀವಿನಿ ಮೃತ್ಯುಂಜಯ ಯಾಗ ನಡೆಯಿತು. ಬೆಳಗ್ಗೆ 5-50ಕ್ಕೆ ಶ್ರೀ ಮಹಾಲಿಂಗೇಶ್ವರ, ಶ್ರೀ ಸೂರ್ಯನಾರಾಯಣ, ಶ್ರೀ ಮಹಾಗಣಪತಿ ದೇವರ ಬಿಂಬ ಮತ್ತು ಶ್ರೀ ಧೂಮಾವತಿ ಮತ್ತು ಬಂಟ ದೈವದ ಪ್ರತಿಷ್ಠೆ ನಡೆಯಿತು. ಬಳಿಕ ಅಷ್ಟಬಂಧ, ಪ್ರತಿಷ್ಠಾ ವಿಧಿ, ಕಲಶಾಭಿಷೇಕ, ಪ್ರಸನ್ನಪೂಜೆ, ಮಹಾಪೂಜೆ ನಡೆಯಿತು. ಸಂಜೆ ಶ್ರೀ ಮಹಾಗಣಪತಿ ದೇವರಿಗೆ 108 ಕಲಶಾಧಿವಾಸ, ನಾಗಪರಿವಾರ ದೇವರುಗಳ ಸನ್ನಿಧಿಯಲ್ಲಿ ಕಲಶಾಧಿವಾಸ, ಅಧಿವಾಸ ಹೋಮ ನಡೆಯಿತು. ಸಂಜೆ ಮೂಡುಶೆಡ್ಡೆ ಗೀತ ನರ್ತನ ತಂಡದಿಂದ ಭಗವದ್ಭಕ್ತಿ ಪಾರಮ್ಯಪೌರಾಣಿಕ‌ ಗೀತ ರೂಪಕ ನಡೆಯಿತು.

ಕಾರ್ಯಕ್ರಮದಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರರಾದ ಬೆಳ್ಳೆ ಮೇಲ್ಮನೆ ವಸಂತ ಶೆಟ್ಟಿ,ಬೆಳ್ಳೆ ಕೆಳಮನೆ ಡಾ| ರಾಮರತನ್‌ ರೈ, ಮೊಕ್ತೇಸರ/ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಹೆಚ್‌. ಭಾಸ್ಕರ ಶೆಟ್ಟಿ , ದೇಗುಲದ ಅರ್ಚಕರಾದ ಶಶಿಕಾಂತ ಉಪಾಧ್ಯಾಯ , ರಾಘವೇಂದ್ರ ಆಚಾರ್ಯ ,ಸುಬ್ರಹ್ಮಣ್ಯ ಆಚಾರ್ಯ , ಪವಿತ್ರಪಾಣಿ ರಾಮಮೂರ್ತಿ ಹೆಬ್ಟಾರ್‌, ಸುದರ್ಶನ ಆಚಾರ್ಯ, ವೇ|ಮೂ| ವಿಖ್ಯಾತ್‌ ಭಟ್‌, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಬೆಳ್ಳೆ ಮೇಲ್ಮನೆ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿಬೆಳ್ಳೆ ರಾಜೇಂದ್ರ ಶೆಟ್ಟಿ,ಜತೆ ಕಾರ್ಯದರ್ಶಿಗಳಾದ ಬೆಳ್ಳೆ ನಿರಂಜನ್‌ ರಾವ್‌, ರಂಜನ್‌ ಶೆಟ್ಟಿ ಬೆಳ್ಳೆ ಪಡುಮನೆ, ಕೋಶಾಧಿಕಾರಿ ಬೆಳ್ಳೆ ಚಂದ್ರಕಾಂತ ರಾವ್‌, ಮುಂಬೈ ಸಮಿತಿಯ ಅಧ್ಯಕ್ಷ ವಿನಯ ಶೆಟ್ಟಿ ಬೆಳ್ಳೆ ಪಾಲೆಮಾರ್‌, ಸಂಚಾಲಕರಾದ ಬೆಳ್ಳೆ ಮೇಲ್ಮನೆ ಕಿಶೋರ್‌ ಶೆಟ್ಟಿ ಮತ್ತು ಬೆಳ್ಳೆ ಕೆಳಮನೆ ಡಾ| ಪ್ರಕಾಶ್ಚಂದ್ರ ಶೆಟ್ಟಿ, ಬೆಳ್ಳೆ ಮೇಲ್ಮನೆ ರೇಖಾ ಶೆಟ್ಟಿ, ಸುರೇಶ್‌ ಶೆಟ್ಟಿ ಪಾಲೇಮಾರ್‌, ವ್ಯವಸ್ಥಾಪನ ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಗ್ರಾಮಸ್ಥರು ಮತ್ತು ಭಕ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next