Advertisement
ಬೆಳಗಾವಿ ಅಧಿವೇಶನದ ವೇಳೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ನಡೆಸುತ್ತಿರುವ ಕುರಿತಂತೆ ಸುದ್ದಿಗಾರರ ಜತೆ ಮಾತನಾಡಿ, ಸಂಸ್ಥೆಯಲ್ಲಿ ಹಲವು ನೌಕರರ ಸಂಘಟನೆಗಳಿವೆ. ಇದರಲ್ಲಿ ಕೆಲವು ಮುಖಂಡರುಗಳ ಜತೆ ಮಾತುಕತೆ ಕೂಡ ಆಗಿದೆ. ಸಂಸ್ಥೆಯ ಆರ್ಥಿಕ ಸ್ಥಿತಿಯ ವಾಸ್ತವತೆ ಅವರಿಗೂ ತಿಳಿದಿದೆ. ಬಿಜೆಪಿ ಸರಕಾರ ಅಧಿಕಾರ ಬಿಟ್ಟಕೊಟ್ಟಾಗ 5,900 ಕೋಟಿ ರೂ .ಸಾಲ ಇಟ್ಟು ಹೋಗಿದ್ದಾರೆ. 2022ರ ಒಪ್ಪಂದದಂತೆೆ ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ 8 ತಿಂಗಳ ಬಾಕಿ ನೀಡಬೇಕಾಗಿದೆ. ಇವೆಲ್ಲ ಅವರಿಗೆ ಗೊತ್ತಿದೆ. ನೌಕರರ ಬೇಡಿಕೆಗಳನ್ನು ಸರಕಾರ ಈಡೇರಿಸಲಿದೆ ಎಂದು ಹೇಳಿದರು.
2018ರಲ್ಲಿ ನಮ್ಮ ಸರಕಾರ ಹೋಗಿ ಬಿಜೆಪಿ ಸರಕಾರ ಬಂದಾಗ ಪಿಎಫ್ ಹಣ 13 ಕೋಟಿ 71 ಲಕ್ಷ ರೂ. ಮಾತ್ರ ಬಾಕಿ ಇತ್ತು. ಆದರೆ 5 ವರ್ಷಗಳ ಅವಧಿಯಲ್ಲಿ ಬಿಜೆಪಿ ಸರಕಾರ ಪಿಎಫ್ ಹಣ ಕಟ್ಟಿಲ್ಲ. 1,380 ಕೋಟಿ ಪಿಎಫ್ ಹಣವನ್ನೇ ಬಿಜೆಪಿ ಅವರು ಬಿಟ್ಟು ಹೋಗಿದ್ದಾರೆ. ನಮ್ಮ ಸರಕಾರದ ಬಜೆಟ್‌ನಲ್ಲಿ ಕೂಡ ಬಾಕಿ ಉಳಿದಿದೆ. ಪಿಎಫ್ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.