Advertisement

ಬೆಂಗಳೂರಿನ ಅಕ್ರಮ ವಲಸಿಗರನ್ನು ಹೊರ‌ ಕಳುಹಿಸುವ ಪ್ರಯತ್ನವಾಗುತ್ತಿದೆ: ಆರಗ ಜ್ಞಾನೇಂದ್ರ

02:50 PM Aug 15, 2021 | Team Udayavani |

ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಅಕ್ರಮ ವಲಸಿಗರದ್ದು ಭಾರೀ ಸಮಸ್ಯೆಯಿದೆ. ಅವರನ್ನು ಹೊರ‌ ಕಳುಹಿಸುವ ಭಾರೀ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ವಲಸಿಗರು ಬೇಕೆಂದೇ ಸಣ್ಣ-ಪುಟ್ಟ ಕೇಸ್ ಹಾಕಿಸಿಕೊಳ್ಳುತ್ತಾರೆ. ಪ್ರಕರಣ ಮುಗಿಯುವವರೆಗೂ ಹೊರಗೆ ಹೋಗುವ ಹಾಗಿಲ್ಲ. ಇಲ್ಲೇ ನೆಲೆಸುವ ಪ್ರಯತ್ನವೂ ಆಗುತ್ತಿದೆ ಎಂದರು.

ಹೊರ‌ ಕಳುಹಿಸುವ ಭಾರೀ ಪ್ರಯತ್ನ ನಡೆಯುತ್ತಿದೆ. ವೀಸಾ ಅವಧಿ ಮುಗಿದವರನ್ನು ಅರೆಸ್ಟ್ ಮಾಡಬೇಕು, ಇಲ್ಲ ಹೊರದೂಡಬೇಕು. ಇದನ್ನು ವಿಶೇಷವಾಗಿ ಹೇಳಿದ್ದೇನೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next