ನವದೆಹಲಿ:ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಶ್ಚಂದ್ರ ಬೋಸ್, ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರಂತಹ ಹಲವು ಹೋರಾಟಗಾರರ ವ್ಯಕ್ತಿತ್ವವನ್ನು ಕಾಂಗ್ರೆಸ್ ಕಳೆಗುಂದಿಸಿರುವುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಶನಿವಾರ(ಅಕ್ಟೋಬರ್ 16) ಟೀಕಿಸಿದ್ದು, ಇಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಿಗೆ ಇತಿಹಾಸದ ಪುಟದಲ್ಲಿ ಸೂಕ್ತ ಸ್ಥಾನ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ಶ್ರಮವಹಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ
ಅಮಿತ್ ಶಾ ಅಂಡಮಾನ್ ನಲ್ಲಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ದ್ವೀಪದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಸ್ವಾತಂತ್ರ್ಯ ಹೋರಾಟಗಾರರ ಪವಿತ್ರ ಸ್ಥಳವಾದ ಅಂಡಮಾನ್ ಮತ್ತು ನಿಕೋಬಾರ್ ಗೆ ಒಂದು ಬಾರಿಯಾದರು ಯುವಕರು ಭೇಟಿ ನೀಡಬೇಕು ಎಂದು ಹೇಳಿದರು.
ಸುಭಾಶ್ಚಂದ್ರ ಬೋಸ್ ದ್ವೀಪಕ್ಕೆ ಬರಲು ನಾನು ಉತ್ಸುಕನಾಗಿದ್ದೇನೆ. 1947ರಲ್ಲಿ ಭಾರತ ಸಂಪೂರ್ಣವಾಗಿ ಸ್ವಾತಂತ್ರ್ಯ ಪಡೆಯಲು ಯಶಸ್ವಿಯಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿಗೆ ಆಗಮಿಸಲು ಸಂತೋಷವಾಗುವುದು ಸಹಜವೇ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸ್ವಾತಂತ್ರ್ಯದ ಪವಿತ್ರ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ದ್ವೀಪಕ್ಕೆ ಭೇಟಿ ನೀಡಬೇಕು ಎಂದು ಶಾ ಮನವಿ ಮಾಡಿಕೊಂಡರು.