Advertisement
ಇದೇ ತಿಂಗಳಿಂದ ಯೋಜನೆ ಅನುಷ್ಠಾನ: ಪ್ರಧಾನಿ ಮೋದಿ ರೈತರ ಅನೇಕ ಕಷ್ಟಗಳನ್ನು ತಿಳಿದುಕೊಂಡು ವಿವಿಧ ಯೋಜನೆ ಜಾರಿ ಮಾಡಿದ್ದಾರೆ. ದೇಶದಲ್ಲಿ ಇಂದು ಯಾವುದೇ ರಾಜ್ಯದಲ್ಲಿ ಗೊಬ್ಬರದ ಸಮಸ್ಯೆ ಇಲ್ಲದಂತೆ ಮಾಡಿದ್ದಾರೆ. ಬಜೆಟ್ ಮಂಡನೆ ಸಂದರ್ಭದಲ್ಲಿ ರೈತರಿಗೆ ಪ್ರತಿ ವರ್ಷಕ್ಕೆ ಆರು ಸಾವಿರ ಹಣ ಖಾತೆಗೆ ವರ್ಗಾವಣೆ ಮಾಡುವ ಯೋಜನೆ ಘೋಷಣೆ ಮಾಡಿದ್ದು, ಇದೇ ತಿಂಗಳಿಂದ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ತಿಳಿಸಿದರು.
ಬೆಳೆಗಳಿಗೆ ಉತ್ತಮ ಬೆಲೆ ನೀಡುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಗೆ ನೆರವು ನೀಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ರಾಜಕುಮಾರಸಿಂಗ್ ಹಜಾರೆ, ಡಾ| ಕೆ.ಎನ್. ಕಟ್ಟಿಮನಿ, ಡಾ| ಪ್ರಶಾಂತ ಅರ್ಮೊರಿಕರ್, ಡಾ| ಬಿ.ಎಂ. ಚಿತ್ತಾಪುರೆ, ರವಿ ದೇಶಮುಖ, ಡಾ| ಮಲ್ಲಿಕಾರ್ಜುನ ಬಾವಗೆ, ವಿದ್ಯಾನಂದ. ಸಿ ಸೇರಿದಂತೆ ಇತರೆ ಅಧಿಕಾರಿಗಳು, ರೈತರು ಭಾಗವಹಿಸಿದ್ದರು.
Related Articles
ಭಗವಂತ ಖೂಬಾ, ಸಂಸದ
Advertisement