Advertisement

ಸಮರ್ಥ ವೇಗಿಗಳು ತಂಡಕ್ಕೆ ಅಗತ್ಯ: ಕುಂಬ್ಳೆ

09:49 AM Jan 01, 2020 | mahesh |

ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಹಿನ್ನಲೆಯಲ್ಲಿ ಪ್ರತಿಯೊಂದು ತಂಡಗಳು ಬಲಿಷ್ಠ ಯೋಜನೆ ರೂಪಿಸಿಕೊಳ್ಳುತ್ತಿದೆ. ಬಲಿಷ್ಠ ತಂಡವನ್ನು ಕಟ್ಟಿಕೊಳ್ಳುವುದರತ್ತ ಎಲ್ಲ ತಂಡಗಳು ಕಾರ್ಯಮಗ್ನವಾಗಿದೆ. ಟೀಮ್‌ ಇಂಡಿಯಾ ಸಹ ನೂತನ ತಂಡದ ರಚನೆಯ ಹುಡುಕಾಟದಲ್ಲಿದೆ.

Advertisement

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಆಟಗಾರ ಅನಿಲ್‌ ಕುಂಬ್ಳೆ, ಆಲ್‌ರೌಂಡರ್‌ಗಳಿಗಿಂತ ವಿಕೆಟ್‌ ಪಡೆ ಯಬಲ್ಲ ವೇಗದ ಬೌಲರ್‌ಗಳು ತಂಡಕ್ಕೆ ಆವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್‌ ಆಸ್ಟ್ರೇಲಿಯದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಆಯೋಜನೆಯಾಗಲಿದೆ. ವೇಗಿಗಳಿಗೆ ಹೆಚ್ಚು ಸಹಕಾರಿ ಯಾಗುವ ಆಸೀಸ್‌ ಪಿಚ್‌ನಲ್ಲಿ ವಿಕೆಟ್‌ ಉರುಳಿಸಬಲ್ಲ ವೇಗಿಗಳು ಹೆಚ್ಚು ಪ್ರಭಾವಿ ಎನಿಸಿಕೊಳ್ಳುವ ಸಾಧ್ಯತೆಯಿದೆ.

ಇಬ್ಬರು ಸ್ಪಿನ್ನರ್ ತಂಡದಲ್ಲಿರಲಿ
ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಹಲ್‌ ಅವರಂತಹ ವಿಕೆಟ್‌ ಪಡೆಯಬಲ್ಲ ಬೌಲರ್‌ಗಳು ತಂಡದಲ್ಲಿರಬೇಕು. ಯಾಕೆಂದರೆ ತೇವಯುಕ್ತವಾದ ಮೈದಾನದಿಂದ ಚೆಂಡು ಒದ್ದೆಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಇಬ್ಬರು ಸ್ಪಿನ್ನರ್‌ಗಳು ತಂಡದಲ್ಲಿರಬೇಕಾಗಿರುವುದು ಅತಿ ಅಗತ್ಯ ಎಂದು ಕುಂಬ್ಳೆ ಹೇಳಿದ್ದಾರೆ.

ವಿಕೆಟ್‌ ಕಬಳಿಸಬಲ್ಲ ಬೌಲರ್‌ಗಳ ಆಯ್ಕೆಯತ್ತ ಟೀಮ್‌ ಇಂಡಿಯಾ ಗಮನ ಹರಿಸಿದರೆ ಸೂಕ್ತ. ಉಳಿದಂತೆ ಆಸ್ಟ್ರೇಲಿಯದ ಪರಿಸ್ಥಿತಿಗೆ ಹೊಂದಿಕೊಂಡು ನಿರ್ವಹಣೆ ನೀಡಬಲ್ಲ ಆಟಗಾರರನ್ನು ಗುರುತಿಸಿದರೆ ಬಲಿಷ್ಠ ತಂಡದ ರಚನೆ ಸಾಧ್ಯ ಎಂದು ಕುಂಬ್ಳೆ ಸೂಕ್ತವಾದ ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next