Advertisement

ದಕ್ಷತೆ, ಶಿಸ್ತು ಪಾಲನೆ -ಗೃಹರಕ್ಷಕರಿಗೆ ತರಬೇತಿ ಅಗತ್ಯ

07:40 AM Apr 29, 2018 | |

ಉಡುಪಿ: ಕರ್ತವ್ಯ ಪಾಲನೆಯಲ್ಲಿ ದಕ್ಷತೆ ಹಾಗೂ ಶಿಸ್ತು ಪಾಲನೆ ಗೃಹರಕ್ಷಕರಲ್ಲಿ ರೂಢಿಯಾಗಿ ಬರಬೇಕು ಎಂದಾದರೆ ಅವರಿಗೆ ಸರಿಯಾದ ತರಬೇತಿಯ ಅವಶ್ಯಕತೆ ಇದೆ. ಸೇವಾ ಮನೋಭಾವದ ಜೊತೆಯಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಹೊಂದಿರುವ ಗೃಹರಕ್ಷಕರ ಸೇವೆ ಅತ್ಯಂತ ಸ್ಮರಣೀಯ ಎಂದು ಡಿಡಿಪಿಐ ಶೇಷಶಯನ ಕೆ. ಹೇಳಿದ‌ರು.

Advertisement

ಜಿಲ್ಲಾ ಗೃಹರಕ್ಷಕರ ಕಚೇರಿಯಲ್ಲಿ ಎ. 28ರಂದು ನಡೆದ ಗೃಹರಕ್ಷಕರ ಮೂಲ ವಾರ್ಷಿಕ ತರಬೇತಿ ಶಿಬಿರವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

ಕರ್ತವ್ಯ ಬದ್ಧತೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕದಳ ಜಿಲ್ಲಾ ಕಮಾಂಡೆಂಟ್‌ ಡಾ| ಪ್ರಶಾಂತ್‌ ಶೆಟ್ಟಿ ಅವರು ಮಾತನಾಡಿ, ಸರಕಾರದ ವಿವಿಧ ಇಲಾಖೆಗಳೊಂದಿಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಲ್ಲಿ ಕರ್ತವ್ಯ ಬದ್ಧತೆ ಹಾಗೂ ಶಿಸ್ತು ಶಾಶ್ವತವಾಗಿ ಇರಬೇಕು. ಈ ಹಿನ್ನೆಲೆಯಲ್ಲಿ ಸರಕಾರದಿಂದ ಆಯೋಜಿಸಿರುವ ತರಬೇತಿ ಶಿಬಿರದ ಪ್ರಯೋಜನ ಪ್ರತಿ ಯೊಬ್ಬ ಶಿಬಿರಾರ್ಥಿಯೂ ಪಡೆದುಕೊಳ್ಳಬೇಕು ಎಂದರು.

ಶಿಕ್ಷಣ ಇಲಾಖೆಯ ಜಿಲ್ಲಾ ಕ್ರೀಡಾ ಶಿಕ್ಷಣ ಪರಿವೀಕ್ಷಣಾಧಿಕಾರಿ ಮಧುಕರ ಎಸ್‌. ನಾಯಕ್‌, ಜಿಲ್ಲಾ ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ., ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ, ಕ್ಯಾಂಪ್‌ ಕಮಾಂಡ್‌ ಸ್ಟೀವನ್‌ ಪ್ರಕಾಶ್‌, ಘಟಕಾಧಿಕಾರಿಗಳಾದ ಸರಸ್ವತಿ ಮಣಿಪಾಲ, ಕುಮಾರ ಉಡುಪಿ ಹಾಗೂ ಲಕ್ಷ್ಮೀನಾರಾಯಣ ಕಾಪು ಉಪಸ್ಥಿತರಿದ್ದರು. ಡೆಪ್ಯೂಟಿ ಕಮಾಂಡೆಂಟ್‌ ರಮೇಶ್‌ ಸ್ವಾಗತಿಸಿದರು. ಸಾಯಿನಾಥ ಉದ್ಯಾವರ ನಿರೂಪಿಸಿದರು. ಜಿಲ್ಲಾ ಸೆಕಂಡ್‌ ಇನ್‌ ಕಮಾಂಡ್‌ ರಾಜೇಶ್‌ ಕೆ.ಸಿ. ಕುಂದಾಪುರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next