Advertisement

ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಅಗತ್ಯ

12:23 PM Feb 25, 2018 | |

ಮೈಸೂರು: ವಿದ್ಯಾರ್ಥಿಗಳು ರಾಷ್ಟ್ರೀಯ ಜೈವಿಕ, ವೈವಿಧ್ಯತೆ ಕಾಯ್ದೆಯಲ್ಲಿ ಸುಲಭವಾಗಿ ಸಂಶೋಧನೆಗಳನ್ನು ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುತ್ತಿದೆ ಎಂದು ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆ ಸಲಹೆಗಾರ ಡಾ.ಎಸ್‌.ಆರ್‌.ರಾವ್‌ ತಿಳಿಸಿದರು.

Advertisement

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಿದ್ದ ಜೀವವೈವಿಧ್ಯ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜೈವಿಕ ನಿರೀಕ್ಷೆಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜೀವ ವೈವಿಧ್ಯತೆಗೆ ಸಂಬಂಧಿಸಿದಂತೆ ಪ್ರಸ್ತುತ ಅಸ್ತಿತ್ವದಲ್ಲಿರುವ ಕಾಯ್ದೆ ಮತ್ತಷ್ಟು ಪ್ರಬುದ್ಧ ಆಗಬೇಕಿರುವುದು ನೋವಿನ ಸಂಗತಿ.

ಇದರಿಂದ ಯಾವುದೇ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ವಿಷಯದ ಪರಿಶೋಧನೆಗೆ ಸಂಪನ್ಮೂಲಗಳನ್ನು ಅನ್ವೇಷಿಸಲು, ಪ್ರತಿ ಭೇಟಿಗೂ ಅನುಮತಿ ತೆಗೆದುಕೊಳ್ಳಬೇಕಿದೆ. ಹೀಗಾಗಿ ಜೀವ ವೈವಿಧ್ಯ ಕ್ಷೇತ್ರದ ತಜ್ಞರು ಸಂಶೋಧನಾ ನೀತಿಗಳನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದಾಗ ಈ ಸಮಸ್ಯೆಯನ್ನು ಪರಿಹರಿಸಬಹುದು.

ಈ ನಿಟ್ಟಿನಲ್ಲಿ ತಜ್ಞರು ಪ್ರಯತ್ನ ಮಾಡುವ ಮೂಲಕ ಲಭ್ಯವಿರುವ ಸಂಪನ್ಮೂಲಗಳ ಅಂಕಿ-ಅಂಶಗಳನ್ನು ರೂಪಿಸಲು ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಗಮನವಹಿಸಬೇಕೆಂದು ಹೇಳಿದರು.

ಹಿಮಾಲಯದ ಪಶ್ಚಿಮ ಭಾಗ: ವಿಶ್ವದ ಶೇ.40 ಜನಸಂಖ್ಯೆ ಜೈವಿಕ ವೈವಿಧ್ಯತೆಯಲ್ಲಿ ಬೆಳೆಯಲಿದೆ. ಹೊಸ ಆಚರಣೆಗಳೊಂದಿಗೆ ಸಂಪ್ರದಾಯಶೀಲ ವಿಧಾನಗಳನ್ನು ಮಿಶ್ರಣ ಮಾಡಲು ಜಾಗತಿಕವಾಗಿ ಆಲೋಚಿಸುವ ಜತೆಗೆ ಸ್ಥಳೀಯವಾಗಿ ಕಾರ್ಯ ನಿರ್ವಹಿಸಬೇಕಿದೆ.

Advertisement

ದೇಶದಲ್ಲಿ ಪ್ರಬಲ ಅಧಿಕಾರ ಹೊಂದಿದ್ದ ಮೊಘಲರು ಹಾಗೂ ಬ್ರಿಟಿಷರು ದೇಶದ ಸಂಪತ್ತಿನ ಲೂಟಿ ಮಾಡಲು ದೇಶದ ನೈಸರ್ಗಿಕ ಸಂಪನ್ಮೂಲಗಳು, ಪಶ್ಚಿಮ ಘಟ್ಟದ ಔಷಧೀಯ ಸಂಪನ್ಮೂಲಗಳು ಹೆಚ್ಚಿನ ಪ್ರಭಾವ ಬೀರಿದ್ದವು. ಇದರಿಂದ ಅವರು ಹಿಮಾಲಯದ ಪಶ್ಚಿಮ ಭಾಗವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಾವು ಇದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡಬೇಕಿದೆ ಎಂದರು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಮಾತನಾಡಿ, ಔಷಧೀಯ ವಿಷಯಗಳ ಬಗ್ಗೆ ಸಂಶೋಧನೆ ನಡೆಸುವುದು ವಿಜ್ಞಾನಿಗಳಿಗೆ ಸವಾಲಿನ ಸಂಗತಿಯಾಗಿದೆ. ಇದರ ನಡುವೆಯೂ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯುವಕರು ನ್ಯಾಯಸಮ್ಮತವಾಗಿ ದೊರೆಯುವ ಅವಕಾಶಗಳ ಬಳಕೆಗೆ ಹಿಂಜರಿಯಬಾರದು. ಕ್ಯಾನ್ಸರ್‌ ಕಾಯಿಲೆಗೆ ನೀಡುವ ಆಯುರ್ವೆàದ ಚಿಕಿತ್ಸೆಗಾಗಿ ಶೇ.40-50 ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಲಾಗಿದೆ ಎಂದು ಹೇಳಿದರು.

ಪ್ರೊ.ಎಸ್‌.ಎಸ್‌.ಪ್ರಕಾಶ್‌, ಮೈಸೂರು ವಿವಿ ವಿಜ್ಞಾನ ಭವನದ ಮುಖ್ಯ ಸಂಯೋಜಕ ಪ್ರೊ.ಜಿ.ಹೇಮಂತ್‌ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next