ಉಡುಪಿ: ಪಾರ್ಶ್ವವಾಯುವಿಗೆ (ಸ್ಟ್ರೋಕ್) ಒಳಗಾದವರ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಚಿಕಿತ್ಸೆಯಲ್ಲಿ ಆಗಿರುವ ಆಧುನಿಕ ವಿಧಾನಗಳ ಕುರಿತು ಜನರು ಮಾಹಿತಿ ಪಡೆದುಕೊಂಡು ಜಾಗೃತರಾಗಬೇಕು. ಬೇಗನೆ ಆಸ್ಪತ್ರೆಗೆ ದಾಖಲಿಸಿದರೆ ಉತ್ತಮ ಚಿಕಿತ್ಸೆ ಸಾಧ್ಯ ಎಂದು ಮಣಿಪಾಲ ಕಸ್ತರ್ಬಾ ಆಸ್ಪತ್ರೆಯ ನ್ಯೂರೋಲಜಿ ವಿಭಾಗದ ಮುಖ್ಯಸ್ಥ ಡಾ| ಬ್ರಿಗೇಡಿಯರ್ ಶಂಕರ್ ಪ್ರಸಾದ್ ಗೋರ್ತಿ ಅವರು ಹೇಳಿದ್ದಾರೆ.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡಾ| ಟಿ.ಎಂ.ಎ ಪೈ ಸಭಾಂಗಣದಲ್ಲಿ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಪಾರ್ಶ್ವವಾಯು ಕುರಿತಾಗಿ ಜರಗಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನ್ಯಾರೊನಲ್ ಪ್ಲಾಸ್ಟಿಸಿಟಿ, ಸ್ಟೆಮ್‌ಸೆಲ್ ರಿಸರ್ಚ್, ಥಾÅಬಾಲಿಟಿಕ್ ಥೆರಪಿ, ಸ್ಟ್ರೋಕ್ ಇಂಟರ್‌ವೆನÒನ್ಸ್, ಮೆಕ್ಯಾನಿಕಲ್ ಥಾÅಂಬಾಕ್ಟಮಿ, ಸ್ಟ್ರೋಕ್ ಕ್ರಿಟಿಕಲ್ ಕೇರ್ ಮೊದಲಾದವುಗಳಲ್ಲಿ ನಡೆದಿರುವ ಹೊಸ ಸಂಶೋಧನಾ ವಿಚಾರಗಳ ಕುರಿತು ಪ್ರಮುಖ ವೈದ್ಯಕೀಯ ಸಂಸ್ಥೆಗಳು ಮತ್ತು ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್‌ನ ತಜ್ಞರು ಮಾಹಿತಿ ನೀಡಿದರು.
ವೈದ್ಯಕೀಯ ಕಾರ್ಯಾಗಾರವನ್ನು ಮಾಹೆ ಕುಲಪತಿ ಡಾ| ಎಚ್.ವಿನೋದ್ ಭಟ್ ಉದ್ಘಾಟಿಸಿದರು.
ಡೀನ್ ಡಾ| ಪ್ರಜ್ಞಾ ರಾವ್ ಮುಖ್ಯ ಅತಿಥಿಯಾಗಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಜಿ. ಮುತ್ತಣ ಮತ್ತು ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಅವರ ಮಾರ್ಗ ದರ್ಶನದಲ್ಲಿ ಕಾರ್ಯಾಗಾರ ಜರಗಿತು.
ಈ ಸಂದರ್ಭ ಏಮ್ಸ್‌ನ ಡಾ| ಕಾಮೇಶ್ವರ್ ಪ್ರಸಾದ್, ತಿರುವನಂತಪುರದ ಡಾ| ಶೈಲಜಾ ಪಿ.ಎನ್, ಚಂಡೀಗಢದ ಡಾ| ಧೀರಜ್ ಖುರಾನಾ, ಲುಧಿಯಾನಾದ ಡಾ| ಜೆಯರಾಜ್ ಪಾಂಡ್ಯನ್, ಹೊಸದಿಲ್ಲಿ ಅಪೋಲೋ ಆಸ್ಪತ್ರೆಯ ಡಾ| ವಿನಿತ್ ಸೂರಿ, ಬೆಂಗಳೂರು ಎಎಫ್ ಆಸ್ಪತ್ರೆಯ ಡಾ| ರವಿಯನ್ನದುರೈ, ಹೊಸದಿಲ್ಲಿಯ ಡಾ| ರಾಜ್ ಶ್ರೀನಿವಾಸ್, ಪುಣೆ ಜೆಹಂಗೀರ್ ಆಸ್ಪತ್ರೆಯ ಡಾ| ಆನಂದ್ ಅಲುರ್ಕರ್, ಅಹಮದಾಬಾದ್‌ನ ಡಾ| ಅರವಿಂದ್ ಶರ್ಮಾ ಮೊದಲಾದ ಖ್ಯಾತ ನರರೋಗ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಸ್ಟೆಮ್ ಸೆಲ್‌ಗಳ ಅಳವಡಿಕೆ: ವಿಶ್ವಾಸಪೂರ್ಣ
ಪಾರ್ಶ್ವವಾಯು ಚಿಕಿತ್ಸಾ ವಿಧಾನದಲ್ಲಿ ಸ್ಟೆಮ್ ಸೆಲ್‌ಗಳ ಅಳವಡಿಕೆ ಹೆಚ್ಚು ವಿಶ್ವಾಸಪೂರ್ಣವಾಗಿವೆ. ಸ್ಟ್ರೋಕ್ ಆದ ಸುಮಾರು ನಾಲ್ಕೂವರೆ ಗಂಟೆಗಳ ಒಳಗೆ ಇಂಟ್ರಾವೆನಸ್ ಥಾÅಂಬೆಕ್ಟಮಿ ವಿಧಾನದ ಮೂಲಕ ಚಿಕಿತ್ಸೆ ನೀಡಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆರವುಗೊಳಿಸಬಹುದು. ಒಂದು ವೇಳೆ ಸ್ಟ್ರೋಕ್ ಆಗಿ 16 ಗಂಟೆಗಳವರೆಗಿನ ಅವಧಿಯಾಗಿದ್ದರೆ ಮೆಕ್ಯಾನಿಕಲ್ ಥಾಬೆಕ್ಟಮಿ ವಿಧಾನವನ್ನು ಅನುಸರಿಸುವ ಮೂಲಕವೂ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆರವುಗೊಳಿಸಲು ಸಾಧ್ಯ. ಆದರೆ ಅತ್ಯಂತ ತುರ್ತಾಗಿ ಆಸ್ಪತ್ರೆಗೆ ದಾಖಲಾದರೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದೆ.
– ಡಾ| ಬ್ರಿಗೇಡಿಯರ್ ಶಂಕರ್ ಪ್ರಸಾದ್ ಗೋರ್ತಿ