Advertisement

‘ಮಾತೃಪೂರ್ಣ ಯೋಜನೆ ಪರಿಣಾಮಕಾರಿಯಾಗಿಸಿ’

10:32 AM Oct 28, 2017 | |

ಹಂಪನಕಟ್ಟೆ: ಸರಕಾರದ ಮಹತ್ವಾಕಾಂಕ್ಷಿ ಮಾತೃಪೂರ್ಣ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ
ಗೊಳಿಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕ ಅಭಯಚಂದ್ರ ಜೈನ್‌ ಸೂಚಿಸಿದ್ದಾರೆ. 

Advertisement

ತಾ. ಪಂ. ಆವರಣದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಮಂಗಳೂರು ತಾಲೂಕು ಪಂಚಾಯತ್‌
ತ್ತೈಮಾಸಿಕ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಡ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆ ಸದುಪಯೋಗ ಸಿಗುವಂತಾಗಲು ಅಧಿಕಾರಿಗಳು ಶ್ರಮಿಸಬೇಕು. ಈ ಕುರಿತು ಪ್ರಚಾರ ನಡೆಸಿ, ಗರ್ಭಿಣಿಯರಿಗೆ ಯೋಜನೆಯ ಉದ್ದೇಶ ತಿಳಿಸಬೇಕು ಎಂದರು.

ಸ್ಪಂದನೆ ಸಿಗುತ್ತಿಲ್ಲ
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಮಾತನಾಡಿ, ಮಾತೃಪೂರ್ಣ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಮಂಗಳೂರು ತಾಲೂಕಿನಲ್ಲಿ ಕೇವಲ ಶೇ. 8ರಿಂದ 10ರಷ್ಟು ಮಾತ್ರ
ಪ್ರಗತಿಯಾಗಿದೆ. ಮನೆಮನೆಗೆ ತೆರಳಿ ಯೋಜನೆ ಸದುಪಯೋಗ ಪಡೆಯಲು ಕೇಳಿಕೊಂಡರೂ ಯಾರೂ ಆಸಕ್ತಿ
ವಹಿಸುತ್ತಿಲ್ಲ ಎಂದರು.

ದಾಖಲೆ ನಾಪತ್ತೆ!
ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲವು ದಾಖಲೆಗಳು ಈ ಹಿಂದೆ ಕಾರ್ಕಳ ಹಾಗೂ ಮಂಗಳೂರು ತಾಲೂಕು ಕಚೇರಿಯಲ್ಲಿ ದೊರೆಯುತ್ತಿದ್ದವು. ಇತ್ತೀಚೆಗೆ ವಿವಿಧ ದಾಖಲೆಗಳು ನಾಪತ್ತೆಯಾಗಿದ್ದು, ಅಗತ್ಯ ದಾಖಲೆಗಳು ಸಿಗುತ್ತಿಲ್ಲ ಎಂದಾಗ, ಈ ಕುರಿತು ಗಮನ ಹರಿಸಲಾಗುವುದು ಎಂದು ತಹಶೀಲ್ದಾರ್‌ ಪ್ರತಿಕ್ರಿಯಿಸಿದರು.

Advertisement

ಕಟಾವು ಯಂತ್ರಗಳಿಗೆ ಪ್ರಸ್ತಾವನೆ
ರೈತ ಸಂಪರ್ಕ ಕ್ಷೇತ್ರಗಳಲ್ಲಿ ಕಟಾವು ಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಎರಡು ರೈತ ಸಂಪರ್ಕಕ್ಕೆ ತಲಾ ಎರಡೆರಡು ಕಟಾವು ಯಂತ್ರಗಳನ್ನು ತರಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಕಳುಹಿಸಿ. ಈ ಬಗ್ಗೆ ಕೃಷಿ ಸಚಿವರ ಜತೆ ಮಾತನಾಡುತ್ತೇನೆ ಎಂದು ಅಭಯಚಂದ್ರ ಜೈನ್‌ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಈ ಸಂಬಂಧ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಮೋನು, ಉಪಾಧ್ಯಕ್ಷೆ ಪೂರ್ಣಿ ಮಾ ಗಣೇಶ್‌ ಪೂಜಾರಿ, ಸ್ಥಾಯೀ ಸಮಿತಿ
ಅಧ್ಯಕ್ಷೆ ರೀಟಾ ಕುಟಿನ್ಹ, ತಾಪಂ ಪ್ರಧಾನ ಇಒ ಸದಾನಂದ ಜಿ. ಉಪಸ್ಥಿತರಿದ್ದರು.

ಅರ್ಜಿ ತಿರಸ್ಕರಿಸಬೇಡಿ
94 ಸಿ ಮತ್ತು 94 ಸಿಸಿ ನಮೂನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಲ್ಲಿ ಅನೇಕರಿಗೆ ಇನ್ನೂ ಹಕ್ಕುಪತ್ರ ಸಿಗದಿರುವ ಬಗ್ಗೆ ದೂರುಗಳು ಬಂದಿವೆ. ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಸಂಬಂಧಪಟ್ಟ ಕುಟುಂಬಕ್ಕೆ ಹಕ್ಕುಪತ್ರ ನೀಡುವ ಬಗ್ಗೆ ಸಂಬಂಧಿಸಿದ ತಹಶೀಲ್ದಾರರು ಪ್ರಯತ್ನಿಸಬೇಕು. ಅರ್ಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು ಎಂದು ಅಭಯಚಂದ್ರ ಜೈನ್‌ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next