Advertisement

ಕುಸಿದು ಬೀಳುತ್ತಿದೆ ಶೈಕ್ಷಣಿಕ ಗುಣಮಟ್ಟ

01:08 PM Jun 05, 2017 | |

ದಾವಣಗೆರೆ: ಇತ್ತೀಚಿನ ವರ್ಷದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿದು ಬೀಳುತ್ತಿದೆಯೇನೋ ಎಂದೆನಿಸುತ್ತಿದೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಡಾ| ಎಚ್‌.ವಿ. ವಾಮದೇವಪ್ಪನವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಯಂತೆ ಹೊಟ್ಟೆಪಾಡಿನ ವೃತ್ತಿಯಲ್ಲ. ಅತ್ಯಂತ ಜವಾಬ್ದಾರಿಯುತ, ಆತ್ಮತೃಪ್ತಿ ನೀಡುವ ಮೌಲ್ಯಯತ ವೃತ್ತಿ. ಆದರೆ, ಈಚೆಗೆ ಶಿಕ್ಷಕ ವೃತ್ತಿಯು ಹೊಟ್ಟೆಪಾಡಿನ ವೃತ್ತಿಯಂತಾಗುತ್ತಿರುವುದು ದುರಾದೃಷ್ಟಕರ ಎಂದು ವಿಷಾದಿಸಿದರು.

 ತಾವು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ತೀನಂಶ್ರೀ, ಎಚ್‌. ದೇವಿರಪ್ಪ, ಪ್ರೊ. ಡಿ.ಎಲ್‌. ನರಸಿಂಹಾಚಾರ್‌ ಅವರಂತಹ ಶಿಕ್ಷಕರು ಇದ್ದರು. ಅವರಂಥಹ ದಿಗ್ಗಜರ ಮಧ್ಯೆ ಓದುವ ಸೌಭಾಗ್ಯ ತಮ್ಮದಾಗಿತ್ತು.  ಆದರೆ, ಈಗ ಅಂತಹ ದಿಗ್ಗಜ ಶಿಕ್ಷಕರು ಕಂಡು ಬರುತ್ತಲೇ ಇಲ್ಲ ಎಂದು ತಿಳಿಸಿದರು. 

ಶಿಕ್ಷಕರು ಒಳಗೊಂಡಂತೇ ಯಾರಿಯೇ ಆಗಲಿ ಎಲ್ಲವನ್ನೂ ತಿಳಿದುಕೊಂಡರಲಿಕ್ಕೆ ಸಾಧ್ಯವಿಲ್ಲ. ಶಿಕ್ಷಕರು ಸಹ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ, ಗೊತ್ತು ಇಲ್ಲದಿದ್ದರೂ ಗೊತ್ತಿದೆ ಎನ್ನುವಂತೆ ಇರುವುದು ಸರಿಯಲ್ಲ. ಶಿಕ್ಷಕರು ವಿದ್ಯಾರ್ಥಿಗಳ ಕುತೂಹಲ ತಣಿಸುವಂತೆ, ಬೌದ್ಧಿಕ ವಿಕಾಸ ಆಗುವಂತೆ ಉದ್ಘೋವೇದಕ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು. 

ಡಾ| ಎಚ್‌.ವಿ. ವಾಮದೇವಪ್ಪ ಉತ್ತಮವಾದ ಶಿಕ್ಷಕರಾಗಿ ಅನುಪಮ ಸೇವೆ ಸಲ್ಲಿಸಿರುವ ಕಾರಣಕ್ಕೆ ಅಸಂಖ್ಯಾತ ಶಿಷ್ಯಂದಿರು, ಅಭಿಮಾನಿಗಳು ಒಡಗೂಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ವಾಮದೇವಪ್ಪ ನಿವೃತ್ತರಾಗಿದ್ದು ಅಡಕೆ ತೋಟ, ಹೊಲ ಮಾಡುವ ಬದಲಿಗೆ ವೃತ್ತಿ ಜೀವನಕ್ಕೆ ಅನುಗುಣವಾಗಿ ಸಂಶೋಧನೆ, ಬೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. 

Advertisement

ಸಮಾರಂಭ ಉದ್ಘಾಟಿಸಿದ ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಮಾತನಾಡಿ, ಶಿಕ್ಷಕರು ವಿಷಯದ ಬಗ್ಗೆ ಆಳವಾದ ಅಧ್ಯಯನ, ವಿದ್ಯಾರ್ಥಿ ಸಮುದಾಯದೊಡನೆ ಪೀÅತಿ ಹಾಗೂ ವೃತ್ತಿ ಬದ್ಧತೆಯ ಮೂಲಕ ಗುರುವಾಗಿ ಪರಿವರ್ತನೆ ಹೊಂದಬೇಕು.

ಶಿಕ್ಷಕರು ಕೊನೆಯವರೆಗೆ ಕಲಿಯುವ ವಿದ್ಯಾರ್ಥಿ ಆಗಿರಬೇಕು. ಶಿಕ್ಷಕರು ಸಮಾಜದ  ರಾತ್ರಿ ಕಾವಲುಗಾರರಾಗಿ ಕೆಲಸ ಮಾಡಬೇಕು. ಶಿಕ್ಷಕರು ಮೌಲ್ಯದೊಂದಿಗೆ ಬಾಳಬೇಕು. ಶಿಕ್ಷಕರ ವೈಯಕ್ತಿಕ ಮತ್ತು ವೃತ್ತಿ ಬದುಕು ತೆರೆದ ಪುಸ್ತಕದಂತೆ ತಾಧ್ಯಾತ್ಮತೆಯಿಂದ ಇರಬೇಕು ಎಂದು ತಿಳಿಸಿದರು. 

ಅಭಿನಂದನಾ ಗ್ರಂಥ ಮನೋಜ್ಞ ಬಿಡುಗಡೆ ಮಾಡಿದ ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಚ್‌.ಎ. ರಾಜಾಸಾಬ್‌ ಮಾತನಾಡಿ, ಡಾ| ಎಚ್‌.ವಿ. ವಾಮದೇವಪ್ಪನವರು ಸಾಮಾಜಿಕ ಬದ್ಧತೆಯಿಂದ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು. ಅಭಿನಂದನೆ ಸೀÌಕರಿಸಿ ಮಾತನಾಡಿದ ಡಾ| ಎಚ್‌.ವಿ. ವಾಮದೇವಪ್ಪ, ಯಾವುದೇ ಮಹತ್ತರ ಸಾಧನೆ ಮಾಡಿಲ್ಲ.

ಸರ್ವರ ಸಹಕಾರ, ನೆರವಿನಿಂದ ನನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು. ಶ್ರೀಮತ್‌ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್‌. ಜಯದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ| ಪ್ರಕಾಶ್‌ ಹಲಗೇರಿ ಅಭಿನಂದನಾ ನುಡಿಗಳಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next