Advertisement
ಹೌದು, ಚಿಂತಾಮಣಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ರಾಜಕೀಯ ಅದೃಷ್ಟ ಪಣಕ್ಕಿಟ್ಟು ಅಖಾಡಕ್ಕೆ ಬರೋಬ್ಬರಿ 70 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಆ ಪೈಕಿ ಕಣದಲ್ಲಿ ಒಟ್ಟಾರೆ 5 ಮಂದಿ ವೈದ್ಯರು, ಬಿ.ಎ., ಬಿಎಸ್‌ಸಿ ಹಾಗೂ ಬಿ.ಕಾಂ ಪದವಿ ಪಡೆದಿರುವ 5 ಮಂದಿ ಹಾಗೂ 4 ಮಂದಿ ಎಂಜಿನಿಯರಿಂಗ್, 3 ಮಂದಿ ವಕೀಲರು, ಪಿಯಸಿ, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ 8 ಮಂದಿ ಇದ್ದಾರೆ.
Related Articles
Advertisement
ಚಿಂತಾಮಣಿ: ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ 5ನೆ ಬಾರಿಗೆ ಸ್ಪರ್ಧಿಸಿರುವ ಡಾ.ಎಂ.ಸಿ.ಸುಧಾಕರ್ 1994 ರಲ್ಲಿ ಮಂಗಳೂರಿನ ಎಬಿ ಶೆಟ್ಟಿ ವಿಶ್ವ ವಿದ್ಯಾಲಯದಲ್ಲಿ ಎಂಡಿಎಸ್ (ದಂತ ವೈದ್ಯಕೀಯ ವಿಜ್ಞಾನ) ಮಾಡಿ ದ್ದಾರೆ. ಜೆಡಿಎಸ್‌ನಿಂದ ಹ್ಯಾಟ್ರಿಕ್ ಕನಸು ಹೊತ್ತು ಸ್ಪರ್ಧಿಸಿರುವ ಜೆ.ಕೆ.ಕೃಷ್ಣಾರೆಡ್ಡಿ ಎಸ್ಸೆಸ್ಸೆಲ್ಸಿ ಓದಿದ್ದರೆ, ಬಿಎಸ್‌ಪಿ ಅಭ್ಯರ್ಥಿ ಪಿ.ವಿ.ನಾಗಪ್ಪ, ಸಿವಿಲ್ ಎಂಜಿನಿಯರ್ ಆಗಿದ್ದಾರೆ, ಬಿಜೆಪಿ ಅಭ್ಯರ್ಥಿ ಜಿ.ಎನ್.ವೇಣು ಗೋಪಾಲ್ ಎಸ್ಸೆಸ್ಸೆಲ್ಸಿ ಓದಿದ್ದಾರೆ.
ಶಿಡ್ಲಘಟ್ಟ: ಕ್ಷೇತ್ರದಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿರುವ ಸೀಕಲ್ ರಾಮಚಂದ್ರಗೌಡ ಸಿವಿಲ್ ಎಂಜಿನಿಯರ್ ಆಗಿದ್ದಾರೆ. 1995 ರಲ್ಲಿ ಚಿಂತಾಮಣಿ ಸರ್ಕಾರಿ ಪಾಲಿ ಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಸಿವಿಲ್ ಓದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ರಾಜೀವ್‌ಗೌಡ ಬೆಂಗಳೂ ರಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ಪದವಿ ಕಾಲೇಜಿನಲ್ಲಿ ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್ ಓದಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪುಟ್ಟು ಅಂಜಿನಪ್ಪ ಬೆಂಗಳೂರಿನ ವಿವಿಪುರಂ ಕಾಲೇಜಿನಲ್ಲಿ 1999 ರಲ್ಲಿ ಬಿಎಸ್‌ಸಿ, 2001 ರಲ್ಲಿ ಎಂ.ಎಸ್ಸಿ ಪದವಿ ಪೂರೈಸಿದ್ದಾರೆ. ಜೆಡಿಎಸ್‌ನ ಬಿ. ಎನ್.ರವಿಕುಮಾರ್ ಮಳ್ಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 7ನೇ ತರಗತಿ ಓದಿದ್ದು, ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ವೆಂಕಟರಮಣಪ್ಪ ಪಿಯುಸಿ ಓದಿದ್ದಾರೆ.
ಬಾಗೇಪಲ್ಲಿ: ಕ್ಷೇತ್ರದಲ್ಲಿ ಸಿಪಿಎಂನಿಂದ ಸ್ಪರ್ಧಿಸಿರುವ ಡಾ.ಎ.ಅನಿಲ್ ಕುಮಾರ್ ರಾಜೀವ್‌ಗಾಂಧಿ ವಿಶ್ವವಿದ್ಯಾಲಯದಿಂದ 200 4ಲ್ಲಿ ಎಂಬಿಬಿಎಸ್ ಓದಿ ಬಳಿಕ ಜನರಲ್ ಸರ್ಜರಿ ಕೋರ್ಸ್ ಮಾಡಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಎಸ್.ಎನ್.ಸುಬ್ಟಾರೆಡ್ಡಿ ಗೂಳೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ 1983 ರಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ಕೂಡ ಬೆಂಗಳೂರಿನ ಸರ್ಜಾಪುರದ ಎಸ್‌ವಿಪಿ ಪ್ರೌ ಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣ ಆಗಿದ್ದು, ಎಎಪಿಯಿಂದ ಸ್ಪರ್ಧಿಸಿರುವ ಡಾ. ಮಧುಸೀತಪ್ಪ ಎಂಡಿ, ಎಂಎಸ್ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಿಥುನ್‌ರೆಡ್ಡಿ 9ನೇ ತರಗತಿ ಓದಿದ್ದಾರೆ.
ಗೌರಿಬಿದನೂರಲ್ಲಿ ವೈದ್ಯರೊಬ್ಬರು, ಪಧವೀದರರು ಇಬ್ಬರು: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 6ನೇ ಬಾರಿಗೆ ಸ್ಪರ್ಧಿಸಿರುವ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಹಾಲಿ ಶಾಸಕರು ಆಗಿರುವ ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಧಾರವಾಡ ಕೃಷಿ ವಿವಿಯಿಂದ ಬಿಎಸ್‌ಸಿ, ಎಜಿ ಪದವಿ ಪಡೆದಿದ್ದಾರೆ. ಕ್ಷೇತ್ರದ ಪ್ರಬಲ ಪಕ್ಷೇತರ ಅಭ್ಯರ್ಥಿ ಆಗಿರುವ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಗಳೂರಿನ ಪ್ರತಿಷ್ಟಿತ ಆರ್‌ಸಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರೈಸಿದ್ದಾರೆ.
ಇನ್ನೂ ಬಿಜೆಪಿ ಅಭ್ಯರ್ಥಿ ಡಾ.ಎಚ್.ಎಸ್. ಶಶಿಧರ್ ಎಂಬಿಬಿಎಸ್ ಓದಿದ್ದು ಬಳಿಕ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಸರ್ಜರಿ ಮಾಡಿದ್ದಾರೆ. ಕ್ಷೇತ್ರದ ಮತ್ತೂಬ್ಬ ಪಕ್ಷೇತರ ಅಭ್ಯರ್ಥಿ ಕೆಂಪರಾಜು ಬೆಂಗಳೂರಿನ ಜೋಗು ಪಾಳ್ಯದಲ್ಲಿ ಬಿಬಿಎಂಪಿ ವ್ಯಾಪ್ತಿಯ ಬಾಲಕರ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದಿದ್ದಾರೆ.
– ಕಾಗತಿ ನಾಗರಾಜಪ್ಪ