Advertisement

ಶಿಕ್ಷಣ ಸಂಸ್ಥೆಗಳು ಸಾಧಕರನ್ನು ಸೃಷ್ಟಿಸಲಿ

12:54 PM Jul 15, 2018 | Team Udayavani |

ಯಲಹಂಕ: ಶಿಕ್ಷಣ ಸಂಸ್ಥೆಗಳು ಹೊಸ ಸಾಧಕರು, ತತ್ವಜ್ಞಾನಿಗಳು, ವಿಜ್ಞಾನಿಗಳನ್ನು ಹುಟ್ಟು ಹಾಕುವಂತಾಗಬೇಕು ಎಂದು ವಿಧಾನಸಭೆ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ತಿಳಿಸಿದರು.

Advertisement

ರೇವಾ ವಿಶ್ವವಿದ್ಯಾಲಯದಲ್ಲಿ ಶನಿವಾರ ಕುವೆಂಪು ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ದೇಶಕ್ಕೆ ಮಾದರಿ. ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಅವರಂತಹ ಮಹಾಪುರುಷರನ್ನು ಸೃಷ್ಟಿಸಲು ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು ಎಂದರು.

ಯುವ ಜನತೆ ಮೇಲೆ ಸಿನಿಮಾ ಪ್ರಭಾವ ಹೆಚ್ಚಾಗುತ್ತಿದೆ. ದೇಶಕ್ಕಾಗಿ ಹೋರಾಟ ಮಾಡಿ ಕೊಡುಗೆ ನೀಡಿದವರನ್ನು ನಾವು ಹೆಚ್ಚಾಗಿ ಸ್ಮರಿಸಿಕೊಂಡು ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದರು. 

ವಿಧಾನಸಭೆ ಉಪಸಭಾಧ್ಯಕ್ಷ ಜೆ.ಕೆ.ಕೃಷ್ಟಾರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿದೆ ಎಂದು ತಿಳಿಸಿದರು. ರೇವಾ ವಿವಿ ಕುಲಾಧಿಪತಿ ಡಾ.ಪಿ.ಶಾಮರಾಜು, ವಿವಿಯ ಕುಲಪತಿ ಡಾ.ಎಸ್‌.ವೈ. ಕುಲಕರ್ಣಿ, ಮಾಜಿ ಕುಲಪತಿ ಡಾ.ಯು.ಜಿ.ತಳವಾರ, ಕುಲಸಚಿವ ಡಾ.ಎಂ.ಧನಂಜಯ, ಡಾ.ಬೀನಾ, ಡಾ.ಶುಭಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next