Advertisement

ಎಲ್‌ಐಸಿಯಿಂದ ಶೈಕ್ಷಣಿಕ ಸಮಾವೇಶ

06:38 AM Jan 15, 2019 | |

ಬೆಂಗಳೂರು: ಎಲ್ಲಾ ಭಾರತೀಯರ ಯೋಗಕ್ಷೇಮ ಕಾಪಾಡುವ ಮತ್ತು ನಾಗರಿಕರ ಭವಿಷ್ಯಕ್ಕೆ ಭದ್ರತೆ ಒದಗಿಸುವ ಸದುದ್ದೇಶ ಹಾಗೂ ಧ್ಯೇಯದೊಂದಿಗೆ ಸ್ಥಾಪನೆಯಾಗಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಸೇವೆ ಶ್ಲಾಘನೀಯ ಎಂದು ಸ್ವಾಮಿ ವೀರೇಶಾನಂದ ಸರಸ್ವತೀ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಅಖೀಲ ಭಾರತ ವಿಮಾ ಪ್ರತಿನಿಧಿಗಳ ಒಕ್ಕೂಟದ ಬೆಂಗಳೂರು ವಿಭಾಗ-2ರ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್‌ಐಸಿ ಪ್ರತಿನಿಧಿಗಳು ಜನರಿಗೆ ವಿಮೆ ಮಾಡಿಕೊಡುವ ಮೂಲಕ, ಅವರ ಭವಿಷ್ಯದ ಅಗತ್ಯಗಳಿಗಾಗಿ ಹಣ ಉಳಿತಾಯ ಮಾಡಿಸಿ, ಪರೋಕ್ಷವಾಗಿ ಜನರ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.

ವಾಗ್ಮಿ ಸುಧಾ ಬರಗೂರು, ಅಖೀಲ ಭಾರತ ವಿಮಾ ಪ್ರತಿನಿಧಿಗಳ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀನಿವಾಸಾಚಾರಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಸಿಂಗಾರಪು ಶ್ರೀನಿವಾಸ, ದಕ್ಷಿಣ ಕೇಂದ್ರ ವಲಯದ ಅಧ್ಯಕ್ಷ ರವೀಂದ್ರ ರೆಡ್ಡಿ, ಕಾರ್ಯದರ್ಶಿ ರಾಮಚಂದ್ರ, ಬೆಂಗಳೂರು ವಿಭಾಗ-2ರ  ಗೌರವಾಧ್ಯಕ್ಷ ನಾರಾಯಣಸ್ವಾಮಿ, ಅಧ್ಯಕ್ಷ ವಿ.ರವೀಂದ್ರನಾಥ್‌, ಕಾರ್ಯದರ್ಶಿ ಎಚ್‌.ಎಂ.ವಿರೂಪಾಕ್ಷಪ್ಪ, ಖಜಾಂಚಿ ಬಿ.ಎಸ್‌. ಪ್ರಕಾಶ್‌ ಹಾಗೂ ಪದಾಧಿಕಾರಿಗಳು, ಸಾವಿರಾರು ವಿಮಾ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next