Advertisement
ಈ ಪರಿಕಲ್ಪನೆಯಳ ಪ್ರಭಾವ ಮತ್ತು ಜ್ಞಾನಾರ್ಜನೆಗೆ ಭಾರತೀಯರು ನೀಡಿದ ಮಹತ್ವದ ಫಲವೇ ಭಾರತ ವಿಶ್ವ ಗುರು ಅನ್ನುವ ಪರಿಕಲ್ಪನೆ ಅಸ್ಥಿತ್ವಕ್ಕೆ ಬಂತು ಮತ್ತು ರಾಜರ ಕಾಲದಲ್ಲೂ ಅತಿ ಹೆಚ್ಚಿನ ಎಲ್ಲಾ ಸಂಸ್ಥಾನಗಳು ಶಿಕ್ಷಣಕ್ಕೆ ಮಹತ್ವ ಕೊಟ್ಟವು. ಆದರೆ ಇತಿಹಾಸ ಎಂದೂ ಸರಿ – ತಪ್ಪು, ಒಳಿತು – ಕೆಡುಕು, ನಾಶ – ಸೃಷ್ಟಿಗಳನ್ನು ಒಳಗೊಂಡಿರುತ್ತವೆ.
Related Articles
Advertisement
ವಿಶ್ವದ ಅತ್ಯಂತ ಹಳೆಯ ವಿಶ್ವವಿದ್ಯಾಯಗಳಲ್ಲಿ ಒಂದೆನಿಸಿರುವ ಹಾಗೂ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿರುವ ನಳಂದ 5ನೇ ಶತಮಾನದಲ್ಲಿ ಶಕ್ರಾದಿತ್ಯರಿಂದ ಸ್ಥಾಪಿತವಾದ ಇದು ಗುಪ್ತಾ ಸಾಮ್ರಾಜ್ಯದ ಅಡಿಯಲ್ಲಿ 700 ವರ್ಷಗಳಿಗೂ ಹೆಚ್ಚು ಹಾಗೂ ನಂತರ ಹರ್ಷ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಸುಮಾರು 12 ನೇ ಶತಮಾನದ ಅಂತ್ಯದವರೆಗೂ ಅಭಿವೃದ್ಧಿ ಹೊಂದಿತು.
2) ತಕ್ಷಶಿಲಾ ವಿಶ್ವವಿದ್ಯಾಲಯ ( ಪ್ರಸ್ತುತ ಪಾಕಿಸ್ತಾನದಲ್ಲಿದೆ) :
ತಕ್ಷಶಿಲಾ ವಿಶ್ವವಿದ್ಯಾಲಯವೂ ಮಹತ್ತರವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವಗಳ ಕಾರಣದಿಂದಾಗಿ ಇಂದು ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿದೆ. 10000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ, ಈ ದೊಡ್ಡದಾದ ಮತ್ತು ಭಾರತದ ಅತ್ಯಂತ ಪ್ರಾಚೀನ ಕಲಿಕಾ ಕೇಂದ್ರವು ಅಧ್ಯಯನಕ್ಕೆ ನೆಲೆಯಾಗಿತ್ತು.
3) ಸೋಮಪುರ ವಿಶ್ವವಿದ್ಯಾಲಯ (ಪ್ರಸ್ತುತ ಇದು ಬಾಂಗ್ಲಾದೇಶದಲ್ಲಿದೆ) :
ಸ್ಮಾರಕ ರೂಪದಲ್ಲಿರುವ ಬೌದ್ದ ಮಠವಾಗಿರುವ ಸೋಮಪುರ ವಿಶ್ವವಿದ್ಯಾಲಯವು ಪಾಲಾ ರಾಜವಂಶಕ್ಕೂ ಹಿಂದಿನದಾಗಿದ್ದು, ಇದನ್ನು 8 ನೇ ಶತಮಾನದಲ್ಲಿ ಧರ್ಮಪಾಲನು ನಿರ್ಮಿಸಿದನು. ಮಧ್ಯದಲ್ಲಿ ದೈತ್ಯ ಸ್ತೂಪವನ್ನು ಹೊಂದಿದೆ ಮತ್ತು ಸುಮಾರು 27 ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು.
4) ವಿಕ್ರಮಶಿಲಾ ವಿಶ್ವವಿದ್ಯಾಲಯ (ಬಿಹಾರ್) :
ನಳಂದ ವಿಶ್ವವಿದ್ಯಾಲಯದ ಕಲಿಸುವ ಗುಣಮಟ್ಟದಲ್ಲಿ ಕುಸಿತ ಕಂಡುಬಂದ ಪರಿಣಾಮವಾಗಿ ವಿಕ್ರಮಶಿಲಾ ಅಸ್ತಿತ್ವಕ್ಕೆ ಬಂತು. ಇದನ್ನೂ ಕೂಡಾ ಪಾಲಾ ಸಾಮ್ರಾಜ್ಯದ ಆಡಳಿತಗಾರ ಧರ್ಮಪಾಲಾನಿಂದ ನಿರ್ಮಿಸಲ್ಪಟ್ಟಿತು. ಈ ಮಠವು ಸುಮಾರು 100 ಕ್ಕೂ ಹೆಚ್ಚು ಶಿಕ್ಷಕರು ಮತ್ತು 1000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದು ನಳಂದಾಗೆ ಕಠಿಣ ಸವಾಲನ್ನು ನೀಡುತ್ತಿತ್ತು.
5)ಪುಷ್ಪಗಿರಿ ವಿಶ್ವವಿದ್ಯಾಲಯ(ಒಡಿಶಾ) :
ಪ್ರಾಚೀನ ಭಾರತದ ಇನ್ನೊಂದು ಕಲಿಕೆಯ ಕೇಂದ್ರವೆಂದರೆ ಅದು 3ನೇ ಶತಮಾನದಲ್ಲಿ ನಿರ್ಮಿತವಾದ ಪುಷ್ಪಗಿರಿ ವಿಶ್ವವಿದ್ಯಾಲಯ ಈ ವಿದ್ಯಾಲಯವು 12ನೇ ಶತಮಾನಗಳವರೆಗೆ ಅಭಿವೃದ್ದಿಯನ್ನು ಹೊಂದಿತ್ತು. ಆಯುರ್ವೇದ ಮತ್ತು ಔಷಧದ ಬಗ್ಗೆ ಸಂಶೋಧನೆಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದ್ದ ಅನೇಕ ಶಿಕ್ಷಕರು ಮತ್ತು ಅವರ ಶಿಷ್ಯರುಗಳಿಗೆ ನೆಲೆಯಾಗಿತ್ತು.
ಇಂತಹ ಅಮೂಲ್ಯ ರತ್ನಗಳು ದೇವಿ ಭಾರತಿಯ ಮುಕುಟಗಳಿಗೆ ವಜ್ರದ ಹರಳಿನಂತೆ ಶೋಭೆ ನೀಡುತ್ತಿದ್ದವು. ಅಂದು ಗುರು ಸಂಸೃಪ್ತನಾಗುವಂತೆ ವಿದ್ಯಾರ್ಥಿ ಸಕಲ ವಿದ್ಯಾಪಾರಂಗತನಾದರೆ ಸಾಕಿತ್ತು, ಅದರ ಜೊತೆಗೆ ಗುರುದಕ್ಷಿಣೆ ಮತ್ತು ವಿದ್ಯಾರ್ಥಿಯಾಗಿದ್ದಷ್ಟು ಕಾಲ ಅಲ್ಲಿ ತಾನು ದುಡಿಯುವ ದುಡಿಮೆಯೇ ದಕ್ಷಿಣೆಯಾಗಿತ್ತು. ಇಂದಿನ ವ್ಯಾಪಾರಿಕರಣ ನಾಚುವಂತಿದೆ ಅಂದಿನ ಶಿಕ್ಷಣ ಪರಂಪರೆಯ ಇತಿಹಾಸ.
- ದಿನೇಶ ಎಂ, ಹಳೆನೇರೆಂಕಿ.