Advertisement

ಅಸಮಾನತೆ ಸೃಷ್ಟಿಸುತ್ತಿರುವ ಶಿಕ್ಷಣ ವ್ಯವಸ್ಥೆ: ಪರಮೇಶ್ವರಪ್ಪ

07:39 AM Feb 12, 2019 | Team Udayavani |

ಹರಿಹರ: ಶೈಕ್ಷಣಿಕ ವ್ಯವಸ್ಥೆಯಲ್ಲಿನ ಅಸಮಾನತೆಯಿಂದ ನಾಗರಿಕ ಸಮಾಜದಲ್ಲೂ ಅಸಮಾನತೆ ಸೃಷ್ಟಿಯಾಗುತ್ತಿದೆ ಎಂದು ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ, ಕರ್ನಾಟಕ ಸಮರ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಂದೂರು ಪರಮೇಶ್ವರಪ್ಪ ಹೇಳಿದರು.

Advertisement

ಇಲ್ಲಿನ ಕೆ.ಆರ್‌. ನಗರದಲ್ಲಿ ನಡೆದ ಸಮರ ಸೇನೆಯ ಕಾರ್ಯಕರ್ತರ ಸೇರ್ಪಡೆ ಹಾಗೂ ಹುದ್ದೆ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕಡೆ ಸಂಪ್ರದಾಯಿಕ ಸರ್ಕಾರಿ ಶಾಲೆಗಳು ಮತ್ತೂಂದೆಡೆ ಸಿಬಿಎಸ್‌ಇ, ಐಸಿಎಸ್‌ಇ ಮುಂತಾದ ಶೈಕ್ಷಣಿಕ ವ್ಯವಸ್ಥೆ ರೂಪಿಸುವ ಮೂಲಕ ನಮ್ಮ ಸರ್ಕಾರಗಳೇ ಸಮಾಜದಲ್ಲಿ ಅಸಮಾನತೆ ಮೂಡಿಸುತ್ತಿವೆ ಎಂದು ಆರೋಪಿಸಿದರು.

ಶಿಕ್ಷಣ ವ್ಯಾಪಾರದ ಸರಕಾಗಿದೆ. ಶ್ರೀಮಂತರು ತಮ್ಮ ಮಕ್ಕಳಿಗೆ ಅತ್ಯುತ್ತಮ ಸಂಸ್ಥೆಗಳಲ್ಲಿ ಶಿಕ್ಷಣ ಕೊಡಿಸಿದರೆ ಬಡ ಮಕ್ಕಳಿಗೆ ಸರ್ಕಾರಿ ಶಾಲೆಗಳು ಅನಿವಾರ್ಯವಾಗಿವೆ. ಉಚಿತ ಮತ್ತು ಗುಣಾತ್ಮಕ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅಲ್ಲದೆ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಮೂಲಕ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸೇನೆಯ ರಾಜ್ಯ ಗೌರವಾಧ್ಯಕ್ಷ, ನಗರಸಭೆ ಸದಸ್ಯ ರೇವಣಸಿದ್ದಪ್ಪ, ಸಮಾನ ಶಿಕ್ಷಣ ಪದ್ಧತಿಯಿಂದ ಸಮಾಜದಲ್ಲಿ ತಾರತಮ್ಯ ಇಲ್ಲವಾಗುತ್ತದೆ ಎಂದರಲ್ಲದೆ ಕಾನೂನು, ಕಾಯಿದೆಗಳ ಅನುಷ್ಠಾನದ ಭಾಗವಾಗಿ ಸಂಘಟನೆಗಳು ಹೋರಾಡಬೇಕು ಎಂದರು.

ಪದಾಧಿಕಾರಿಗಳ ನೇಮಕ: ಎಸ್‌.ಅಬ್ದುಲ್‌ ಮಜೀದ್‌ (ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ), ವಿದ್ಯಾ ಮಂಜುನಾಥ್‌ (ಮಹಿಳಾ ಘಟಕದ ರಾಜ್ಯವಕ್ತಾರ), ಕವಿತಾ ಕುಬಸದ (ಹಾವೇರಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ), ಕೆ.ಯು. ಕುಬಸದ (ಹಾವೇರಿ ಜಿಲ್ಲಾ ಅಧ್ಯಕ್ಷ), ಪ್ರೇಮಲೀಲಾ (ರಾಜ್ಯ ಸಂಘಟನಾ ಕಾರ್ಯದರ್ಶಿ), ಪ್ರಜ್ವಲ್‌ (ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ), ಮಂಜುಳಾ (ಮಹಿಳಾ ಘಟಕದ ಕಾರ್ಯದರ್ಶಿ), ವಕೀಲರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮಾಲತೇಶ್‌ ನೇಮಕ ಮಾಡಲಾಯಿತು.

Advertisement

ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಾಸುದೇವ್‌ ಅಧ್ಯಕ್ಷೆತೆ ವಹಿಸಿದ್ದರು. ರಾಜ್ಯ ಪದಾಧಿಕಾರಿಗಳಾದ ಸಿದ್ದೇಶ ಕೋಟೆಹಾಳ್‌, ಉಮೇಶ ಪಾಟೀಲ್‌, ಜಿ.ಪಿ. ಪ್ರಕಾಶ, ದಾವಣಗೆರೆ ಜಿಲ್ಲಾಧ್ಯಕ್ಷ ಯೋಗೇಶ್‌, ಜಿಲ್ಲಾಧ್ಯಕ್ಷೆ ಲೀಲಾ ಮಾಗನಹಳ್ಳಿ , ಭಾಗ್ಯದೇವಿ, ಮಾಲಾ, ಮನು, ಲಕ್ಷ್ಮಿ, ಹರಿಣಿ, ಮಧುಮತಿ, ಪ್ರೇಮ, ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next