ಪದವಿ ಪರೀಕ್ಷೆಗಳ ಕೋರ್ಸ್‌ಗಳ ಪ್ರವೇಶ ಪರೀ ಕ್ಷೆ ಕುರಿತು ರಾಜ್ಯ ಸರಕಾರ ಈವರೆಗೆ ಯಾವುದೇ ಅಂತಿಮ ತೀರ್ಮಾನ ಅಥವಾ ನಿರ್ಧಾರ ಕೈಗೊಂಡಿಲ್ಲ. ಆದರೆ, ಈ ಬಗ್ಗೆ ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಯವರ ಅಭಿಪ್ರಾಯ, ಸಲಹೆ ಹಾಗೂ ಬೇರೆ ಬೇರೆ ಶೈಕ್ಷಣಿಕ ವೇದಿಕೆಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಗಮನಿಸಲಾಗಿದೆ.
ಪದವಿ ಪರೀಕ್ಷೆಗಳ ಕೋರ್ಸ್‌ಗಳ ಪ್ರವೇಶದಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ಆತಂಕ ಅನಗತ್ಯ. ಆ ರೀತಿ ಆಗಲು ಬಿಡುವುದೂ ಇಲ್ಲ. ಶಿಕ್ಷಣ ವಲಯದ ಸುಧಾರಣೆ ನಿಟ್ಟಿನಲ್ಲಿ ಸಕಾರಾತ್ಮಕ ಯೋಚನೆ ಅತಿ ಮುಖ್ಯ. ರಾಜ್ಯ ಸರಕಾರ ಸ್ಥಳೀಯರಿಗೆ ಅನ್ಯಾಯ ಆಗಲು ಬಿಡುವುದೂ ಇಲ್ಲ. ಯಾವುದೇ ಒಂದು ತೀರ್ಮಾನ ಕೈಗೊಳ್ಳಬೇಕಾದಾ ಗ ಸಾಕಷ್ಟು ಚರ್ಚೆ, ಸಮಾಲೋಚನೆಗಳ ಅನಂತರವಷ್ಟೇ ಜಾರಿ ಸಾಧ್ಯ.
ವೈದ್ಯ, ಎಂಜಿನಿಯರಿಂಗ್, ಆಯುಷ್ ಸೇರಿ ಕೇವಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಷ್ಟೇ ಸೀಮಿತವಾಗಿದ್ದ ಸಿಇಟಿ, ಇದೀಗ ಸಾಮಾನ್ಯ ಪದವಿ ಪರೀಕ್ಷೆಗಳಿಗೂ ಆರಂಭಿಸುವ ಸಂಬಂಧ ಇತ್ತೀಚೆಗಷ್ಟೇ ದೇಶದ ಎಲ್ಲ ವಿಶ್ವವಿದ್ಯಾನಿಲಯಗಳ ಕುಲಪತಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿರುವ ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಪ್ರತಿಪಾದಿಸಿದ್ದಾರೆ.
ಕಲಿಕೆಯಾಧಾರಿತ, ಚಟುವಟಿಕೆಯಾಧಾರಿತ ಮತ್ತು ಔದ್ಯೋಗಿಕ ಶಿಕ್ಷಣ ನೀಡುವುದಕ್ಕಾಗಿ ದೇಶದಲ್ಲಿಯೇ ಮೊದಲ ರಾಜ್ಯವಾಗಿ ಕರ್ನಾಟಕವು ರಾಷ್ಟ್ರೀ ಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ರಾಜ್ಯದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಾಗೂ ಶಿಕ್ಷಣದ ಅನಂತರ ವೃತ್ತಿಪರ ತರಬೇತಿ, ಕೌಶಲ ತರ ಬೇತಿ, ಉದ್ಯೋಗಾವಕಾಶಕ್ಕೆ ವೇದಿಕೆ ಕಲ್ಪಿಸುವುದು ಸೇರಿ ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡು ಮುನ್ನಡೆಯಲಾಗುತ್ತಿದೆ.
ನನ್ನ ಪ್ರಕಾರ,ಇಡೀ ದೇಶಕ್ಕೆ ಒಂದು ಪ್ರವೇಶ ಪರೀಕ್ಷೆ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇದೊಂದು ಒಳ್ಳೆಯ ಪರಿಹಾರ ಅನಿಸುತ್ತೆ. ಆದರೆ ಅದನ್ನು ಹೇಗೆ ಜಾರಿ ಮಾಡಬೇಕು ಎಂಬುದರ ಬಗ್ಗೆ ತಜ್ಞರ ಜತೆ ಚರ್ಚಿಸಲಾಗುವುದು. ಎಲ್ಲ ವಿವಿಗಳ ಕುಲಪತಿಗಳು, ಶಿಕ್ಷಣ ತಜ್ಞರು, ವಿಧಾನ ಪರಿಷತ್ತಿನ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಪ್ರತಿನಿಧಿಗಳ ಜತೆಗೆ ಚರ್ಚಿಸಿದ ಅನಂತರವಷ್ಟೇ ಅಂತಿಮ ತೀರ್ಮಾ ನಕ್ಕೆ ಬರಲಾಗುವುದು. ಪದವಿ ಕೋರ್ಸ್‌ಗಳ ಪ್ರವೇಶ ಕುರಿತೂ ಸಹ ಸದ್ಯದಲ್ಲೇ ಸಭೆ ಕರೆದು ಚರ್ಚಿಸಲಾಗುವುದು.
ಕೇಂದ್ರ ಸರಕಾರವು ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಸುಧಾರಣೆಗಳತ್ತ ಹೆಜ್ಜೆ ಇಟ್ಟಿದೆ. ಅದಕ್ಕೆ ಪೂರವಾಗಿ ರಾಜ್ಯ ಸರಕಾರವೂ ಹಲವು ಕ್ರಮ ಕೈಗೊಂಡಿದೆ. ಆದರೆ ರಾಜ್ಯ ಸರಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆ ಯಾವುದೇ ತೀರ್ಮಾನ ಕೈಗೊಂಡರೂ ಅದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಪೂರ್ವಸಿದ್ಧತೆ ಹಾಗೂ ವಿದ್ಯಾರ್ಥಿಗಳ ಕಲಿಕಾ ದೃಷ್ಟಿ ಗಮನ ದಲ್ಲಿಟ್ಟುಕೊಂಡೇ ಕೈಗೊಳ್ಳಲಾಗುವುದು.
– ಡಾ| ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವರು